ಮೈಸೂರು

ಓಂಕಾರೇಶ್ವರ ತೆಪ್ಪೋತ್ಸವ ವೈಭವ

Published On :

ಹುಣಸೂರು: ತಾಲೂಕಿನ ತಟ್ಟೆಕೆರೆ ಗ್ರಾಪಂ ವ್ಯಾಪ್ತಿಯ ರಾಮೇನಹಳ್ಳಿ ಬೆಟ್ಟದಮೇಲಿನ ಓಂಕಾರೇಶ್ವರಸ್ವಾಮಿಯ ತೆಪ್ಪೋತ್ಸವವು ಲಕ್ಷಣತೀರ್ಥ ನದಿಯಲ್ಲಿ ವಿಜೃಂಭಣೆಯಿಂದ ನಡೆಯಿತು.
ಕಳೆದ ನಾಲ್ಕು ದಿನಗಳಿಂದ ನಡೆದ ಧನಗಳ ಜಾತ್ರೆ, ರಥೋತ್ಸವ, ಪಾರಟೋತ್ಸವ ಹಾಗೂ ದೇವರ ಉತ್ಸವದ ನಂತರ ಕೊನೆಯ ದಿನದ ಅಂಗವಾಗಿ ಲಕ್ಷಣತೀರ್ಥ ನದಿಯಲ್ಲಿ ಬಿದಿರಿನಿಂದ ನಿರ್ಮಿಸಿದ್ದ ತೆಪ್ಪದಲ್ಲಿ ಓಂಕಾರೇಶ್ವರ ಹಾಗೂ ಆಂಜನೇಯಸ್ವಾಮಿಯ ಉತ್ಸವ ಮೂರ್ತಿಗಳನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನದಿ ದಂಡೆಯಲ್ಲಿ ನೆರೆದಿದ್ದ ಸಾವಿರಾರು ಭಕ್ತರು ಜಯ ಘೋಷ ಹಾಕಿ ಭಕ್ತಿ ಭಾವ ಮೆರೆದರು. ನಂತರ ಉತ್ಸವ ಮೂರ್ತಿಗಳನ್ನು ಅಲಂಕರಿಸಿದ ಪಲ್ಲಕ್ಕಿಯಲ್ಲಿಟ್ಟು ಬೆಳಗಿನ ಜಾವದವರೆಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಲಾಯಿತು.

ಇಂದಿನಿಂದ ನೈರ್ಮಲ್ಯ ವಾಹಿನಿ ಪ್ರವಾಸ
ಮೈಸೂರು:
ಜಿಲ್ಲಾ ಪಂಚಾಯಿತಿಯ ನಿರ್ಮಲ ಭಾರತ್ ಅಭಿಯಾನದ ಮಾಹಿತಿ ಶಿಕ್ಷಣ ಮತ್ತು ಸಂವಹನ (ಐಇಸಿ) ಕಾರ್ಯಕ್ರಮದ ನೈರ್ಮಲ್ಯ ವಾಹಿನಿ ಸಂಚಾರಿ ವಾಹನವು 2014ರ ಮಾರ್ಚ್‌ನಲ್ಲಿ ಜಿಲ್ಲೆಯ 7 ತಾಲೂಕಿನ ವಿವಿಧ ಗ್ರಾಮಗಳಲ್ಲಿ ನಿರ್ಮಲ ಭಾರತ್ ಅಭಿಯಾನದ ಸಾಕ್ಷ್ಯಚಿತ್ರ ಪ್ರದರ್ಶನದ ಬಗ್ಗೆ ಗ್ರಾಮೀಣ ಜನರಲ್ಲಿ ಸಮೂಹ ಮಾಧ್ಯಮಗಳ ಮೂಲಕ ಅರಿವು ಮೂಡಿಸಲಿದೆ.
ಮಾ.5 ಎಚ್.ಡಿ. ಕೋಟೆ ತಾಲೂಕಿನ ಕ್ಯಾತನಹಳ್ಳಿ, ಮಾ. 6 ಟಿ. ನರಸೀಪುರ ತಾಲೂಕಿನ ಸೀಹಳ್ಳಿ, ಮಾ. 7 ನಂಜನಗೂಡು ತಾಲೂಕಿನ ಹರವೆ, ಮಾ.10 ಹುಣಸೂರು ತಾಲೂಕಿನ ಮುತ್ತೂರು, ಮಾ.11 ಎಚ್.ಡಿ. ಕೋಟೆ ತಾಲೂಕಿನ ಗದ್ದಿಗೆ, ಮಾ.12 ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ, ಮಾ.13 ನಂಜನಗೂಡು ತಾಲೂಕಿನ ಕಳಲೆ, ಮಾ.14 ಟಿ. ನರಸೀಪುರ ತಾಲೂಕಿನ ಮೂಗೂರು, ಮಾ. 15 ಕೆ.ಆರ್.ನಗರ ತಾಲೂಕಿನ ಬ್ಯಾಡರಹಳ್ಳಿ, ಮಾ. 17 ಎಚ್.ಡಿ. ಕೋಟೆ ತಾಲೂಕಿನ ಹೈರಿಗೆ, ಮಾ.18 ಮೈಸೂರು ತಾಲೂಕಿನ ಮೆಲ್ಲಹಳ್ಳಿ, ಮಾ.19 ಟಿ. ನರಸೀಪುರ ತಾಲೂಕಿನ ಕೆಂಪಯ್ಯನಹುಂಡಿ, ಮಾ.20 ಹುಣಸೂರು ತಾಲೂಕಿನ ಹನಗೂಡು,  ಮಾ.21 ಪಿರಿಯಾಪಟ್ಟಣ ತಾಲೂಕಿನ ಕೋಮಲಾಪುರ, ಮಾ.22 ನಂಜನಗೂಡು ತಾಲೂಕಿನ ನಗರ್ಲೆ, ಮಾ. 24 ಕೆ.ಆರ್.ನಗರ ತಾಲೂಕಿನ ಡೋರನ್ನಹಳ್ಳಿ, ಮಾ.25 ಟಿ. ನರಸೀಪುರ ತಾಲೂಕಿನ ವಾಟಳು, ಮಾ.26 ಹುಣಸೂರಿನ ಕರಿಮುದ್ದನಹಳ್ಳಿ, ಮಾ. 27 ಮೈಸೂರು ತಾಲೂಕಿನ ಕೀಳನಪುರ, ಮಾ. 28 ನಂಜನಗೂಡು ತಾಲೂಕಿನ ಹೆಡತಲೆ, ಮಾ.29 ಎಚ್.ಡಿ. ಕೋಟೆ ತಾಲೂಕಿನ ಕಳಂಬೆಳ ಗ್ರಾಮದಲ್ಲಿ ನಡೆಯಲಿದೆ ಎಂದು ಜಿಪಂ ಸಿಇಒ ಪಿ.ಎ. ಗೋಪಾಲ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.