ಕಾವೇರಿ ಬ್ಯಾಂಕಿನಿಂದ ಉತ್ತಮ ಸೇವೆ
ಮೈಸೂರು: ಕಾವೇರಿ ಗ್ರಾಮೀಣ ಬ್ಯಾಂಕ್ ನಿರಂತರ ಹಾಲು ಒಕ್ಕೂಟದ ಸಂಬಂಧ ಹೊಂದಿದ್ದು, ರೈತರಿಗೆ ಹೈನುಗಾರಿಕೆಗಾಗಿ ಸಾಲ ನೀಡಿ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಸಹಕರಿಸುತ್ತಿದೆ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕ ಸಿ. ಚೆನ್ನಕೃಷ್ಣಯ್ಯ ಹೇಳಿದರು.
ನಗರದ ಯರಗನಹಳ್ಳಿಯಲ್ಲಿ ಆರಂಭವಾದ ಕಾವೇರಿ ಗ್ರಾಮೀಣ ಬ್ಯಾಂಕಿನ ನೂತನ ಶಾಖೆ ಉದ್ಘಾಟಿಸಿ ಮಾತನಾಡಿದ ಅವರು, ಹಾಲು ವಿತರಣೆ ಹಣವನ್ನು ಸಕಾಲದಲ್ಲಿ ಪಾವತಿಸುವ ಮೂಲಕ ಬ್ಯಾಂಕ್ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು. ಪಾಲಿಕೆ ಸದಸ್ಯೆ ಸಿ.ಎಸ್.ರಜನಿ ಅಣ್ಣಯ್ಯ ಮಾತನಾಡಿ, ಯರಗನಹಳ್ಳಿ ಶಾಖೆ ಸ್ಥಳಾಂತರದಿಂದ ಗ್ರಾಹಕರಿಗೆ ತುಂಬಾ ಅನುಕೂಲವಾಗುತ್ತದೆ. ಕಾವೇರಿ ಗ್ರಾಮೀಣ ಬ್ಯಾಂಕ್ ಕಡಿಮೆ ಸಿಬ್ಬಂದಿ ಹೊಂದಿದ್ದು, ಬೇರೆ ಷೆಡ್ಯೂಲ್ ಬ್ಯಾಂಕ್ಗಿಂತ ತ್ವರಿತ ಸೇವೆಯನ್ನು ಗ್ರಾಹಕರಿಗೆ ಒದಗಿಸುತ್ತಿದೆ ಎಂದು ತಿಳಿಸಿದರು.
ಕಾವೇರಿ ಗ್ರಾಮೀಣ ಬ್ಯಾಂಕಿನ ಅಧ್ಯಕ್ಷ ಡಿ.ಸೋಮಶೇಖರ ಶಾಸ್ತ್ರಿ ಮಾತನಾಡಿ, ನಮ್ಮ ಬ್ಯಾಂಕ್ ಬೆಳವಣಿಗೆಯಲ್ಲಿ ಬೇರೆ ಷೆಡ್ಯೂಲ್ ಬ್ಯಾಂಕ್ಗಿಂತ ಉತ್ತಮ ರೇಟಿಂಗ್ ಹೊಂದಿದೆ. ಪ್ರಸ್ತುತ 404 ಶಾಖೆಯನ್ನು ಹೊಂದಿದ್ದು 500 ಶಾಖೆಯನ್ನು ಈ ಆರ್ಥಿಕ ವರ್ಷದಲ್ಲಿ ತಲುಪುವ ಗುರಿ ಹೊಂದಿದೆ. ಈಗ 8 ವಲಯಗಳಿದ್ದು ಇದನ್ನು 10ಕ್ಕೆ ವಿಸ್ತರಿಸುವ ಇರಾದೆ ಹೊಂದಿದ್ದೇವೆ ಎಂದು ಮಾಹಿತಿ ನೀಡಿದರು.
ಬ್ಯಾಂಕಿನ ವಲಯ ವ್ಯವಸ್ಥಾಪಕ ಎಸ್.ರಾಮಸ್ವಾಮಿ, ಪ್ರಧಾನ ವ್ಯವಸ್ಥಾಪಕ ಎಂ.ಎಸ್.ಪ್ರಸನ್ನ ನರಸಿಂಹರಾವ್, ಗ್ರಾಹಕ ಎಲ್.ರಾಜಣ್ಣ ಭಾಗವಹಿಸಿದ್ದರು. ಚೈತ್ರ ಹೆಗಡೆ ಪ್ರಾರ್ಥಿಸಿದರು. ಎಚ್.ಪುರುಷೋತ್ತಮ್ ಸ್ವಾಗತಿಸಿದರು. ದೀಪಕ್ ರಾಮರಾಜ ಅರಸ್ ವಂದಿಸಿದರು. ಎಂ. ನಾಗಭೂಷಣ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

