ನಿರ್ಗತಿಕರಿಗೆ ನಿವೇಶನ ಹಂಚಿಕೆಗೆ ಆಗ್ರಹಿಸಿ ಪ್ರತಿಭಟನೆ
ಹುಣಸೂರು: ಬಡ ಕುಟುಂಬಗಳಿಗೆ ಪುರಸಭೆ ನಿವೇಶನ ನೀಡುವಲ್ಲಿ ಬೇಜವಾಬ್ದಾರಿ ಪ್ರದರ್ಶಿಸುತ್ತಿದೆ ಎಂದು ಆರೋಪಿಸಿ, ತಾಲೂಕು ಜನರಿಗಾಗಿ ವೇದಿಕೆಯು ಪುರಸಭಾ ಕಚೇರಿ ಎದುರು ಪ್ರತಿಭಟಿಸಿದರು.
ದಲಿತ ಮುಖಂಡ ಡಿ.ಕುಮಾರ್ ಮಾತನಾಡಿ, ಕಳೆದ 30 ವರ್ಷಗಳಿಂದ ಪಟ್ಟಣದ ಕೂಲಿ ಕಾರ್ಮಿಕರು, ದಲಿತರು, ಅಲ್ಪಸಂಖ್ಯಾತರು ಸೇರಿದಂತೆ ನಿರ್ಗತಿಕ ವಸತಿಹೀನರಿಗೆ ನಿವೇಶನ ನೀಡಿಲ್ಲ. 18 ವರ್ಷಗಳ ಹಿಂದೆ ಆಶ್ರಯ ಮನೆ ಯೋಜನೆಯಡಿ ನೀಡಿದ್ದ 870 ನಿವೇಶನಗಳು ಸರ್ಕಾರಿ ನೌಕರರು, ಉಳ್ಳವರ ಪಾಲಾಗಿದ್ದು, ಕಾನೂನಾತ್ಮಕ ತೊಡಕಿನಿಂದ ಅದೂ ಫಲಾನುಭವಿಗಳ ಕೈ ಸೇರಿಲ್ಲ. ಹಂಚಿಕೆಯಾಗದೆ ಉಳಿದಿರುವ 269 ನಿವೇಶನಗಳನ್ನು ಬಡವರಿಗೆ ಕೂಡಲೇ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಪುರಸಭೆ ಬಡ ನಾಗರಿಕರ ಸಮಸ್ಯೆ ಕಡೆಗಣಿಸಿರುವುದೇ ಸಮಸ್ಯೆ ಉಲ್ಬಣಕ್ಕೆ ಪ್ರಮುಖ ಕಾರಣವಾಗಿದೆ. ಕೂಡಲೇ ಪುರಸಭೆ ಎಚ್ಚೆತ್ತುಕೊಂಡು ನಿವೇಶನ ಹಂಚಿಕೆಗೆ ಕಾರ್ಯಕ್ರಮ ರೂಪಿಸಬೇಕೆಂದು ಒತ್ತಾಯಿಸಿದರು. ವೇದಿಕೆ ಗೌರವಾಧ್ಯಕ್ಷ ಉದ್ದಯ್ಯ ಕಲ್ಲಹಳ್ಳಿ, ಸಂಚಾಲಕ ನಿಂಗರಾಜ ಮಲ್ಲಾಡಿ, ಸಿಪಿಐ ಪ್ರಧಾನ ಕಾರ್ಯದರ್ಶಿ ವಿ.ಬಸವರಾಜು, ವೇದಿಕೆ ವಕ್ತಾರ ಜೆ.ಮಹದೇವ್ ಮಾತನಾಡಿದರು. ಪುರಸಭಾ ಮುಖ್ಯಾಧಿಕಾರಿ ಎ. ರಮೇಶ್ ಅವರಿಗೆ ಪ್ರತಿಭಟನಾಕಾರರು ಮನವಿ ಸಲ್ಲಿಸಿದಾಗ, ಶಾಸಕರ ನೇತೃತ್ವದಲ್ಲಿ ಶೀಘ್ರ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಮುಖ್ಯಾಧಿಕಾರಿ ಭರವಸೆ ನೀಡಿದರು. ದಲಿತ ಮುಖಂಡರಾದ ಎಚ್.ಎಸ್.ವರದರಾಜು, ಮಹದೇವ್, ಗಜೇಂದ್ರ, ದೇವೇಂದ್ರ, ರಾಜಣ್ಣ, ಅಲೆಮಾರಿ ಒಕ್ಕೂಟದ ಎಲ್ಲಪ್ಪ, ಹರೀಶ್, ಇಂದ್ರಮ್ಮ, ಲಕ್ಷ್ಮಮ್ಮ, ಮಹಿಳಾ ಪರಿಷತ್ ಎಂ.ಗೀತಾ ಸೇರಿದಂತೆ ನೂರಕ್ಕೂ ಹೆಚ್ಚು ಮಂದಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

