ಮೈಸೂರು

'ಪಾಡನ್ನು ಹಾಡಾಗಿಸಿದ ಜಿಎಸ್‌ಎಸ್‌'

Published On :

ಪಿರಿಯಾಪಟ್ಟಣ: ತಾವು ಪಟ್ಟ ಪಾಡನ್ನು ಹಾಡನ್ನಾಗಿ ಪರಿವರ್ತಿಸಿದ ಕವಿ ಡಾ. ಜಿ.ಎಸ್.ಶಿವರುದ್ರಪ್ಪನವರು ಎಂದು ಸಾಹಿತಿ ಜಯಪ್ಪ ಹೊನ್ನಾಳಿ ಬಣ್ಣಿಸಿದರು.
ಪಟ್ಟಣದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಡಾ. ಜಿಎಸ್‌ಎಸ್‌ಗೆ ನುಡಿನಮನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಎಸ್‌ಎಸ್ ಬಾಲ್ಯದಿಂದಲೂ ಹಲವಾರು ಸಂಕಷ್ಟವನ್ನು ಅನುಭವಿಸಿ ತಾವು ಪಟ್ಟ ಕಷ್ಟ, ಸುಖಗಳನ್ನು ಹಾಡನ್ನಾಗಿಸಿದರು. ಅವರು ಮರಣ ಹೊಂದಿಲ್ಲ. ತಮ್ಮ ಕವಿತೆಗಳ ಮೂಲಕ ಇನ್ನೂ ಜೀವಂತವಾಗಿದ್ದಾರೆ ಎಂದರು. ಕಸಾಪ ಜಿಲ್ಲಾಧ್ಯಕ್ಷ ಎಂ. ಚಂದ್ರಶೇಖರ್ ಮಾತನಾಡಿ, ಜಿಎಸ್‌ಎಸ್ ತಮ್ಮ ಕವನ, ಲೇಖನದಿಂದ ಜನತೆಯನ್ನು ಇಂದಿಗೂ ಎಚ್ಚರಿಸುತ್ತಲೇ ಇದ್ದಾರೆ. ಅವರು ಕಾವ್ಯದ ಮೂಲಕ ಅಮರರಾಗಿದ್ದಾರೆ ಎಂದರು. ಗಾಯಕರಾದ ನಾಗೇಶ್, ಕೆ.ಪಿ.ಮಂಜುಳಾ, ಯಶವಂತ್, ನಂಜುಂಡಸ್ವಾಮಿ, ಜಿಎಸ್‌ಎಸ್ ಅವರ ಗೀತೆಗಳನ್ನು ಹಾಡಿದರು.
ರಾವಂದೂರು ಮುರುಘರಾಜೇಂದ್ರ ಮಠದ ಮೋಕ್ಷಪತಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಬಿಆರ್‌ಸಿ ರೇವಣ್ಣ, ಉಪಪ್ರಾಂಶುಪಾಲ ನಾಗಶೆಟ್ಟಿ, ಪ್ರಾ.ಶಾಲಾ ಶಿಕ್ಷಕರ ಸಂಘದ  ತಾ. ಅಧ್ಯಕ್ಷ ರಾಜ್‌ಕುಮಾರ್, ಕಾರ್ಯದರ್ಶಿ ದಯಾನಂದ್, ಕಸಾಪ ತಾ. ಅಧ್ಯಕ್ಷ ಗೊರಳ್ಳಿ ಜಗದೀಶ್, ಡಾ.ರಾಜಣ್ಣ, ಡಾ.ವಿಜಯ್‌ಕುಮಾರ್, ಮಹದೇವ್, ವಿಜಯ್, ಗೋವಿಂದೇಗೌಡ, ಹರೀಶ್, ಶಿವರಾಜ್,ಅನಂತ್ ಇದ್ದರು.

ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ
ಪಿರಿಯಾಪಟ್ಟಣ: ತಾಲೂಕಿನ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಸಂಘ ಹಾಗೂ ಮೈಸೂರು- ಮಂಡ್ಯ ಜಿಲ್ಲಾ ಕಬಡಿ ಆಟಗಾರರ ಕ್ಷೇಮಾಭಿವೃದ್ಧಿ ಸಂಘದಿಂದ ಕನ್ನಂಬಾಡಿಯಮ್ಮ ಮತ್ತು ಮಸಣಿಕಮ್ಮನವರ ಜಾತ್ರಾ ಮಹೋತ್ಸವದ ಅಂಗವಾಗಿ ಮಾ. 8, 9ರಂದು ಗೋಣಿಕೊಪ್ಪ ರಸ್ತೆಯಲ್ಲಿರುವ ಪದವಿ ಪೂರ್ವ ಕಾಲೇಜಿನಲ್ಲಿ ಹೊನಲು ಬೆಳಕಿನ ಕಬಡಿ ಪಂದ್ಯಾವಳಿ ಏರ್ಪಡಿಸಿದೆ. ಪ್ರಥಮ ಸ್ಥಾನ ಗಳಿಸಿದ ತಂಡಕ್ಕೆ 14,444, ದ್ವಿತೀಯ 8,888, ತೃತೀಯ 5,555 ಹಾಗೂ ನಾಲ್ಕನೇ ಬಹುಮಾನವಾಗಿ 3,333 ಮತ್ತು ಪಾರಿತೋಷಕ ನೀಡಲಾಗುತ್ತದೆ. ಆಸಕ್ತ ತಂಡಗಳು ಮಾ. 5ರೊಳಗೆ ಹೆಸರು ನೋಂದಾಯಿಸಿಕೊಳ್ಳುವಂತೆ ಕೋರಲಾಗಿದೆ. ಮೊ. 96204 03681, 94816 14963 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.