ವಿನಾಶದ ಅಂಚಿಗೆ ಮಠಗಳು: ಶಿವಕುಮಾರ್
ಎಚ್.ಡಿ. ಕೋಟೆ: ರಾಜ್ಯದಲ್ಲಿ ವೀರಶೈವ ಸಮಾಜಕ್ಕೆ ಸೇರಿದ 5706 ಮಠಗಳಲ್ಲಿ 1828 ಮಠಗಳು ಉಳಿದಿದ್ದು, 3828 ಮಠಗಳು ವಿನಾಶದ ಅಂಚಿಗೆ ತಲುಪಿವೆ ಎಂದು ಕಾವೇರಿ ಗ್ರಾಮೀಣ ಬ್ಯಾಂಕ್ನ ವ್ಯವಸ್ಥಾಪಕ ಶಿವಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.
ತಾಲೂಕಿನ ಬಿ. ಮಟಗೆರೆ ಗ್ರಾಮದಲ್ಲಿ ಆಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾಗೂ ಕಸ್ತೂರಿ ಜನನಿ ಸಂಸ್ಥೆಯ ಸಹಯೋಗದಲ್ಲಿ ಶನಿವಾರ ನಡೆದ ಶರಣ ತತ್ವ ಚಿಂತನಾ ಸಮಾವೇಶದಲ್ಲಿ ಮಾತನಾಡಿದ ಅವರು, ಪ್ರಸ್ತುತ 1089 ಮಠಗಳು ಪ್ರಬುದ್ಧಮಾನವಾಗಿ ಸೇವೆ ಸಲ್ಲಿಸುತ್ತಿವೆ ಎಂದರು.
12ನೇ ಶತಮಾನದ ಶರಣರು ಆತ್ಮ ಕಲ್ಯಾಣದ ಜೊತೆ ಲೋಕ ಕಲ್ಯಾಣಕ್ಕಾಗಿ ದುಡಿದರು. ಪರರಿಗೋಸ್ಕರ ಬದುಕುವುದೇ ಧರ್ಮ ಎಂದು ನಂಬಿದ್ದ ಅವರು ಗುರುವನ್ನೇ ದೇವರು ಎಂದು ನಂಬಿದ್ದರು. ಏಕೆಂದರೆ ಗು ಎಂದರೆ ಅಂಧಕಾರ ರು ಎಂದರೇ ಓಡಿಸುವವರು ಎಂದು ಅವರು ಅಂದೇ ತಿಳಿದಿದ್ದರು. ಆ ಕಾರಣ ಅವರು 12ನೇ ಶತಮಾನದಲ್ಲಿ ಅಜ್ಞಾನವನ್ನು ಹೊಡೆದು ಓಡಿಸಲು ಪಣತೊಟ್ಟು ನಿಂತಿದ್ದರು. ಇದಕ್ಕೆ ಇಂಬು ನೀಡುವಂತೆ ಮಹಿಳೆಯರಿಗೂ ಅಂದು ಗಂಡಸರಷ್ಟೇ ಸಮಾನವಾಗಿ ಕಾಣುತ್ತಿದ್ದುದೇ ಸಾಕ್ಷಿ ಎಂದು ತಿಳಿಸಿದರು.
ಪಟ್ಟಣದ ಸಂತ ಮರಿಯಮ್ಮ ಪ್ರೌಢಶಾಲೆಯ ಕನ್ನಡ ಶಿಕ್ಷಕ ಮಹದೇವಪ್ಪ ಮಾತನಾಡಿ, 12ನೇ ಶತಮಾನದ ಹಿಂದೆ ಕಂದಾಚಾರ, ಹೋಮಾಚಾರ, ಪ್ರಾಣಿ ಬಲಿ ಇತ್ಯಾದಿ ಮೂಢನಂಬಿಕೆಗಳನ್ನು ನಂಬಿ ಆಚರಿಸುತ್ತಿದ್ದರು. ಆದರೆ 12ನೇ ಶತಮಾನದ ಶರಣರು ಈ ಎಲ್ಲಾ ಮೂಢನಂಬಿಕೆಯನ್ನು ಬಡಿದೋಡಿಸಿದ ಹಿರಿಮೆ ಅವರಿಗೆ ಸಲ್ಲುತ್ತದೆ. 12ನೇ ಶತಮಾನವು 21ನೇ ಶತಮಾನಕ್ಕಿಂತ ಹೆಚ್ಚು ಮುಂದಿದ್ದರು. ಏಕೆಂದರೆ ಅಂದು ಉದ್ಭವವಾದ ಸಾಹಿತ್ಯವನ್ನು ಇನ್ನೂ ಮೀರಿಸಲು ಯಾರಿಂದಲೂ ಸಾಧ್ಯವಾಗಿಲ್ಲ ಎಂದು ಅಭಿಪ್ರಾಯಪಟ್ಟರು.
ಪಡುವಲು ವಿರಕ್ತ ಮಠದ ಮಹದೇವಸ್ವಾಮೀಜಿ ಉದ್ಘಾಟಿಸಿ ಆಶೀರ್ವಚನ ನೀಡಿದರು. ಶರಣ ಸಾಹಿತ್ಯ ಪರಿಷತ್ನ ಅಧ್ಯಕ್ಷ ಸಿ.ಎಸ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಗಿರೀಶ್ಮೂರ್ತಿ, ಬಿಜೆಪಿ ಅಧ್ಯಕ್ಷ ಯೋಗೀಶ್ಕುಮಾರ್, ವೀರಶೈವ ಸಮಾಜದ ಯುವ ಅಧ್ಯಕ್ಷ ಮಹದೇವಸ್ವಾಮಿ, ಗುರುಸ್ವಾಮಿ, ಬಾಡಗ ಮಾದಪ್ಪ, ಸಿದ್ದಮಲ್ಲಪ್ಪ, ಶಿವಕುಮಾರ್, ಮಹದೇವಪ್ಪ, ಗಣಪತಿ, ಕಸ್ತೂರಿ ಮಹೇಶ್, ಆಕಲ ಶಿವರಾಜು, ಮಹದೇವಮ್ಮ, ಮಹದೇವಸ್ವಾಮಿ, ವಿಶ್ವನಾಥ್, ಆಲನಹಳ್ಳಿ ರಮೇಶ್, ರವಿಕುಮಾರ್, ನಾಗೇಶ್ ವಾಸುಕಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

