ಅರಣ್ಯ ಕಚೇರಿಗೆ ರೈತರ ಮುತ್ತಿಗೆ
ಎಚ್.ಡಿ. ಕೋಟೆ: ತಾಲೂಕಿನ ಮೇಟಿಕುಪ್ಪೆ ಅರಣ್ಯ ವಲಯದ ಕಾಡಂಚಿನ ಗ್ರಾಮಗಳಲ್ಲಿ ಪ್ರಾಣಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿವೆ ಎಂದು ಪಟ್ಟಣದ ಅರಣ್ಯ ಇಲಾಖೆ ಕಚೇರಿಗೆ ಮೇಟಿಕುಪ್ಪೆ ಗ್ರಾಮಸ್ಥರು ಆಗಮಿಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಮೇಟಿಕುಪ್ಪೆ ಗ್ರಾಮದ ಗುರುಸ್ವಾಮಿ ಮಾತನಾಡಿ, ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಉಪಟಳ ಹೆಚ್ಚಿದೆ. ಅಪೂರ್ಣಗೊಂಡಿರುವ ಸೋಲಾರ್ ವ್ಯವಸ್ಥೆಯನ್ನು ಪೂರ್ಣಗೊಳಿಸಬೇಕು, ಅಲ್ಲದೆ ಕಂದಕವು ಸಹ ಕೆಲವು ಭಾಗಗಳಲ್ಲಿ ಅಪೂರ್ಣವಾಗಿದ್ದು ಅದನ್ನು ಪೂರ್ಣಗೊಳಿಸಬೇಕು ಎಂದರು.
ಮತ್ತೊಬ್ಬ ರೈತ ಶಿವನಂಜಪ್ಪ ಮಾತನಾಡಿ, ಕಳೆದ ಕೆಲ ತಿಂಗಳಿಂದ ಒಂಟಿ ಆನೆಯೊಂದು ಬಂದು ಸಂಪಾಗಿ ಬೆಳೆದಿರುವ ಕಬ್ಬು, ಹತ್ತಿ, ಬಾಳೆ ತಿಂದು ಹಾಕಿದೆ. ಆನೆ ಓಡಿಸಲು ಮುಂದಾದರೆ ರೈತರನ್ನೇ ಬೆನ್ನಟ್ಟಿ ಬರುತ್ತಿದೆ. ಕಾಡು ಹಂದಿಗಳ ಕಾಟವಂತೂ ವಿಪರೀತವಾಗಿದೆ ಎಂದು ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ಪುಟ್ಟಸ್ವಾಮಿ, ತಮ್ಮಲ್ಲಿ ಅರಣ್ಯ ರಕ್ಷಕರ ಕೊರತೆ ಹೆಚ್ಚಿದೆ. ಆ ಕಾರಣ ಪ್ರಾಣಿಗಳ ಹಾವಳಿ ತಡೆಯಲು ಕೊಂಚ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಅರಣ್ಯ ರಕ್ಷಕರನ್ನು ಬೇರೆಡೆಯಿಂದ ಕರೆಸಿಕೊಂಡು ರಕ್ಷಣೆ ನೀಡುವುದಾಗಿ ಭರವಸೆ ನೀಡಿದರು. ರೈತರಾದ ಬಸವರಾಜು, ಶಿವಕುಮಾರ್, ಕೃಷ್ಣನಾಯಕ, ಕೆಂಪನಾಯಕ, ಮಲ್ಲಿಕಾರ್ಜುನ್, ಯೋಗೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

