ವೀರಶೈವ ವಿದ್ಯಾರ್ಥಿಗಳಿಂದ ಅರ್ಜಿ
ಮೈಸೂರು: ಅಖಿಲ ಭಾರತ ವೀರಶೈವ ಮಹಾಸಭಾವು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿ ವೀರಶೈವ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಿದೆ. ಜು.20 ರೊಳಗೆ ಆಯಾ ತಾಲೂಕಿನ ವಿದ್ಯಾರ್ಥಿಗಳು ಸಂಬಂಧಿಸಿದ ತಾಲೂಕು ಸಮಿತಿ ಅಧ್ಯಕ್ಷರಿಗೆ ಅರ್ಜಿ ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಮೈಸೂರು ತಾಲೂಕು ವಿದ್ಯಾರ್ಥಿಗಳು ಮೊ. 9591944266, ನಂಜನಗೂಡು- 9448424659, ಪಿರಿಯಾಪಟ್ಟಣ- 9448274304, ಕೆ.ಆರ್.ನಗರ- 9742792487, ಹುಣಸೂರು- 9448774335, ಎಚ್.ಡಿ.ಕೋಟೆ- 9535736474 ಮತ್ತು ಟಿ.ನರಸೀಪುರ- 9448390921 ಸಂಪರ್ಕಿಸಬಹುದು.
ಪ್ರತಿಭಾ ಪುರಸ್ಕಾರ
ಮೈಸೂರು: ಕರ್ನಾಟಕ 24 ಮನೆ ತೆಲುಗು ಶೆಟ್ಟರ ಸಂಘವು ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ. 80ಕ್ಕಿಂತ ಹೆಚ್ಚು ಅಂಕಪಡೆದ ಜನಾಂಗದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಿದೆ. ಅರ್ಹರು ಇತ್ತೀಚಿನ ಭಾವಚಿತ್ರ, ಅಂಕಪಟ್ಟಿಯ ನಕಲು ಪ್ರತಿ, ಶಾಲಾ- ಕಾಲೇಜಿನ ವ್ಯಾಸಂಗದ ಪ್ರಮಾಣ ಪತ್ರ, ಸ್ವ- ವಿಳಾಸದೊಂದಿಗೆ ಜು.10 ರೊಳಗೆ ಸರಸ್ವತಿಪುರಂ 7ನೇ ಮುಖ್ಯರಸ್ತೆಯ ಸಂಘದ ಕಚೇರಿಗೆ ಸಲ್ಲಿಸಬೇಕು. ಮಾಹಿತಿಗೆ ಮೊ. 9945657496 ಸಂಪರ್ಕಿಸಬಹುದು.
ವಿದ್ಯಾರ್ಥಿಗಳಿಗೆ ಪುರಸ್ಕಾರ
ವಿಪ್ರ ಜಾಗೃತಿ ವೇದಿಕೆಯು ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ತ್ರಿಮತಸ್ಥ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಕೃ ಕನ್ಸಲ್ಟೆಂಟ್, ನಂ. 1111/6ಎ, ಎಫ್-7/4, 1ನೇ ಮೇನ್, 1ನೇ ಕ್ರಾಸ್, ವಿದ್ಯಾರಣ್ಯಪುರಂ, ಮೈಸೂರು ಇಲ್ಲಿ ಬೆಳಗ್ಗೆ 9 ರಿಂದ ಸಂಜೆ 6 ರವರೆಗೆ ಪಡೆದು, ಜು.15 ರೊಳಗೆ ಸಲ್ಲಿಸಹುದು. ಹೆಚ್ಚಿನ ಮಾಹಿತಿಗೆ ಮೊ. 9448601258 ಸಂಪರ್ಕಿಸಬಹುದು.
