ಮೈಸೂರು

ಸಾಕ್ಷರತಾ ಪರೀಕ್ಷೆಗೆ ಸಹಕಾರಕ್ಕೆ ಮನವಿ

Published On :

ಪಿರಿಯಾಪಟ್ಟಣ: ಮಾ. 9ರಂದು ನಡೆಯುವ ಮೂಲ ಸಾಕ್ಷರತಾ ಪರೀಕ್ಷೆಗೆ ಪ್ರೇರಕರು, ಸ್ವಯಂ ಸೇವಕರು, ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರ ಅತ್ಯಗತ್ಯ ಎಂದು ಜಿಲ್ಲಾ ಕಾರ್ಯಕ್ರಮಾಧಿಕಾರಿ ತೇ.ಸಿ. ವಿಶ್ವೇಶ್ವರಯ್ಯ ಹೇಳಿದರು.
ಪಟ್ಟಣದ ಬಿಆರ್‌ಸಿ ಕಚೇರಿಯಲ್ಲಿ ಗ್ರಾಪಂ ಲೋಕ ಶಿಕ್ಷಣ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ಪ್ರೇರಕರಿಗೆ ಏರ್ಪಡಿಸಿದ್ದ ಒಂದು ದಿನದ ಮಾಹಿತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, ಸಾಕ್ಷರ ಭಾರತ್ ಕಾರ್ಯಕ್ರಮ ಬಂದ ಮೇಲೆ ನವ ಸಾಕ್ಷರರಿಗೆ ಈಗಾಗಲೇ 6 ಪರೀಕ್ಷೆಗಳನ್ನು ನಡೆಸಲಾಗಿದ್ದು, ಮೊದಲ ಹಂತದ ಕೊನೆಯ ಪರೀಕ್ಷೆ ಇದಾಗಿದೆ. ನವ ಸಾಕ್ಷರರು ತಮ್ಮ ಹೆಸರನ್ನು ಆಯಾಯ ಪಂಚಾಯ್ತಿ ವ್ಯಾಪ್ತಿಯ ಪ್ರೇರಕರಲ್ಲಿ ನೋಂದಾಸಿಕೊಳ್ಳುವಂತೆ ತಿಳಿಸಿದರು.
ಜಿಲ್ಲಾ ಕಾರ್ಯಕ್ರಮ ಸಂಯೋಜಕ ಎಂ. ಮಂಜುನಾಥ್ ಮಾತನಾಡಿ, ಜಿಲ್ಲಾದ್ಯಂತ 55 ಸಾವಿರ ನವ ಸಾಕ್ಷರರನ್ನು ಈಗಾಗಲೇ ಪರೀಕ್ಷೆ ಬರೆಯಲು ಗುರಿಪಡಿಸಲಾಗಿದೆ. ಪಿರಿಯಾಪಟ್ಟಣ ತಾಲೂಕಿನಲ್ಲಿ ಒಟ್ಟು 5,828 ನವ ಸಾಕ್ಷರರನ್ನು ನೋಂದಾಸಿಕೊಳ್ಳಲಾಗಿದೆ. ಪ್ರೇರಕರು ನವ ಸಾಕ್ಷರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವಂತೆ ತಿಳಿಸಿದರು.
ಸದಸ್ಯ ಕಾರ್ಯದರ್ಶಿಗಳಾದ ಬಿ.ಎಸ್. ನಾಗರಾಜ್, ಶಾರದಾ, ಬಿ.ಎಸ್. ದಯಾನಂದ್, ಶ್ರೀನಿವಾಸಗೌಡ, ಶಿವಕುಮಾರ್, ಪುಟ್ಟರಾಜು, ಸುರೇಶ್, ಜಿಲ್ಲಾ ಸಂಯೋಜಕ ರವಿಕುಮಾರ್, ತಾಲೂಕು ಸಂಯೋಜಕರಾದ ಎಸ್.ಆರ್. ಅನಂತ್, ಎಚ್.ಕೆ. ರೇಷ್ಮಾ, ಗ್ರಾಪಂ ಸಂಯೋಜಕರಾದ ಕೆ.ಎಸ್. ಪ್ರಕಾಶ್, ಕೆ. ಮಹದೇವಶೆಟ್ಟಿ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.