ಉದ್ಯೋಗ ಸೃಷ್ಟಿಗೆ ಕೈಗಾರಿಕೆ ಅವಶ್ಯ
ಮೈಸೂರು: ಯುವಜನತೆಗೆ ಉದ್ಯೋಗ ಸೃಷ್ಟಿಸಲು ಮೈಸೂರಿನಲ್ಲಿ ಕೈಗಾರಿಕೆಗಳ ಸ್ಥಾಪನೆ ಅವಶ್ಯಕ ಎಂದು ಎಸ್ಟಿಪಿಐ ಪ್ರಧಾನ ನಿರ್ದೇಶಕ ಡಾ.ಓಂಕಾರ್ ರೈ ಹೇಳಿದರು. ಭಾರತೀಯ ಕೈಗಾರಿಕೆಗಳ ಒಕ್ಕೂಟವು ಶುಕ್ರವಾರ ಏರ್ಪಡಿಸಿದ್ದ ಐಟಿ ಹಾಗೂ ಐಟಿಇಎಸ್ ಸಮಾವೇಶದಲ್ಲಿ ಎರಡನೇ ದರ್ಜೆ ನಗರದಲ್ಲಿ ಬದಲಾದ ಪ್ರಕೃತಿ, ಪ್ರಸ್ತುತ ಪ್ರವೃತ್ತಿ ಹಾಗೂ ಅವಕಾಶಗಳು ಎಂಬ ವಿಷಯ ಕುರಿತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ವಿದ್ಯುತ್ ಉಪಕರಣಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲು ನಾವು 300 ಬಿಲಿಯನ್ ಡಾಲರ್ ಬಂಡವಾಳ ಹೂಡಿಕೆ ಮಾಡಬೇಕಿದೆ. ಅದೇ ಉಪಕರಣಗಳನ್ನು ನಾವೇ ಉತ್ಪಾದಿಸಿಕೊಂಡರೆ ದೇಶದ 2.8 ಕೋಟಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಉದ್ಯೋಗ ಸೃಷ್ಟಿಸಬಹುದು. ಆದ್ದರಿಂದ ಈ ವಲಯದ ಬಗ್ಗೆ ಗಂಭೀರವಾಗಿ ಚಿಂತಿಸಬೇಕು ಎಂದರು. ಹೆಬ್ಬಾಳು ಕೈಗಾರಿಕಾ ಪ್ರದೇಶದ ಇನ್ಫೋಸಿಸ್ ಬಳಿ ಎಲೆಕ್ಟ್ರಾನಿಕ್ಸ್ ಉತ್ಪನ್ನಗಳ ಕೈಗಾರಿಕೆ ಸ್ಥಾಪಿಸಲು ಎಸ್ಡಿಪಿಐ ವತಿಯಿಂದ 25 ಕೋಟಿ ಬಂಡವಾಳ ಹೂಡಿ ಉದ್ದಿಮೆ ಸ್ಥಾಪನೆಗೆ ಮುಂದಾಗಿದೆ. ಅಂತೆಯೇ ಮೈಸೂರಿನ ಉದ್ಯಮಿಗಳು ಸಹ ಈ ಕ್ಷೇತ್ರದಲ್ಲಿ ಕೈಗಾರಿಕೆಗಳನ್ನು ಆರಂಭಿಸಲು ಮುಂದಾಗಬೇಕು ಎಂದು ತಿಳಿಸಿದರು. ಇನ್ಫೋಸಿಸ್ ಉಪಾಧ್ಯಕ್ಷ ಎಸ್.ಗೋಪಾಲ ಕೃಷ್ಣನ್ ಮಾತನಾಡಿ, ಬೆಂಗಳೂರು ನಗರದಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಸವಲತ್ತುಗಳು ದೊರೆಯದಿದ್ದರೆ ಜನರು ಸಹಜವಾಗಿ ಎರಡನೇ ಅತಿದೊಡ್ಡ ನಗರ ಮೈಸೂರಿಗೆ ಅನಿವಾರ್ಯವಾಗಿ ಬರುತ್ತಾರೆ. ಆದ್ದರಿಂದ ಇಲ್ಲಿಯೂ ಸಹ ಹೆಚ್ಚಿನ ಕೈಗಾರಿಕೆಗಳು ಹಾಗೂ ಶಾಲೆಗಳು ಮುಂತಾದವುಗಳನ್ನು ಅಭಿವೃದ್ಧಿಗೊಳಿಸಬೇಕು ಎಂದರು. ಎಸ್ಟಿಪಿಐ ನಿರ್ದೇಶಕ ಪಿ.ಕೆ.ದಾಸ್ ಮುಖ್ಯ ಅತಿಥಿಯಾಗಿದ್ದರು. ಸಿಐಐ ಮೈಸೂರು ಅಧ್ಯಕ್ಷ ಆರ್.ಸಿ ಜಗದೀಶ್ ಅಧ್ಯಕ್ಷತೆ ವಹಿಸಿದ್ದರು. ಸಂಚಾಲಕ ಮಹೇಶ್ ಸ್ವಾಗತಿಸಿದರು. ನಂತರ ನಡೆದ ಗೋಷ್ಠಿಯಲ್ಲಿ ತಜ್ಞರು ವಿಷಯ ಮಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

