ಮೈಸೂರು

ರಂಗದ ಮೇಲೆ ಮಿನುಗಿದ ನಕ್ಷತ್ರಗಳು...

Published On :

ಮೈಸೂರು: ಹಾಡಿದರು, ನರ್ತಿಸಿದರು, ನಾಟಕ ಅಭಿನಯಿಸಿದರು ನಮ್ಮೊಳಗೊಬ್ಬ ಕಲಾವಿದನಿದ್ದಾನೆಂದು ಕಲಾ ಪ್ರತಿಭೆ ಸಾರಿದರು. ನಾವು ಯಾರಿಗೇನು ಕಡಿಮೆಯಿಲ್ಲ ಎಂಬುದನ್ನು ತೋರಿಸಿಕೊಟ್ಟರು. ರಂಗದ ಮೇಲೆ ಇಂತಹ ಪ್ರತಿಭೆ ಮೆರೆದವರು ಸಾಮಾನ್ಯ ಮಕ್ಕಳಲ್ಲ, ಅವರು ವಿಶೇಷ ಮಕ್ಕಳು...
ಜಗನ್ಮೋಹನ ಅರಮನೆಯಲ್ಲಿ ರೋಟರಿ ಮೈಸೂರು ಸಂಸ್ಥೆಯು ಭಾನುವಾರ ಏರ್ಪಡಿಸಿದ್ದ ತಾರೆ ಜಮೀನ್ ಪರ್ 2014ರ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬುದ್ಧಿಮಾಂದ್ಯ ಮಕ್ಕಳು ವಿವಿಧ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ನಕ್ಷತ್ರಗಳಂತೆ ಮಿನುಗಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್‌ನ ಸಂಸ್ಥಾಪಕ ಡಾ.ಆರ್. ಬಾಲಸುಬ್ರಹ್ಮಣ್ಯಂ, ಯಾವುದೇ ಮಕ್ಕಳಿಗೆ ಪೋಷಕರು ಒತ್ತಾಯ ಮಾಡಬಾರದು. ಅವರಲ್ಲಿರುವ ಪ್ರತಿಭೆ ಗುರುತಿಸಿ, ಅದಕ್ಕೆ ಪ್ರೋತ್ಸಾಹ ನೀಡಿದಾಗ ಮಾತ್ರ ಮಕ್ಕಳು ಉತ್ತಮ ಸಾಧನೆ ಮಾಡಲು ಸಾಧ್ಯ ಎಂದರು.   
ಬುದ್ಧಿಮಾಂದ್ಯ ಮಕ್ಕಳನ್ನು ಕಡೆಗಣಿಸದೆ, ಇತರ ಮಕ್ಕಳಂತೆ ಅವರಿಗೂ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಪ್ರೀತಿ ಮತ್ತು ವಿಶ್ವಾಸದಿಂದ ಕಾಣಬೇಕು. ಸಾಮಾನ್ಯ ಮಕ್ಕಳಿಗೆ ಸರಿ ಸಮಾನವಾಗಿ ಸಮಾನತೆಯನ್ನು ಸಮಾಜ ಹಾಗೂ ಪೋಷಕರು ತೋರಿಸಿದಾಗ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದರು.
ರೋಟರಿ ಸಂಸ್ಥೆ ಮಾಜಿ ರಾಜ್ಯಪಾಲ ಆರ್. ಗುರು, ಇನ್ಫೋಸಿಸ್ ಗ್ಲೋಬಲ್ ಶಿಕ್ಷಣ ಕೇಂದ್ರದ ಸಹಾಯಕ ಉಪಾಧ್ಯಕ್ಷ ಕೆ.ಎಸ್. ಸುಂದರ್ ಮುಖ್ಯ ಅತಿಥಿಗಳಾಗಿದ್ದರು.  ರೋಟರಿ ಮೈಸೂರು ಸಂಸ್ಥೆಯ ಅಧ್ಯಕ್ಷ ಎಂ.ಸಿ.ಎಸ್. ಮನೋಹರ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಎಂ.ಆರ್. ರಾಜಾರಾಂ ಹಾಗೂ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಬಿ.ಎಸ್. ರವಿಕುಮಾರ್ ಇದ್ದರು.  ಉತ್ಸವದಲ್ಲಿ ವಿವಿಧ ವಯೋವಾನದ ಮಕ್ಕಳು ಶಾಸ್ತ್ರೀಯ, ಜಾನಪದ, ಪಾಶ್ಚಾತ್ಯ ನೃತ್ಯವನ್ನೂ, ಕನ್ನಡ, ತೆಲಗು ಹಾಗೂ ಹಿಂದಿ ಚಿತ್ರಗೀತೆಗಳನ್ನು ಹಾಡಿದರು. ಅಲ್ಲದೆ ಸ್ಪಂದನಾ ಎಂಬ ನಾಟಕ ಅಭಿನಯಿಸಿದರು. ಗಾಂಧಿ, ಶಿವಾಜಿ, ಅಕ್ಬರ್, ರಾಜ- ರಾಣಿ, ಶಿರಡಿ ಸಾಯಿಬಾಬಾ, ಸೈನಿಕ, ವೈದ್ಯ ಹಾಗೂ ವಕೀಲ ಮುಂತಾದ ವೇಷ ತೊಟ್ಟು ಮನರಂಜಿಸಿದರು. ವಿವಿಧ ರಾಜ್ಯಗಳ 25 ಶಾಲೆಗಳಿಂದ 900ಕ್ಕೂ ಹೆಚ್ಚು ಮಕ್ಕಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.