ಮೈಸೂರು

'ಯುದ್ಧ ಆಗದಂತೆ ಯುವಶಕ್ತಿ ಒಗ್ಗೂಡಿಸಿ'

Published On :

ಹುಣಸೂರು: ವಿಶ್ವದಲ್ಲಿ ಮೂರನೇ ಮಹಾಯುದ್ಧ ಆಗದಂತೆ ಮನಸುಗಳನ್ನು ಒಂದುಗೂಡಿಸುವ ಕಾರ್ಯ ಯುವಶಕ್ತಿಯಿಂದ ಆಗಬೇಕೆಂದು ವೇದಿಕೆಯ ಸಂಚಾಲಕಿ, ಮೈಸೂರು ಮಹಾಜನ ಕಾಲೇಜಿನ ಆಂಗ್ಲ ಭಾಷೆಯ ಸಹ ಪ್ರಾಧ್ಯಾಪಕಿ ಪ್ರೊ. ಇಂದ್ರಾಣಿ ಹೇಳಿದರು.
ಪಟ್ಟಣದ ಡಿ. ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾಂಗಣದಲ್ಲಿ ಇತಿಹಾಸ ವಿಭಾಗದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಜಪಾನ್ ಮೇಲೆ ಎರಡನೇ ಮಹಾಯುದ್ಧದ ಪರಿಣಾಮಗಳು ಕುರಿತಾದ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.
ಜಪಾನ್ ಅನುಭವಿಸಿದ ನೋವು ಇಂದು ನಮ್ಮೆಲ್ಲರಿಗೂ ಅರಿವು ಆಗಬೇಕು. ಶಾಂತಿ ನಮ್ಮ ಮಂತ್ರವಾಗಬೇಕು. ಕೋಪ ಎಲ್ಲ ಅನಾಹುತಗಳಿಗೂ ಮೂಲ ಎಂಬುದನ್ನು ಅರಿಯಬೇಕು. ಪರ್ಲ್ ಹಾರ್ಬರ್‌ನಲ್ಲಿ 1945ರಲ್ಲಿ ಜಪಾನ್, ಅಮೆರಿಕಾ ಮತ್ತು ಮಿತ್ರ ದೇಶಗಳ 350ಕ್ಕೂ ಹೆಚ್ಚು ಯುದ್ಧನೌಕೆಗಳು, ಆರು ಸರಕು ಸಾಗಾಣಿಕೆ ನೌಕೆಗಳನ್ನು ಸುಟ್ಟು ಹಾಕಿದ ಪರಿಣಾಮ, ಹಿರೋಷಿಮಾ ಮತ್ತು ನಾಗಾಸಾಕಿ ನಗರಗಳ ಮೇಲೆ ಅಣುಬಾಂಬ್ ದಾಳಿಯನ್ನೆದುರಿಸಿ ಸೋತು ಸೊರಗಿತು. ಜಪಾನ್ ತನ್ನ ಹಠಮಾರಿತನದಿಂದ ಎಂದೂ ಮರೆಯಲಾಗದ ಹೊಡೆತವನ್ನೇ ತಿಂದಿತು. ಪ್ರತಿಯೊಬ್ಬರ ಮನದಲ್ಲೂ ಇಂಥ ದ್ವೇಷ, ಅಸಹನೆಯೇ ಭೀಕರ ಯುದ್ಧಗಳಿಗೆ ಕಾರಣವಾಗುತ್ತಿದೆ ಎಂದರು.
ಪ್ರಾಂಶುಪಾಲ ಪ್ರೊ.ಎಚ್.ಸಿ. ಲೋಹಿತಾಶ್ವ ಮಾತನಾಡಿದರು. ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಕೆ.ಎನ್. ಮೋಹನ್, ಅಧ್ಯಾಪಕರಾದ ಸಂತೋಷ್, ಪೂರ್ಣಯೋಗಿ  ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.