ಸತ್ಸಂಗದಿಂದ ಜ್ಯೋತಿ ಕಾಣಬಹುದು
ಕ.ಪ್ರ.ವಾರ್ತೆ ಮೈಸೂರು ಜೂ.4
ಸತ್ಸಂಗದಿಂದ ಪ್ರತಿಯೊಬ್ಬರಲ್ಲೂ ಜ್ಯೋತಿ ಕಾಣಬಹುದು ಎಂದು ನಿಜಗುಣ ಸತ್ಸಂಗ ಬಳಗದ ಸದಾಶಿವು ಹೇಳಿದರು.
ಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ನಡೆದ ಶಿವಾನುಭವ ದಾಸೋಹ ಮಾಲಿಕೆಯ 199ನೇ ಉಪನ್ಯಾಸದಲ್ಲಿ ಜ್ಯೋತಿ ಬೆಳಗುತ್ತಿಗೆ ಎಂಬ ವಿಷಯವಾಗಿ ಮಾತನಾಡಿದ ಅವರು, ವೇದ, ಉಪನಿಷತ್ತು, ಆಗಮನಗಳ ಸಾರವನ್ನು ಕನ್ನಡ ಧಾರ್ಮಿಕ ಗ್ರಂಥಗಳ ಮೂಲಕ ನಿಜಗುಣ ಶಿವಯೋಗಿಗಳು ಮುಮುಕ್ಷುಗಳಿಗೆ ನೀಡಿರುತ್ತಾರೆ. ಜ್ಞಾನಮಾರ್ಗದಿಂದ ಆಧ್ಯಾತ್ಮಿಕತೆ ಬೆಳೆಸಿಕೊಂಡು ಭಗವಂತನ ಸಾಕ್ಷಾತ್ಕಾರ ಪಡೆದಾಗ ಜೀವಿಗೆ ಮುಕ್ತಿ ಲಭಿಸುತ್ತದೆ ಎಂದು ತಿಳಿಸಿದರು.
ಇಂಡಿಯನ್ ಬ್ಯಾಂಕ್‌ನ ಮುಖ್ಯ ಪ್ರಬಂಧಕ ಎ.ಚನ್ನೇಶ್ವರಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂತಹ ಉಪನ್ಯಾಸಗಳು ಜನತೆಯನ್ನು ಸನ್ಮಾರ್ಗದಲ್ಲಿ ಕೊಂಡೊಯ್ಯುವುದರ ಜೊತೆಗೆ ಸಮಾಜದಲ್ಲಿ ಧಾರ್ಮಿಕತೆಯನ್ನು ಬಿತ್ತುತ್ತವೆ. ಜ್ಯೋತಿಯು ಕತ್ತಲನ್ನು ಹೋಗಲಾಡಿಸುವಂತೆ, ನಮ್ಮಲ್ಲಿರುವ ಅಜ್ಞಾನಾಂಧಕಾರ ಹೂರಹಾಕಲು ಈ ಕಾರ್ಯಕ್ರಮಗಳು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.
ಶಿವರಾತ್ರಿ ರಾಜೇಂದ್ರ ಕಲಾ ತಂಡದವರಿಂದ ಭಜನೆ ನಡೆಯಿತು. ಪ್ರೊ.ಪಿ.ಎಂ. ಮಹದೇವಸ್ವಾಮಿ ನಿರೂಪಿಸಿದರು. ನಗರ್ಲೆ ಶಿವಕುಮಾರ ಸ್ವಾಗತಿಸಿದರು. ಗುರುಬಸಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

