ಮೈಸೂರು

ಸಾಂಕ್ರಾಮಿಕ ರೋಗ ತಡೆಗಟ್ಟಲು ಸಲಹೆ

Published On :

ಎಚ್.ಡಿ. ಕೋಟೆ: ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಗಟ್ಟಲು ಪಪಂ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಲು ಮುಂದಾಗುವಂತೆ ಸಿವಿಲ್ ನ್ಯಾಯಾಧೀಶ ಎಚ್. ಹನುಮಂತರಾಜು ಕರೆ ನೀಡಿದರು. ಪಟ್ಟಣದ ಅಂಬೇಡ್ಕರ್ ಭವನದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ಸರ್ಕಾರಿ ಅಭಿಯೋಜಕರು, ವಕೀಲರ ಸಂಘ ಹಾಗೂ ಪಪಂಯವರ ಸಹಯೋಗದಲ್ಲಿ ಕರ್ನಾಟಕ ಪುರಸಭೆ ಕಾಯ್ದೆ ಮತ್ತು ಜನನ-ಮರಣ ಪ್ರಮಾಣ ಪತ್ರ ಕುರಿತು ಕಾನೂನು ಅರಿವು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಡೆಂಘೀ, ಚಿಕನ್ಗುನ್ಯಾ, ಮಲೇರಿಯಾ ಸೇರಿದಂತೆ ಇತರೆ ರೋಗಗಳು ಅನೈರ್ಮಲ್ಯದಿಂದ ಹರಡುವ ಕಾಯಿಲೆಗಳಾಗಿದ್ದು, ಅಧಿಕಾರಿಗಳು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುವಂತೆ ತಾಕೀತು ಮಾಡಿದರು. ಪಪಂ ಅಸೆಸ್ಮೆಂಟ್, ಖಾತಾ, ತಿದ್ದುಪಡಿ ಮತ್ತಿರರ ಚಿಕ್ಕ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಅನೇಕ ಪ್ರಕರಣಗಳು ಇವೆ. ಆದರೆ ಇಂತಹ ಪ್ರಕರಣವನ್ನು ಪಪಂ ಅಥವಾ ಜಿಲ್ಲಾಧಿಕಾರಿಗಳ ಕಚೇರಿ ಮೂಲಕ ಬಗೆ ಹರಿಸಿಕೊಳ್ಳಬಹುದು. ಪಪಂ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಸಣ್ಣಪುಟ್ಟ ವಿಷಯಗಳಿಗೆ ನ್ಯಾಯಾಲದಯ ಮೆಟ್ಟಿಲು ಹತ್ತದಂತೆ ಕಿವಿ ಮಾತು ಹೇಳಿದರು.
ಪಪಂ ಉಪಾಧ್ಯಕ್ಷೆ ಕೆ.ಎಲ್. ಸುಹಾಸಿನಿ, ಸದಸ್ಯರಾದ ಸುಮಾ, ಎಚ್.ಸಿ. ನರಸಿಂಹಮೂರ್ತಿ, ವಿವೇಕಾನಂದ, ನಾಮ ನಿರ್ದೇಶನ ಸದಸ್ಯರಾದ ಜ್ಞಾನೇಶ್ವರಿ ಬಾಯಿ, ಲಕ್ಷ್ಮಣ್, ವಕೀಲರಾದ ಬಿ.ಎಸ್. ಸಂಗಮೇಶ್ವರ್, ಕೃಷ್ಣೇಗೌಡ, ಎಂ.ಎನ್. ರವಿಶಂಕರ್, ನಾರಾಯಣೇಗೌಡ, ಡಿ.ಆರ್. ಮಹೇಶ್, ಚೌಡಹಳ್ಳಿ ಜವರಯ್ಯ, ಮುಖಂಡರಾದ ಗುರುಸ್ವಾಮಿ, ಗೋವಿಂದಚಾರಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.