ಮ್ಯಾನೇಜ್ಮೆಂಟ್ ವಿದ್ಯಾರ್ಥಿಗಳ 'ನಾನು ಯಾರು' ಕಿರುಚಿತ್ರಕ್ಕೆ ಪ್ರಶಸ್ತಿ
ಮೈಸೂರು: ನಗರದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ಟಿಟ್ಯೂಟ್ ಫಾರ್ ಮ್ಯಾನೇಜ್ಮೆಂಟ್ ಡೆವಲಪ್ಮೆಂಟ್ ವಿದ್ಯಾರ್ಥಿಗಳು ನಿರ್ಮಿಸಿದ್ದ ನಾನು ಯಾರು ಎಂಬ ಕಿರುಚಿತ್ರವು ಬೋರೋಪ್ಲಸ್ ಅಖಿಲ ಭಾರತ ಕಿರುಚಿತ್ರ ಸ್ಪರ್ಧೆಯಲ್ಲಿ ಬಹುಮಾನ ಗಳಿಸಿದೆ. ಸಂಸ್ಥೆಯ ವಿದ್ಯಾರ್ಥಿಗಳಾದ ಹಿಮಾಂಶು ಸಿಂಗ್ ಗುರ್ಜರ್, ಓಂಕಾರ್ ರಾಜ್ಯಗುರು, ಪಿಯೂಷ್ ಕುಮಾರ್, ಆಸ್ಥ ವ್ಯಾಸ್ ಮತ್ತು ಅಶ್ವಿನ್ ಎಸ್. ಪ್ರಸಾದ್ ಅವರು ನಿರ್ಮಿಸಿದ ಕಿರುಚಿತ್ರ ಇದಾಗಿದೆ. ಈ ಬಾರಿ ಸ್ತ್ರೀಯರ ವಿರುದ್ಧ ನಡೆಯುವ ಅಪರಾಧಗಳು ವಿಷಯದ ಬಗ್ಗೆ ಕಿರುಚಿತ್ರಗಳನ್ನು ಆಹ್ವಾನಿಸಲಾಗಿತ್ತು. ಹಿಂಸೆ, ಲೈಂಗಿಕ ಕಿರುಕುಳ, ಆರ್ಥಿಕ ಅಸಮಾನತೆ ವಿಷಯಗಳ ಬಗ್ಗೆ ಕಿರುಚಿತ್ರಗಳನ್ನು ನಿರೀಕ್ಷಿಸಲಾಗಿತ್ತು. ಭಾರತದ ಮೂಲೆ ಮೂಲೆಗಳಿಂದ ಬಂದಿದ್ದ ಕಿರುಚಿತ್ರಗಳ ಪೈಕಿ 14 ಅಂತಿಮ ಹಂತಕ್ಕೆ ಆಯ್ಕೆಗೊಂಡವು. ಅಲ್ಕ್ಯೂ ಪದಂಸಿ ಅವರ ನೇತೃತ್ವದ ತಂಡ ಅಂತಿಮಗೊಳಿಸಿತು. ನಾನು ಯಾರು ಕಿರುಚಿತ್ರವು ಕೇವಲ 5 ನಿಮಿಷದಲ್ಲಿ ಅತ್ಯುತ್ತಮವಾಗಿ ಪ್ರಸ್ತುತಪಡಿಸಿದ್ದರಿಂದ ಬಹುಮಾನ ಗಳಿಸಿತು.
ಬೈಕಿನಲ್ಲಿ ಬಂದು ಮಹಿಳೆಯ ಚಿನ್ನದ ಸರ ಅಪಹರಣ
ಮೈಸೂರು: ರಸ್ತೆ ಬದಿ ನಡೆದು ಹೋಗುತ್ತಿದ್ದ ವೃದ್ಧೆಯ 40 ಗ್ರಾಂ. ಚಿನ್ನದ ಸರವನ್ನು ಬೈಕಿನಲ್ಲಿ ಬಂದ ಇಬ್ಬರು ಅಪಹರಿಸಿಕೊಂಡು ಹೋಗಿರುವ ಘಟನೆ ಸೋಮವಾರ ಬೆಳಗ್ಗೆ ನಡೆದಿದೆ. ಶ್ರೀರಾಂಪುರ ಕಂದಾಯ ಬಡಾವಣೆ ನಿವಾಸಿ ಕೇಶವನಾರಾಯಣ ಎಂಬವರ ಪತ್ನಿ ಹಾಗೂ ನಿವೃತ್ತ ಮುಖ್ಯಶಿಕ್ಷಕಿ ನಾಗಮ್ಮ (75) ಸರ ಕಳೆದುಕೊಂಡವರು. ಇವರು ಬೆಮಲ್ ಬಡವಾಣೆಯ ಲಿಂಗಾಬೂದಿ ಪಾಳ್ಯದ ರಸ್ತೆಯಲ್ಲಿ ಹೋಗುತ್ತಿದ್ದಾಗ ಬೈಕಿನಲ್ಲಿ ಬಂದವರು ಸರ ಎಗರಿಸಿಕೊಂಡು ಹೋಗಿದ್ದಾರೆ. ಈ ಸಂಬಂಧ ಕುವೆಂಪುನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

