ಉಳ್ಳವರ ಪ್ರಗತಿಗೆ ಜಾಗತೀಕರಣ ಪೂರಕ: ಪ್ರೊ.ಶೇಖ್ ಅಲಿ ಅಭಿಮತ
ಮೈಸೂರು: ಜಾಗತೀಕರಣ ಕೇವಲ ಶ್ರೀಮಂತ ವರ್ಗದ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಮಂಗಳೂರು ಹಾಗೂ ಗೋವಾ ವಿವಿಯ ವಿಶ್ರಾಂತ ಕುಲಪತಿ ಪ್ರೊ.ಬಿ.ಷೇಕ್ ಅಲಿ ಹೇಳಿದರು.
ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಾಗತೀಕರಣ- ಭಾರತ ರಾಜಕೀಯದ ವಿವಿಧ ಒಲವುಗಳ ಅಸ್ತಿತ್ವ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಇಂದು ದೇಶದ ಪ್ರವಾಸೋದ್ಯಮ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಜಾಗತೀಕರಣದ ಪ್ರಭಾವ ಹೆಚ್ಚಾಗಿದ್ದು, ಇದರಲ್ಲಿ ಕರ್ತವ್ಯ ನಿರ್ವಹಿಸುವವರು ಬಹುತೇಕ ಶ್ರೀಮಂತ ವರ್ಗದವರೇ ಆಗಿದ್ದು, ಜನಸಾಮಾನ್ಯರಿಗೆ ಅವಕಾಶ ಕಡಿಮೆಯಿದೆ. ಇದರ ಪರಿಣಾಮವಾಗಿ ಶ್ರೀಮಂತ ವರ್ಗ ಶ್ರೀಮಂತರಾಗಿಯೇ, ಬಡವರು ಬಡವರಾಗಿಯೇ ಉಳಿಯುತ್ತಾರೆ ಎಂದರು.
ಜನರಿಗೆ ನೀತಿಗಳಿಗಿಂತ ತತ್ವಗಳ ಅವಶ್ಯಕತೆ ಹೆಚ್ಚಾಗಿದ್ದು, ಈ ನಿಟ್ಟಿನಲ್ಲಿ ವಿದ್ವಾಂಸರು ಒಬ್ಬರಿಗೊಬ್ಬರು ಕೊಂಕಿಸುವ ಬದಲು ಒಗ್ಗಟ್ಟಾಗಿ ತಮ್ಮ ಆಲೋಚನೆಗಳನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವುದು ಅವಶ್ಯಕ. ಇದಕ್ಕೆ ಪೂರಕವಾಗಿ ದೇಶದ ಎಲ್ಲ ವಿವಿಗಳು ಗುಣಮಟ್ಟದ ಶಿಕ್ಷಣ ನೀಡಲು ಮುಂದಾಗಬೇಕು ಎಂದು ತಿಳಿಸಿದರು.
ಪ್ರಾಧ್ಯಾಪಕ ಪ್ರೊ.ಮುಜಾಫರ್ ಅಸ್ಸಾದಿ ಮಾತನಾಡಿ, ಜಾಗತೀಕರಣದ ಪರಿಕಲ್ಪನೆಗಳು ಪಾಶ್ಚಾತ್ಯ ಮಾದರಿಯಾಗಿದ್ದು, ಅದಕ್ಕೆ ಪರ್ಯಾಯವಾಗಿ ದೇಸಿ ನೆಲೆಗಟ್ಟಿನಲ್ಲಿ ಹೊಸ ಪರಿಕಲ್ಪನೆಗಳ ಶೋಧ ಅವಶ್ಯಕ ಎಂದರು.
ಹೊಸ ಆಯಾಮ ಅಗತ್ಯ: ಜ್ಞಾನವೆಂಬುದು ವಿಶಾಲವಾದ ಪರಿಕಲ್ಪನೆ ಹೊಂದಿದ್ದು, ನಾವೆಲ್ಲ ಪಾಶ್ಚಾತ್ಯರ ಚಿಂತನೆಗಳ ಮೇಲೆ ಅವಲಂಬಿತರಾಗಿ ನಮ್ಮಲ್ಲಿರುವ ಜ್ಞಾನಕ್ಕೆ ಹೊಸ ರೂಪ ನೀಡದೇ ಅಲಕ್ಷ್ಯ ವಹಿಸಿದ್ದೇವೆ. ಇಂತಹ ಉತ್ತಮ ಪುಸ್ತಕಗಳ ಓದಿನಿಂದ ಜ್ಞಾನ ಪಡೆದು ಜಾಗತೀಕರಣದ ಪರಿಕಲ್ಪನೆಗೆ ಹೊಸ ಆಯಾಮ ನೀಡಬೇಕು ಎಂದು ತಿಳಿಸಿದರು.
ಕೃತಿ ಕುರಿತು ಮೈಸೂರು ವಿವಿಯ ಗಾಂಧಿಭವನದ ಉಪನ್ಯಾಸಕ ಡಾ.ಎನ್. ಸುಬ್ರಮಣ್ಯ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲ ಪ್ರೊ.ಎಸ್.ಆರ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆ ಅಧ್ಯಕ್ಷ ಎಚ್.ಎನ್. ನಾಗರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

