ಮೈಸೂರು

ಸಮಯದ ಮಹತ್ವ ಅರಿಯಿರಿ

Published On :

ಮೈಸೂರು: ಪ್ರತಿಯೊಬ್ಬ ವಿದ್ಯಾರ್ಥಿ ಸಮಯದ ಮಹತ್ವ ಅರಿಯಬೇಕು ಎಂದು ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಸಹಪ್ರಾಧ್ಯಾಪಕ ಮೈಸೂರು ಕೃಷ್ಣಮೂರ್ತಿ ಹೇಳಿದರು.
ಮಹಾಜನ ಪದವಿಪೂರ್ವ ಕಾಲೇಜು ವತಿಯಿಂದ ಸಂಸ್ಥೆಯ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪುನಶ್ಚೇತನ ಸಮಾರಂಭ ಹಾಗೂ ಅತ್ಯುತ್ತಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಮಹಾಜನ ಸಂಸ್ಥೆಯು ಅನೇಕ ಕವಿ ಹಾಗೂ ಸಾಧಕರನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದೆ. ಇಂತಹ ಸಂಸ್ಥೆಯಲ್ಲಿ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ನಿಜಕ್ಕೂ ಪುಣ್ಯವಂತರು. ವ್ಯಾಸಂಗದ ಸಮಯದಲ್ಲಿ ಪರಿಶ್ರಮ ವಹಿಸಿ ಮುನ್ನಡೆ ಸಾಧಿಸಬೇಕು. ಕಾಲಹರಣ ಮಾಡದೆ ಸಮಯ ಪ್ರಜ್ಞೆಯ ಮಹತ್ವ ಅರಿತು ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು. ಯಾವುದೇ ವಿದ್ಯಾರ್ಥಿಗಳು ಭಯ ಹಾಗೂ ಆತಂಕ ಇರಿಸಿಕೊಂಡಾಗ ಏನ್ನನಾದರೂ ಸಾಧಿಸಲು ಸಾಧ್ಯವಾಗದು. ಆದ್ದರಿಂದ ಆತ್ಮವಿಶ್ವಾಸ ಇರಿಸಿಕೊಂಡು ತಮ್ಮ ಗುರಿಗಳ ಯಶಸ್ಸಿಗೆ ಪ್ರಯತ್ನ ಮಾಡಬೇಕು. ಇಂತಹ ಪುನಶ್ಚೇತನ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ಮಾತ್ರವಲ್ಲ, ಪ್ರತಿಯೊಬ್ಬ ವ್ಯಕ್ತಿಗೂ ಪ್ರತಿ ಹಂತದಲ್ಲೂ ಅವಶ್ಯಕ ಎಂದು ತಿಳಿಸಿದರು. 2013 -14ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿರುವ ಆರ್.ಮಾನಸ, ಎಂ.ಎಸ್. ಪವನ್, ಎನ್.ಮಂಜುನಾಥ್, ಜಿ.ಜೆ.ಅಪ್ಸರಾ, ಕೆ.ಎಸ್.ಅರುಣ್, ಮನ್ಸೂರ್ ಶರೀಫ್, ಎಚ್.ಎಸ್.ನಮ್ರತಾ, ವಿ. ದಿವ್ಯಾ, ಎಂ.ಮಂಜುಶ್ರೀ, ಪಿ.ಎಸ್. ಮನೋಜ್‌ಕುಮಾರ್, ಕೆ.ಅಭಿಷೇಕ್, ಸಿ.ದಿಪ್ತಿ, ಎನ್.ಅನುಷಾ ಹಾಗೂ ಎನ್. ಸರಸ್ವತಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಅಧ್ಯಕ್ಷ ಆರ್.ವಾಸುದೇವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಜಿ. ಕೃಷ್ಣಸ್ವಾಮಿ ಇದ್ದರು. ಉಪಪ್ರಾಂಶುಪಾಲ ಎ.ಎನ್. ಕೃಷ್ಣೇಗೌಡ ಪ್ರಾಸ್ತಾವಿಕ ಮಾತುಗಳಾಡಿದರು. ಎಂ.ಆರ್. ನಾಗವೇಣಿ ನಿರೂಪಿಸಿದರು. ಡಾ.ಜಯಮ್ಮಣ್ಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.