ಹುಣಸೂರು ಪುರಸಭೆ ನಗರಸಭೆಯಾಗಿಸಿ
ಹುಣಸೂರು: ಹುಣಸೂರು ಪುರಸಭೆಯನ್ನು ನಗರಸಭೆಯನ್ನಾಗಿಸಲು ಸರ್ಕಾರಕ್ಕೆ ಸಮರ್ಪಕ ದಾಖಲೆಗಳನ್ನು ಒದಗಿಸುವಲ್ಲಿ ತಾಲೂಕು ಅಧಿಕಾರಿಗಳ ನಿರ್ಲಕ್ಷ್ಯವೆ ಕಾರಣ ಎಂದು ಆರೋಪಿಸಿ ನಾಗರಿಕ ರಕ್ಷಣಾ ಸಮಿತಿ ಸದಸ್ಯರು ಪುರಸಭಾ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಸರ್ಕಾರದ ವಿರುದ್ಧ ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದ ವಿರುದ್ಧ ಪ್ರತಿಭಟನಾಕಾರರು ಧಿಕ್ಕಾರ ಕೂಗಿದರು. ಇದೇ ವೇಳೆ ಮಾತನಾಡಿದ ಪುರಸಭಾ ಸದಸ್ಯ ಸತೀಶ್‌ಕುಮಾರ್, ಹುಣಸೂರು ಪುರಸಭೆ ನಗರಸಭೆಯಾಗಲು ಬೇಕಾದ ಪ್ರಮುಖ ಅರ್ಹತೆಗಳಾದ 50 ಸಾವಿರಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿದೆ. ಅಲ್ಲದೇ, 10.38 ಚ.ಕಿ.ಮೀ ವ್ಯಾಪ್ತಿ ಹೊಂದಿದೆ. ನಿಗದಿಗಿಂತ ಹೆಚ್ಚಿನ ತೆರಿಗೆ ವಸೂಲಾಗುತ್ತಿದೆ. ಎಲ್ಲ ಅರ್ಹತೆ ಹೊಂದಿದ್ದರೂ ಸ್ಥಳೀಯವಾಗಿರುವ ಅಧಿಕಾರಿಗಳು, ನೌಕರರು ನಗರಸಭೆಯಾದಲ್ಲಿ ವರ್ಗಾವಣೆಯಾಗಬೇಕಾಗುತ್ತದೆ ಎನ್ನುವ ಸ್ವಾರ್ಥದಿಂದ ಸಕಾಲದಲ್ಲಿ ಸರ್ಕಾರಕ್ಕೆ ಮಾಹಿತಿ ನೀಡದೆ ವಂಚಿಸಿದ್ದಾರೆಂದು ಆರೋಪಿಸಿದರು.
ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಜಗದೀಶ್, ಪುರಸಭಾಧ್ಯಕ್ಷೆ ವಹೀದಾಬಾನು, ಶಾಸಕರು ಈಗಾಗಲೆ ನಗರಸಭೆಯಾಗಿಸಲು ಎಲ್ಲ ಕ್ರಮ ವಹಿಸಿದ್ದು, ಶೀಘ್ರ ಘೋಷಣೆಯಾಗುವ ಲಕ್ಷಣಗಳಿವೆ ಎಂದು ಹೇಳಿದರು. ಪುರಸಭಾ ಸದಸ್ಯರಾದ ನಸ್ರುಲ್ಲಾ, ಶ್ರೀನಿವಾಸ್, ಮಹಮದ್ ಷಫಿ, ಶರವಣ, ಕೃಷ್ಣರಾಜಗುಪ್ತಾ, ಮಾಜಿ ಅಧ್ಯಕ್ಷ ಮಹಮದ್ ಪೀರ್, ಚಂದ್ರನಾಯ್ಕ, ವಕೀಲ ಪುಟ್ಟರಾಜು, ಮುಖಂಡರಾದ ಎಚ್.ಎಸ್. ಗೋವಿಂದನಾಯ್ಕ, ನಂಜಪ್ಪ, ಧರ್ಮರಾಜು, ಮುರುಗೇಶ್, ಶಂಷುದ್ದೀನ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

