ಮಕ್ಕಳಿಗೆ ಒಳ್ಳೆಯದು ಕಲಿಸುವ ಜವಾಬ್ದಾರಿ ಪೋಷಕರದ್ದು
ಮೈಸೂರು: ಸಮಾಜದಲ್ಲಿ ಕೆಟ್ಟ ಸಂಗತಿಗಳು ಹೆಚ್ಚಿರುವಾಗ, ನಮ್ಮ ಮಕ್ಕಳಿಗೆ ಏನು ಕಲಿಸಬೇಕು ಎಂಬ ಜವಾಬ್ದಾರಿ ಪೋಷಕರ ಮೇಲಿದೆ ಎಂದು ರಂಗಾಯಣ ನಿರ್ದೇಶಕ ಎಚ್. ಜನಾರ್ದನ್ (ಜನ್ನಿ) ತಿಳಿಸಿದರು. ನಟನ ಸಂಸ್ಥೆಯು ಬೋಗಾದಿ ರಸ್ತೆಯ ಧ್ವನ್ಯಾಲೋಕದಲ್ಲಿ ಆಯೋಜಿಸಿದ್ದ ನಟನ ನಾಟಕೋತ್ಸವವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಹೆಚ್ಚು ಒಳ್ಳೆಯದನ್ನು ಕಲಿಸಲು ರಂಗಭೂಮಿಯಿಂದ ಮಾತ್ರ ಸಾಧ್ಯ. ಬೇರೆ ಯಾವ ಕಲ್ಮಶವೂ ಇಲ್ಲದೆ ಸಾವಯವ ಕೃಷಿಯಂತೆ ರಂಗಭೂಮಿ ಇದೆ ಎಂದರು. ರಂಗಭೂಮಿ ಮಕ್ಕಳ ಪಾಲಿಗೆ ಆಭರಣ ಇದ್ದಂತೆ. ಸಮಾಜದಲ್ಲಿ ಕೆಟ್ಟ ಸಂಗತಿಗಳೆ ಹೆಚ್ಚಿರುವ ಈ ಸಂದರ್ಭದಲ್ಲಿ ನಮ್ಮ ಮಕ್ಕಳಿಗೆ ಏನು ಕಲಿಸಬೇಕು ಎಂಬ ಜವಾಬ್ದಾರಿ ಪೋಷಕರ ಮೇಲಿದೆ. ರಂಗಭೂಮಿಯಿಂದ ಮಾತ್ರ ಹೆಚ್ಚು ಒಳ್ಳೆಯದನ್ನು ಕಲಿಸಲು ಸಾಧ್ಯ ಎಂಬುದನ್ನು ನಟನ ಸಂಸ್ಥೆ ನಿರೂಪಿಸಿದೆ ಎಂದರು. ರಂಗಭೂಮಿ ವಿಶ್ವ ಪಥದತ್ತ ಸಾಗುತ್ತಿದೆ. ಇಂದಿನ ಪ್ರೌಢ ವಯಸ್ಸಿನ ಮಕ್ಕಳು ಧ್ವನಿ ಕಳೆದುಕೊಂಡಿದ್ದಾರೆ. ಅವರಲ್ಲಿ ಅಪಸ್ವರ ಹೆಚ್ಚಾಗಿದೆ. ಆದರೆ ನಟನ ಸಂಸ್ಥೆಯಲ್ಲಿ ಇಂದು ಹಾಡಿದ ಮಕ್ಕಳು ಶೃತಿಬದ್ಧವಾಗಿ ಹಾಡಿದ್ದಾರೆ. ಯಾವ ಭೂಮಿಗೆ ಬರವಿದ್ದರೂ ರಂಗಭೂಮಿಗೆ ಬರ ಇಲ್ಲಎಂದು ಹೇಳಿದರು. ಕೆಪಿಎ ಉಪ ನಿರ್ದೇಶಕಿ ಹಾಗೂ ಸಾಹಿತಿ ಡಾ.ಧರಣಿದೇವಿ ಮಾಲಗತ್ತಿ, ಪ್ರಾದೇಶಿಕ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಟಿ.ಸಿ.ಪೂರ್ಣಿಮಾ ಮಾತನಾಡಿದರು. ನಟನ ಸಂಸ್ಥೆಯ ಮಂಡ್ಯ ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

