ಮೈಸೂರು

ಗೂಡ್ಸ್ ವಾಹನ ಮಗುಚಿ 25 ಮಂದಿಗೆ ಗಾಯ

Published On :

ಹುಣಸೂರು: ತಾಲೂಕಿನ ಕಟ್ಟೆಮಳಲವಾಡಿ- ಮಾಕೋಡು ಮುಖ್ಯರಸ್ತೆಯ ಮೋದೂರು ಗೇಟ್ ಬಳಿ ಗೂಡ್ಸ್ ವಾಹನ ಮಗುಚಿ ಬಿದ್ದು, ಕಾಲೇಜು ವಿದ್ಯಾರ್ಥಿಗಳು, ಚಾಲಕ ಸೇರಿದಂತೆ 25ಕ್ಕೂ ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬಹುತೇಕ ಗಾಯಗೊಂಡ ವಿದ್ಯಾರ್ಥಿಗಳು ಪಿರಿಯಾಪಟ್ಟಣ ತಾಲೂಕಿನ ರಾವಂದೂರು ಹೋಬಳಿಯ ವಿವಿಧ ಗ್ರಾಮದವರಾಗಿದ್ದಾರೆ. ಪಿರಿಯಾಪಟ್ಟಣ ತಾಲೂಕಿನ ಚನ್ನಂಗೆರೆಯಿಂದ ಬೆಳಗ್ಗೆ 6.30ಕ್ಕೆ ಹೊರಟ ಹುಣಸೂರು ಡಿಪೋ ಬಸ್ ತಾಲೂಕಿನ ಚಿಟ್ಟಕ್ಯಾತನಹಳ್ಳಿಯಲ್ಲಿ ಟೈರ್ ಪಂಚರ್ ಆಗಿತ್ತು. ಪರಿಣಾಮ ಪರೀಕ್ಷೆಗೆ ಬರಲು ಕಾತುರರಾಗಿದ್ದ ವಿದ್ಯಾರ್ಥಿಗಳು ಹುಣಸೂರು ಕಡೆಗೆ ಬರುತ್ತಿದ್ದ ಅದೇ ಗ್ರಾಮದ ಮಂಜುನಾಥ್ ಅವರಿಗೆ ಸೇರಿದ ಗೂಡ್ಸ್ ವಾಹನಕ್ಕೆ ಬಸ್ನಲ್ಲಿದ್ದ 40ಕ್ಕೂ ಹೆಚ್ಚು ಮಂದಿ ಹತ್ತಿದರು.
ಅತಿ ವೇಗದಿಂದ ಬರುತ್ತಿದ್ದ ವಾಹನ ಮೋದೂರು ಗೇಟ್ ಬಳಿಯ ಮಾಕೋಡು ಡಾಂಬರ್ ರಸ್ತೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿತ್ತು. ಪರಿಣಾಮ ವಾಹನದಲ್ಲಿದ್ದ ಎಲ್ಲರಿಗೂ ಪೆಟ್ಟಾಯಿತು. ದಾರಿ ಹೋಕರು ವಿವಿಧ ವಾಹನಗಳಲ್ಲಿ ಗಾಯಾಳುಗಳನ್ನು ಕರೆತಂದು ಹುಣಸೂರು ಆಸ್ಪತ್ರೆಗೆ ದಾಖಲಿಸಿದರು. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.