ಬೆಳೆಗಾರನ ಸಾವಿಗೆ ಮಂಡಳಿ ಹೊಣೆ ಅಲ್ಲ
ಹುಣಸೂರು: ತಂಬಾಕು ಬೆಳೆಗಾರ ರೈತ ನಾಗರಾಜು ಸಾವಿಗೆ ತಂಬಾಕು ಮಂಡಳಿ ಕಾರಣ ಅಲ್ಲ ಎಂದು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕರು ಸ್ಪಷ್ಟಪಡಿಸಿದ್ದಾರೆ. ಹುಣಸೂರು ತಾಲೂಕು ಮೇದೂರು ಪಿ.ಕೊಪ್ಪಲು ಗ್ರಾಮದ ನಾಗರಾಜು ಅಧಿಕೃತ ತಂಬಾಕು ಬೆಳೆಗಾರರಲ್ಲ. ಅವರ ತಾಯಿ ಕೆಂಪಮ್ಮ ತಂಬಾಕು ಲೈಸೆನ್ಸ್ ಪಡೆದಿದ್ದು, 13್ಢ13 ಅಳತೆಯ ತಂಬಾಕು ಬ್ಯಾರನ್ ಸಹ ಇದೆ. 2010-11 ರಲ್ಲಿ 547 ಕೆ.ಜಿ. 2011-12ರಲ್ಲಿ 379 ಕೆ.ಜಿ., 2012-13ರಲ್ಲಿ ಮಾರಾಟ ಮಾಡಿಲ್ಲ, 2013-14ರಲ್ಲಿ 317 ಕೆ.ಜಿ. ತಂಬಾಕು ಮಾರಿದ್ದಾರೆ. ವಾಸ್ತವವಾಗಿ 13್ಢ13 ಅಳತೆಯ ಸಿಂಗಲ್ ಬ್ಯಾರನ್ ಪಡೆದ ರೈತರು ಸುಮಾರು 1750 ಕೆ.ಜಿ ತಂಬಾಕು ಬೆಳೆಯಲು ಮತ್ತು ಮಾರಲು ಅಧಿಕೃತ ಪರವಾನಗಿ ಇರುತ್ತದೆ. ಆದರೆ ಕೆಂಪಮ್ಮ ಕಳೆದ 4 ವರ್ಷಗಳಿಂದ ಅಲ್ಪಪ್ರಮಾಣದಲ್ಲಿ ತಂಬಾಕು ಮಾರಿದ್ದಾರೆ. ವಾಸ್ತವವಾಗಿ ತಂಬಾಕು ಮಂಡಳಿ ಮಧ್ಯವರ್ತಿ ಮತ್ತು ದಲ್ಲಾಳಿಗಳನ್ನು ಹತ್ತಿಕ್ಕಲು ಹಾಗೂ ಉದ್ದೇಶ ಪೂರ್ವಕವಾಗಿ ಉತ್ಪಾದನಾ ನೀತಿ ಉಲ್ಲಂಘಿಸುವುದನ್ನು ತಪ್ಪಿಸಲು, ಹರಾಜು ಮಾರುಕಟ್ಟೆಯಲ್ಲಿ ತಂಬಾಕು ಮಾರಾಟ ಮಾಡುವ ವ್ಯವಸ್ಥೆ ಸರಿಪಡಿಸಲು ಶೇ.50 ರಷ್ಟು ತಂಬಾಕು ಮಾರಬೇಕು ಎಂದು ತಿಳಿಸಿದೆಯೇ ಹೊರತು ತಂಬಾಕು ಬೆಳೆಗಾರರಿಗೆ ತೊಂದರೆ ಕೊಡುವ ಉದ್ದೇಶ ಅಲ್ಲ ಎಂದು ತಿಳಿಸಿದ್ದಾರೆ. ರೈತರ ಪರವಾಗಿ ಮಂಡಳಿಯು ಬ್ಯಾಂಕ್ ಸಾಲ ಪಡೆದು ರಸಗೊಬ್ಬರ ಹಾಗೂ ಇತರೆ ಸವಲತ್ತು ವಿತರಿಸಿ ರೈತರು ಮಾರಿದ ತಂಬಾಕಿನಲ್ಲಿ ಸಾಲದ ಮೊತ್ತ ಹಿಡಿದುಕೊಳ್ಳಲಾಗುತ್ತದೆ. ಆದರೆ ಕೆಲವು ರೈತರು ಉದ್ದೇಶ ಪೂರ್ವಕವಾಗಿ ಕನಿಷ್ಠ ಶೇ.25 ರಿಂದ 50 ರಷ್ಟು ತಂಬಾಕನ್ನು ಮಾರಾಟ ಮಾಡದೆ ಇರುವುದರಿಂದ ಬ್ಯಾಂಕಿಗೆ ಸಾಲ ಮರುಪಾವತಿ ಮಾಡುವುದು ಕಷ್ಟ. ಕಮಲಮ್ಮ ಅವರು ಮಂಡಳಿಯ ಲೈಸೆನ್ಸ್ ನವೀಕರಣಕ್ಕೆ ಇದುವರೆಗೂ ನಿಗದಿತ ಅರ್ಜಿ ಸಲ್ಲಿಸಿಲ್ಲ ಮತ್ತು ರಸಗೊಬ್ಬರ ಖರೀದಿಗೂ ಮುಂಗಡ ಹಣ ಪಾವತಿಸಿಲ್ಲ ಎಂದು ಹೇಳಿದ್ದಾರೆ. ರೈತರ ಹಿತದೃಷ್ಟಿಯಿಂದ ತಂಬಾಕು ಮಂಡಳಿ ಶ್ರಮಿಸುತ್ತಿದೆ. ತಂಬಾಕು ಬೆಳೆಯದಿರುವುದು ಮತ್ತು ಮಾರಾಟ ಮಾಡದೆ ಇರುವುದು ಮೃತರ ಸಾವಿಗೆ ಕಾರಣವೆ ಹೊರತು ತಂಬಾಕು ಮಂಡಳಿ ಹೊಣೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

