ಇಲವಾಲದಿಂದ ಭಾರತ ನಿರ್ಮಾಣ್ ಪಾದಯಾತ್ರೆ
ಮೈಸೂರು: ಚಾಮುಂಡೇಶ್ವರಿ ಕ್ಷೇತ್ರದ ಭಾರತ ನಿರ್ಮಾಣ್ ಪಾದಯಾತ್ರೆಯು ನ.14 ರಂದು ಇಲವಾಲದಿಂದ ಆರಂಭವಾಗಲಿದೆ ಎಂದು ಮಾಜಿ ಶಾಸಕ ಎಂ. ಸತ್ಯನಾರಾಯಣ ಹೇಳಿದರು.
ಬುಧವಾರ ಬೋಗಾದಿ ಬಡಾವಣೆಯಲ್ಲಿ ನಡೆದ ಲೋಕಸಭಾ ಚುನಾವಣೆಯ ಭಾರತ ನಿರ್ಮಾಣ್ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 7ಕ್ಕೆ ಇಲವಾಲದ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಸಂಸದ ಎಚ್. ವಿಶ್ವನಾಥ್ ಪಾದಯಾತ್ರೆಗೆ ಚಾಲನೆ ನೀಡಲಾಗುವುದು. ಇಲವಾಲದಿಂದ ಹಿನಕಲ್ವರೆಗೆ ಪಾದಯಾತ್ರೆ ಸಾಗಲಿದೆ ಎಂದರು.
ಜಿಪಂ ಮಾಜಿ ಅಧ್ಯಕ್ಷ ಕೆ.ಮರೀಗೌಡ ಮಾತನಾಡಿ, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಪಾದಯಾತ್ರೆ ಯಶಸ್ವಿಗೊಳಿಸಬೇಕು. ಈ ಭಾರಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಪಕ್ಷದ ಅಭ್ಯರ್ಥಿ ಗೆಲ್ಲಿಸುವಂತೆ ಕೋರಿದರು.ಜಿಪಂ ಅಧ್ಯಕ್ಷ ಕೂರ್ಗಳ್ಳಿ ಎಂ.ಮಹದೇವು, ತಾಪಂ ಅಧ್ಯಕ್ಷೆ ನಿರ್ಮಲ ಹೊನ್ನಪ್ಪ, ಜಿಪಂ ಸದಸ್ಯ ಪಟೇಲ್ ಜವರೇಗೌಡ, ಮಾಜಿ ಸದಸ್ಯ ಜವರೇಗೌಡ, ಎಪಿಎಂಸಿ ಅಧ್ಯಕ್ಷ ಹೊಸಹುಂಡಿ ರಘು, ಉಪಾಧ್ಯಕ್ಷ ಸಿದ್ದಯ್ಯ, ಡಿಸಿಸಿ ಸದಸ್ಯ ಕೃಷ್ಣಕುಮಾರ್ ಸಾಗರ್, ನಾಗವಾಲ ನರೇಂದ್ರ, ತಾಪಂ ಸದಸ್ಯ ಸೋಮಣ್ಣ, ಶ್ರೀನಿವಾಸ್, ಮುಖಂಡರಾದ ರವಿ, ಸಾಲುಂಡಿ ಬಸಪ್ಪ, ಮಾಕಿ ಮಹದೇವ, ನಟರಾಜ್, ಮಾರ್ಬಳ್ಳಿ ಕುಮಾರ್, ಹಿನಕಲ್ ಪ್ರಕಾಶ್, ಉದಯ್, ಮೀನಾಕ್ಷಿ, ಕೆಂಚಪ್ಪ, ಮೆಲ್ಲಹಳ್ಳಿ ಮಹದೇವಸ್ವಾಮಿ, ಎಂ.ಎಚ್. ರಾಜಶೇಖರಮೂರ್ತಿ, ಲಕ್ಷ್ಮಯ್ಯ, ಬೆಳವಾಡಿ ಶ್ರೀನಿವಾಸ್, ಸೋಮಶೇಖರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

