ಮೈಸೂರು

ನಾಯಕತ್ವ ವೃದ್ಧಿಗೆ ಮಾರ್ಗದರ್ಶನ

Published On :

ಮೈಸೂರು: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಜೀವನ ರೂಪಿಸಿಕೊಳ್ಳಬೇಕಾದರೆ ಅಗತ್ಯವಾದ ನಾಯಕತ್ವದ ಗುಣವನ್ನು ವಿದ್ಯಾರ್ಥಿಗಳಲ್ಲಿ ರೂಢಿಸುವ ಸಲುವಾಗಿ ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಕಾರ್ಯಾಗಾರ ನಡೆಸಲಾಯಿತು.
ಕಾಲೇಜು ಶಿಕ್ಷಣ ಇಲಾಖೆ ಹಾಗೂ ನಗರದ ಎಲ್ಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಶುಕ್ರವಾರ ಏರ್ಪಡಿಸಿದ್ದ ಕಾರ್ಪೊರೇಟ್ ಲೀಡರ್‌ಶಿಪ್ ಎಂಬ ವಿಷಯ ಕುರಿತ ಎರಡನೇ ದಿನದ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಮಹಾರಾಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿನಿ ಸುಗುಣ ಮಾತನಾಡಿ, ನಾನು ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ತೇರ್ಗಡೆಯಾಗುತ್ತೇನೆ ಎಂಬ ಆತ್ಮವಿಶ್ವಾಸವಿದೆ. ಅಲ್ಲದೆ ಜೀವನದಲ್ಲಿ ಇರಿಸಿಕೊಂಡಿರುವ ಗುರಿಯನ್ನು ಮುಟ್ಟುವ ಛಲವೂ ಇದೆ. ಆದರೆ ಈ ಎಲ್ಲ ಸಾಧನೆಗೆ ಇಂಗ್ಲಿಷ್ ಸಂವಹನದ ಕೊರತೆ ನನಗೆ ಕೀಳರಿಮೆ ಉಂಟು ಮಾಡಿದೆ ಎಂದರು.  
ಮಹಾರಾಣಿ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿ ಚೈತ್ರಾ ಮಾತನಾಡಿ, ನಾನು 5 ವರ್ಷದವಳಾಗಿದ್ದಾಗ ತಾಯಿಯನ್ನು ಕಳೆದುಕೊಂಡೆ. ಆ ನಂತರ ತಂದೆ ನನ್ನ ಪಾಲನೆ ಹಾಗೂ ಪೋಷಣೆಗೆ ಉದಾಸೀನತೆ ತೋರಿದರು. ಆದರೆ ನನ್ನ ಸೋದರ ಮಾವ ಮತ್ತು ಅತ್ತೆ ಅವರು ನನ್ನನ್ನು ಸಾಕಿ ವಿದ್ಯೆ ಕೊಡಿಸುತ್ತಿದ್ದಾರೆ. ಅವರ ಸಹಾಯ ಮರೆಯಲಾರೆ. ಏನೇ ಕಷ್ಟ ಎದುರಾದರೂ ಉನ್ನತ ಶಿಕ್ಷಣ ಪಡೆದು ಜೀವನದಲ್ಲಿ ಏನ್ನನಾದರೂ ಸಾಧಿಸುವ ಅಚಲ ವಿಶ್ವಾಸ ನನಗಿದೆ ಎಂದರು.  
ಕಾರ್ಯಾಗಾರವನ್ನು ಗ್ಲೋಬಲ್ ಶೇಪರ್ಸ್ ಫೋರಂನ ಸಂಸ್ಥಾಪಕ ನಿರ್ದೇಶಕ ಸಂಗೀತ ವರ್ಗೀಸ್ ನಡೆಸಿಕೊಟ್ಟರು. ನೋಡೆಲ್ ಅಧಿಕಾರಿ ಪ್ರೊ.ಕೆ.ಪಿ. ರಘೋತ್ತಮ್, ಮಹಾರಾಣಿ ಮಹಿಳಾ ಕಲಾ ಕಾಲೇಜಿನ ಪ್ರಾಂಶುಪಾಲ ಪ್ರೊ. ಪುರುಷೋತ್ತಮ್, ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಿವಣ್ಣ, ವಿಜ್ಞಾನ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಪಿ. ಸುಶೀಲಾ, ಸಿದ್ಧಾರ್ಥನಗರದ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಪ್ರೊ. ವಿಜಯಲಕ್ಷ್ಮಿ, ಪ್ರೊ. ಉದಯ್‌ಶಂಕರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.