ಬಡ ಜನರಿಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸಾ ಸೌಲಭ್ಯ: ಸುದರ್ಶನ್
ಟಿ. ನರಸೀಪುರ: ಬಡ ಜನರಿಗೆ ಗುಣಮಟ್ಟದ ಆರೋಗ್ಯ ಚಿಕಿತ್ಸಾ ಸೌಲಭ್ಯ ನೀಡಲು ಮುಂದಾಗಿರುವ ಪದ್ಮ ಮತ್ತು ಸುಂದರರಾಜನ್ ಪ್ರತಿಷ್ಠಾನದ ಕನಸು ಇದೀಗ ನನಸಾಗಿದ್ದು, ಈ ಭಾಗದ ಜನರಿಗೆ ಕಡಿಮೆ ಶುಲ್ಕದಲ್ಲಿ ಚಿಕಿತ್ಸಾ ಸೌಲಭ್ಯ ದೊರಕಲಿದೆ ಎಂದು ಪದ್ಮಶ್ರೀ ಪುರಸ್ಕೃತ ಡಾ.ಎಚ್. ಸುದರ್ಶನ್ ಹೇಳಿದರು. ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯಲ್ಲಿ ಪದ್ಮ ಹಾಗೂ ಸುಂದರರಾಜನ್ ಪ್ರತಿಷ್ಠಾನ ಸ್ಥಾಪಿಸಿರುವ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಷ್ಠಾನದ ಡಾ.ಎನ್.ಎಸ್. ಸುಂದರರಾಜನ್ ಅವರು ಬಡವರಿಗೆ ಕಡಿಮೆ ಶುಲ್ಕದಲ್ಲಿ ಉಚಿತ ಚಿಕಿತ್ಸಾ ಸೌಲಭ್ಯವನ್ನು ನೀಡುವ ಕ್ರಿಯಾ ಯೋಜನೆಗಾಗಿ ಅಮೆರಿಕದ ಕಾಲೇಜು ವಿದ್ಯಾರ್ಥಿಗಳ ತಂಡ ಕರೆಯಿಸಿ ಸಮೀಕ್ಷೆ ಮಾಡಿಸಿದ್ದಾರೆ. ಅವರ ಕನಸಿನ ಕೇಂದ್ರಕ್ಕೆ ಚಾಲನೆ ಸಿಕ್ಕಿದೆ ಎಂದರು. ಡಾ.ಜಿ. ನವೀನ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಆರ್.ವಿ. ಪ್ರಭಾಕರ್, ಡಾ.ಸಮೀರ ಸಿಂಹ, ಡಾ. ಅರುಣ್ ಸುಂದರರಾಜನ್, ಪಪಂ ಅಧ್ಯಕ್ಷೆ ರತ್ನಮ್ಮ, ಡಾ.ಆರ್.ಕೆ. ಚಂದ್ರನಾಥ್, ಸುಬ್ರಹ್ಮಣ್ಯಂ, ಪ್ರಸನ್ನಕುಮಾರ್, ಸಿದ್ದೇಶ್, ಸುಧೀಂಧ್ರ, ಎಂ. ಮಹದೇವ್, ಎಂ. ನಾಗರಾಜು ಇದ್ದರು.
ಪರಿಸರ ರಕ್ಷಣೆ ನಿರಂತರವಾಗಿರಲಿ: ಮುಖ್ಯ ಶಿಕ್ಷಕ ಕೆ.ಸಿ. ಧ್ರುವರಾಜು
ಕೆ.ಆರ್. ನಗರ: ಪರಿಸರ ದಿನಾಚರಣೆಯಂದು ಮಾತ್ರ ಪರಿಸರದ ಕಾಳಜಿ ವಹಿಸಿ ನಂತರ ನಿರ್ಲಕ್ಷ್ಯ ವಹಿಸಬಾರದು ಎಂದು ಮುಖ್ಯ ಶಿಕ್ಷಕ ಕೆ.ಸಿ. ಧ್ರುವರಾಜು ಹೇಳಿದರು. ತಾಲೂಕಿನ ಭೇರ್ಯ ಗ್ರಾಮದ ದಯಾನಂದ ಪ್ರೌಢಶಾಲಾ ಆವರಣದಲ್ಲಿ ನಡೆದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದ ಅವರು, ಮಳೆಗಾಲದಲ್ಲಿ ವಿದ್ಯಾರ್ಥಿಗಳು ಶಾಲೆಯ ಆವರಣ, ಮನೆಯಂಗಳ ಮತ್ತಿತರ ಸ್ಥಳಗಳಲ್ಲಿ ಗಿಡಗಳನ್ನು ನೆಡಬೇಕೆಂದರು. ಬಿ.ಎನ್. ಪ್ರಸನ್ನ, ಶಿಕ್ಷಕರಾದ ನರೇಂದ್ರ, ಗಿರೀಶ್, ಮಹದೇವ್, ಕೃಷ್ಣೇಗೌಡ, ಮುಖ್ಯ ಶಿಕ್ಷಕಿ ಜಯಮ್ಮ, ಸಹಶಿಕ್ಷಕರಾದ ದೊಡ್ಡಮೊಗೇಗೌಡ, ಕಲಾವತಿ, ಶಿವಪ್ಪ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

