ಸಹ ಶಿಕ್ಷಕರ ಸಂಘದ ಚುನಾವಣೆ
ಮೈಸೂರು: ಕರ್ನಾಟಕ ರಾಜ್ಯ ಪ್ರೌಢಶಾಲಾ ಶಿಕ್ಷಕರ ಸಂಘದ ನಗರ ದಕ್ಷಿಣ ವಲಯ ಶಾಖೆಯ 2014-15 ರಿಂದ 2018-19ನೇ ಸಾಲಿನ ಚುನಾವಣೆಯು ಈ ಕೆಳಕಂಡ ವೇಳಾಪಟ್ಟಿಯಂತೆ ನಡೆಯಲಿದೆ. ಜು. 14 ರವರೆಗೆ ನಾಮಪತ್ರಗಳ ವಿತರಣೆ, ಜು. 14ರ ಸಂಜೆ 5ಕ್ಕೆ ಉಮೇದುವಾರಿಕೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ. ಸಂಜೆ 5ರ ನಂತರ ನಾಮಪತ್ರ ಪರಿಶೀಲನೆ, ಶೀಲನೆ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಣೆ. ಜು. 15ರ ಸಂಜೆ 4 ರವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆ ದಿನ. ಸಂಜೆ 5.30ಕ್ಕೆ ಅಂತಿಮವಾಗಿ ಕಣದಲ್ಲಿರುವವರ ಪಟ್ಟಿ. ಜು. 20ರಂದು ಲಕ್ಷ್ಮೀಪುರಂ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಚುನಾವಣೆ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಶಿಕ್ಷಕರು ಚುನಾವಣಾಧಿಕಾರಿಗಳಾದ ಬೋರೇಗೌಡ, ಮೊ. 9980220720 ಹಾಗೂ ಅಧ್ಯಕ್ಷ ಎನ್. ನಾಗರಾಜು, ಮೊ. 9448753565 ಸಂಪರ್ಕಿಸಬಹುದು.
ಮಕ್ಕಳ ಬೆಳವಣಿಗೆ ಕುರಿತು ನಾಳೆ ಪೋಷಕರಿಗೆ ಕಾರ್ಯಾಗಾರ
ಮೈಸೂರು: ದಿವ್ಯ ದೀಪ ಸೊಲ್ಯೂಷನ್ಸ್ ಮೈಂಡ್ ಮತ್ತು ಬಾಡಿ ಫಿಟ್ನೆಸ್ ಸೆಂಟರ್ ಸಂಸ್ಥೆಯು ಮಕ್ಕಳ ಸಂಪೂರ್ಣ ವ್ಯಕ್ತಿತ್ವದ ಬೆಳವಣಿಗೆಯಲ್ಲಿ ಪೋಷಕರ ಸಹನೆ ಕುರಿತು ಜು. 13ರ ಬೆಳಗ್ಗೆ 9ಕ್ಕೆ ರೋಟರಿ ಸಂಸ್ಥೆಯಲ್ಲಿ ಕಾರ್ಯಾಗಾರ ಆಯೋಜಿಸಿದೆ. ತಂದೆ- ತಾಯಿಗಳಿಗಾಗಿ ನಡೆಸುತ್ತಿರುವ ಈ ಕಾರ್ಯಕ್ರಮದಲ್ಲಿ ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಪೋಷಕರು ಭಾಗವಹಿಸುವರು. ಕಾರ್ಯಾಗಾರದಲ್ಲಿ ಮಕ್ಕಳು ಪ್ರಕೃತಿಯ ಕೊಡುಗೆ- ಪೋಷಕರು ಅವರ ನಿರ್ವಾಹಕರು ಮಾತ್ರ, ಮಕ್ಕಳ ಅಗಾಧ ಜ್ಞಾಪಕಶಕ್ತಿ ವೃದ್ಧಿಗಾಗಿ ಕೈಗೊಳ್ಳಬಹುದಾದ ತಂತ್ರ, ಮಕ್ಕಳ ಸುಪ್ತ ಮನಸ್ಸನ್ನು ಉದ್ಧೀಪನಗೊಳಿಸುವ ಕೌಶಲ್ಯತೆ, ಮಕ್ಕಳಲ್ಲಿ ಬೆಳೆಸುವಲ್ಲಿ ಪೋಷಕರ ಪಾತ್ರ, ಮಕ್ಕಳ ಚೈತನ್ಯ ಗುರುತಿಸುವಿಕೆ ಮತ್ತು ಅವುಗಳ ಬೆಳವಣಿಗೆ ನಿರ್ವಹಣೆ, ಯೌವ್ವನದ ಮಕ್ಕಳ ನಿರ್ವಹಣೆ ಮತ್ತು ಒತ್ತಡ ನಿರ್ವಹಣೆ ಕುರಿತು ಅರಿವು ಮೂಡಿಸುವುದಾಗಿ ಸಂಸ್ಥೆಯ ನಿರ್ದೇಶಕ ಡಾ. ವಸಂತಕುಮಾರ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಕಾರ್ಯಾಗಾರದ ಪರಿಚಯ ಕಾರ್ಯಕ್ರಮ ಜು. 12ರ ಸಂಜೆ 5.30ಕ್ಕೆ ರೋಟರಿ ಸಭಾಂಗಣದಲ್ಲಿ ನಡೆಯುವುದು ಎಂದರು. ನಿರ್ದೇಶಕಿ ತುನಜ, ಭಾರತಿ, ಶ್ರೀನಿವಾಸ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