ಸದಸ್ಯ ಕಾರ್ಯದರ್ಶಿಗಳ ನೇಮಕ
ಮೈಸೂರು: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸ್ಥಾನಕ್ಕೆ ದಿನೇಶ್ ಹೆಗ್ಡೆ ಅವರನ್ನು ನೇಮಿಸಿ ರಾಜ್ಯ ಹೈಕೋರ್ಟ್ ಆದೇಶಿಸಿದೆ. ಕಾನೂನು ಸೇವಾ ಪ್ರಾಧಿಕಾರದ ವತಿಯಿಂದ ಜನರಿಗೆ ತಮ್ಮ ಹಕ್ಕುಗಳ ತಿಳಿವಳಿಕೆ ಮೂಡಿಸಲು ಮತ್ತು ರಕ್ಷಣೆ ಪಡೆಯುವ ಬಗ್ಗೆ ಕಾನೂನು ಅರಿವು- ನೆರವು ಶಿಬಿರ ನಡೆಸುವುದು ಉದ್ದೇಶವಾಗಿದೆ. ತಮ್ಮ ವ್ಯಾಜ್ಯಗಳನ್ನು ಶೀಘ್ರ ರೀತಿಯಲ್ಲಿ ವಿಲೇವಾರಿ ಮಾಡುವ ಬಗ್ಗೆ ಕಾನೂನಿನ್ವಯ ರಾಜಿ ಮಾಡಬಹುದಾಗಿದೆ. ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳು ಮತ್ತು ಇನ್ನೂ ನ್ಯಾಯಾಲಯಕ್ಕೆ ದಾಖಲು ಮಾಡಬೇಕಾಗಿರುವ ವ್ಯಾಜ್ಯಪೂರ್ವ ಪ್ರಕರಣಗಳನ್ನು ಜನತಾ ನ್ಯಾಯಾಲಯದ ಮೂಲಕ ಉಚಿತವಾಗಿ ಇಥ್ಯರ್ಥಪಡಿಸಲಾಗುತ್ತದೆ.
ನ್ಯೂ ವರ್ಕ್ ಸಿಸ್ಟಂ ಪರಿಚಯ
ಮೈಸೂರು: ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ವತಿಯಿಂದ ನ್ಯೂ ವರ್ಕ್ ಸಿಸ್ಟಂ ಅನ್ನು ಬಿಡುಗಡೆ ಮಾಡಿದ್ದು, ಸಂಸ್ಥೆಯ ಮಾರಾಟಗಾರರಿಗೆ ಟ್ಯಾಬ್ಲೆಟ್ಗಳನ್ನು ವಿತರಿಸಲಾಗಿದೆ. ಇದು ಮೊಟ್ಟ ಮೊದಲ ಉಪಕ್ರಮವಾಗಿದ್ದು, ಹೊಸ ಕಾರ್ಯ ವ್ಯವಸ್ಥೆಯು ಏಜೆಂಟರ ಕಾರ್ಯಾಭ್ಯಾಸ ಮತ್ತು ಶಿಸ್ತು ನಿರ್ಮಾಣ, ಟ್ಯಾಬ್ಲೆಟ್ ಆಧಾರಿತ ಸಲಹಾ ಮಾರಾಟ ವ್ಯವಸ್ಥೆ ಹಾಗೂ ಗುಣಮಟ್ಟ ಮತ್ತು ಸ್ವಯಂಚಾಲಿತ ಕಚೇರಿ ನಿರ್ವಹಣಾ ವ್ಯವಸ್ಥೆ ಒಳಗೊಂಡಿದೆ. ರಾಜ್ಯದ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಬೆಳಗಾವಿ ಮತ್ತು ಮೈಸೂರು ನಗರಗಳಲ್ಲಿ ಜಾರಿಗೆಯಾಗಿದೆ. ಗ್ರಾಹಕರಿಗೆ ತಮ್ಮ ಅಗತ್ಯತೆಗಳಿಗೆ ನೆರವಾಗುವ ವಿಮಾ ಸೌಲಭ್ಯವನ್ನು ಈ ವ್ಯವಸ್ಥೆ ಶೀಘ್ರಗತಿಯಲ್ಲಿ ತಲುಪಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

