ಮೈಸೂರು

ಪಿಎಚ್.ಡಿ ಪಡೆದ ಅಂಧ ವಿದ್ಯಾರ್ಥಿನಿ

Published On :

ಮೈಸೂರು: ಪ್ರತಿಷ್ಠಿತ ಮೈಸೂರು ವಿವಿಯಿಂದ ಪ್ರತಿ ವರ್ಷ ಪಿಎಚ್.ಡಿ ಪಡೆವವರು ಎಷ್ಟೋ ಜನ ಇದ್ದರೂ ಈ ಬಾರಿ ಅಂಧ ವಿದ್ಯಾರ್ಥಿನಿಯೊಬ್ಬರು ಪಿಎಚ್.ಡಿ ಪಡೆಯುವ ಮೂಲಕ ವಿಶೇಷ ಮೆರೆದಿದ್ದಾರೆ. ದೈಹಿಕವಾಗಿ ಯಾವುದೇ ನ್ಯೂನತೆ ಇಲ್ಲದವರು ಪಿಎಚ್.ಡಿ ಪಡೆಯುವುದು ಸಾಮಾನ್ಯ. ಆದರೆ ಹುಟ್ಟು ಅಂಧರಾಗಿದ್ದು ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿ ಅದೇ ವಿಷಯದಲ್ಲಿ ಪಿಎಚ್.ಡಿ ಪಡೆದ ಏಕೈಕ ಅಂಧ ವಿದ್ಯಾರ್ಥಿನಿ ಕೀರ್ತಿಗೆ ಎಸ್.ಕಾವ್ಯಶ್ರೀ ಪಾತ್ರರಾಗಿದ್ದಾರೆ. ಈ ಹಿಂದೆ ಪುರುಷರಲ್ಲಿ ಒಂದಿಬ್ಬರು ಅಂಧ ವಿದ್ಯಾರ್ಥಿಗಳು ಪಿಎಚ್.ಡಿ ಪಡೆದಿದ್ದರು. ಕರ್ನಾಟಕದಲ್ಲಿ ಕೆಂಗಲ್ ಹನುಮಂತಯ್ಯ ಅವರ ತಂಡದಿಂದ ದಕ್ಷ ಆಡಳಿತ ಎಂಬ ವಿಷಯ ಕುರಿತು ಡಾ.ಮಿಡತಲ ರಾಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದ್ದ ಎಸ್.ಕಾವ್ಯಶ್ರೀ ಅವರ ಮಹಾಪ್ರಬಂಧವನ್ನು ಮೈಸೂರು ವಿವಿ ಅಂಗೀಕರಿಸಿ ಅವರಿಗೆ ರಾಜ್ಯಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ನೀಡಿದೆ. 2009 ರಲ್ಲಿ ಮಹಾಪ್ರಬಂಧ ಬರೆಯಲು ಆರಂಭಿಸಿದ್ದ ಕಾವ್ಯಶ್ರೀ 26.12.2013 ರಂದು ಮೈಸೂರು ವಿವಿಗೆ ಸಲ್ಲಿಸಿದ್ದರು. ಇದೀಗ ಪಿಎಚ್.ಡಿ ಘೋಷಣೆಯಾಗಿದೆ. ಬ್ರೈಲ್ ಲಿಪಿ ಬಳಸದೆ ಅಭಿವೃದ್ಧಿಗೊಂಡ ಅತ್ಯಾಧುನಿಕ ಜಾಸ್ (ಜೆಎಎಸ್ಎಸ್) ತಂತ್ರಾಂಶ ಬಳಸಿ ಈ ಸಾಧನೆ ಮಾಡಿದ್ದಾರೆ. ವಿಜಯನಗರ ನಿವಾಸಿ ನಿವೃತ್ತ ವಾಣಿಜ್ಯ ತೆರಿಗೆ ನಿರೀಕ್ಷಕ ಬಿ. ಸಿದ್ದರಾಮು ಹಾಗೂ ಮೀನಾಕ್ಷಿ ಅವರ ಪುತ್ರಿ ಕಾವ್ಯಶ್ರೀ.


ಆರೋಗ್ಯ ತಪಾಸಣೆ ಶಿಬಿರ
ಮೈಸೂರು: ಅಗಸ್ತ್ಯ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು ಆಯೋಜಿಸಿದ್ದ ಆರೋಗ್ಯ ತಪಾಸಣೆಯ ಉಚಿತ ಶಿಬಿರ ಯಶಸ್ವಿಯಾಯಿತು. ಕೃಷ್ಣಮೂರ್ತಿಪುರಂ ಶ್ರೀರಾಮ ಮಂದಿರದಲ್ಲಿ ನಡೆದ ಈ ತಪಾಸಣಾ ಶಿಬಿರದಲ್ಲಿ ಸಂಘದ ಅಧ್ಯಕ್ಷ ಎಸ್. ರಾಮಕೃಷ್ಣ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಎಚ್.ವಿ. ರಾಜೀವ್ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಪಿ. ಶಶಿಧರ್, ಸಹಕಾರ ಸಂಘಗಳ ಸಹಾಯಕ ನಿಬಂಧಕ ಕೆ.ಎನ್. ಗೋಪಾಲಯ್ಯ ಮತ್ತಿತರರು ಆಗಮಿಸಿದ್ದರು. ಯಶಸ್ವಿನಿ ಯೋಜನೆಯಡಿ ನೋಂದಣಿಯಾದ ಗುರುತಿನ ಚೀಟಿ ವಿತರಿಸಲಾಯಿತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.