ಪಡಿತರ ಅಕ್ರಮ ಖಂಡಿಸಿ ಪ್ರತಿಭಟನೆ
ಟಿ. ನರಸೀಪುರ: ಆಹಾರ ಪದಾರ್ಥಗಳನ್ನು ಪಡಿತರದಾರರಿಗೆ ವಿತರಿಸದೆ ಬಡವರ ಅನ್ನಭಾಗ್ಯವನ್ನೇ ಕಸಿದುಕೊಳ್ಳುತ್ತಿರುವ ತಾಲೂಕಿನ ಬಣವೆ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕತ್ವ ವಜಾಗೊಳಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಶನಿವಾರ ತಾಲೂಕು ಕಚೇರಿಯ ಆಹಾರ ಇಲಾಖೆ ಎದುರು ಪ್ರತಿಭಟಿಸಿದರು. ತಾಲೂಕು ಕಚೇರಿಯ ಸಮುಚ್ಚಯದಲ್ಲಿ ಜಮಾವಣೆಗೊಂಡ ಬಣವೆ ಗ್ರಾಮಸ್ಥರು ಆಹಾರ ಇಲಾಖೆ ಕಚೇರಿಗೆ ಮುತ್ತಿಗೆ ಹಾಕಿ ಸರ್ಕಾರಿ ನ್ಯಾಯಬೆಲೆ ಅಂಗಡಿ ಮಾಲೀಕ ಕಳೆದ 20 ವರ್ಷಗಳಿಂದಲೂ ಗ್ರಾಮದಲ್ಲಿ ಪಡಿತರ ಕಾರ್ಡುದಾರರಿಗೆ ಮಾಸಿಕ ಆಹಾರ ಪದಾರ್ಥಗಳನ್ನು ನ್ಯಾಯಯುತವಾಗಿ ನೀಡದೆ ನಿರಂತರವಾಗಿ ವಂಚಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಗ್ರಾಮದ ಮುಖಂಡ ಬಣವೆಕಾರ್ ಮಾತನಾಡಿದರು. ಮುಖಂಡರಾದ ಬಿ.ಎಂ.ಲಿಂಗರಾಜು, ಕೆಇಬಿ ನಂಜುಂಡ, ಬಿ.ಎಸ್.ಮಹೇಶ, ಮಾದೇಶ, ಸೋಮಶೇಖರ, ಮಹದೇವ, ನಂಜುಂಡಸ್ವಾಮಿ, ಮರಿಸ್ವಾಮಿ, ಮಹದೇವಯ್ಯ, ಚಿಕ್ಕಮಾಳಿಗಯ್ಯ, ಬೋಗನಂಜಯ್ಯ, ಸುರೇಶ, ಮಾಳಿಗಯ್ಯ, ಮಲ್ಲಣ್ಣ, ಮಾದಯ್ಯ, ದೇವರಾಜು, ಶಿವಮಲ್ಲು, ರಾಚಯ್ಯ, ರಂಜನ್ ಇದ್ದರು.
ಬನ್ನೂರಿಗೆ ಮಾದರಿ ರಸ್ತೆ
ಟಿ. ನರಸೀಪುರ: ತಾಲೂಕಿನ ಬನ್ನೂರು ಪಟ್ಟಣದ ಮುಖ್ಯ ರಸ್ತೆಯನ್ನು ಚತುಷ್ಪಥ ರಸ್ತೆಯನ್ನಾಗಿ ಅಭಿವೃದ್ಧಿಪಡಿಸುವ ಮೂಲಕ ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಬನ್ನೂರಲ್ಲಿ ಮಾದರಿ ರಸ್ತೆ ನಿರ್ಮಿಸುತ್ತಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ನ ಪ.ಪಂಗಡ ವಿಭಾಗದ ಅಧ್ಯಕ್ಷ ಬಿ.ಎಂ. ಸತೀಶ್ನಾಯಕ ಹೇಳಿದರು. ಬೆಳೆಯುತ್ತಿರುವ ಬನ್ನೂರು ಪಟ್ಟಣದಲ್ಲಿನ ಸಂಚಾರದ ದಟ್ಟಣೆ ಸಮಸ್ಯೆ ಸರಿಪಡಿಸಲು ಸಚಿವರು ಕೇಂದ್ರ ರಸ್ತೆ ನಿಧಿಯಿಂದ 26 ಕೋಟಿ ಅನುದಾನ ಮಂಜೂರು ಮಾಡಿದ್ದರಿಂದ ರಾಜ್ಯ ಹೆದ್ದಾರಿ 33ರ ಬನ್ನೂರು ರಸ್ತೆ ನಾಲ್ಕು ಪಥದ ರಸ್ತೆಯಾಗಿ ಪರಿವರ್ತನೆ ಆಗಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ಎಚ್.ಮಂಜುನಾಥ್ ಮಾತನಾಡಿ, ನರಸೀಪುರ ವಿಧಾನಸಭಾ ಕ್ಷೇತ್ರಕ್ಕೆ ಲೋಕೋಪಯೋಗಿ ಇಲಾಖೆಯಿಂದ 200 ಕೋಟಿ ಅನುದಾನವನ್ನು ಅಭಿವೃದ್ಧಿ ಕಾರ್ಯಕ್ರಮಗಳಿಗೆ ನೀಡಲಾಗಿದೆ ಎಂದು ಹೇಳಿದರು. ಬನ್ನೂರು ಪುರಸಭೆ ಅಧ್ಯಕ್ಷ ಅಜೀಜುಲ್ಲಾ, ಉಪಾಧ್ಯಕ್ಷ ರವೀಂದ್ರಕುಮಾರ್, ಸದಸ್ಯ ಮುನಾವರ ಪಾಷ, ಹಿಂದುಳಿದ ವರ್ಗಗಳ ಕಾಂಗ್ರೆಸ್ ಅಧ್ಯಕ್ಷ ಎ.ಎನ್. ಸ್ವಾಮಿ, ಡಿಸಿಸಿ ಸದಸ್ಯ ಗಣೇಶ್, ಮುಖಂಡ ಉಕ್ಕಲಗೆರೆ ರಾಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

