ಮುನಿಸಿಕೊಂಡವರೀಗ ಕಮಲ ಪಾಳಯದಲ್ಲಿ...
ಗುಂಡ್ಲುಪೇಟೆ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಗೆ ನಿಷ್ಠೆ ಪ್ರದರ್ಶಿಸಿದ್ದ ಗುಂಡ್ಲುಪೇಟೆ ನಾಯಕ ಜನಾಂಗದ ಮುಖಂಡ, ಪುರಸಭೆ ಮಾಜಿ ಅಧ್ಯಕ್ಷ ಎಂ.ಪುಟ್ಟರಂಗನಾಯಕ ಮತ್ತು ಎನ್.ಮಲ್ಲೇಶ್ ಸೇರಿದಂತೆ 8 ಪುರಸಭಾ ಸದಸ್ಯರು ಮತ್ತೆ ಕಮಲ ಪಾಳೆಯದಲ್ಲಿ ಕಾಣಿಸಿ ಕೊಂಡಿದ್ದಾರೆ.
ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಕೆಜೆಪಿ ವರಿಷ್ಠರಾಗಿದ್ದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಕೆಜೆಪಿಯನ್ನು ಬಿಜೆಪಿಗೆ ವಿಲೀನಗೊಳಿಸಿದ ಮೇಲಂತೂ ನಾಯಕರ ಪಡೆ ಮುನಿಸಿಕೊಂಡಿದೆ.
ಕೆಜೆಪಿಯಲ್ಲಿದ್ದ ವಿಧಾನಸಭೆಯ ಪರಾಜಿತ ಅಭ್ಯರ್ಥಿ ನಿರಂಜನಕುಮಾರ್ ಮತ್ತವರ ಬೆಂಬಲಿಗರ ಪಡೆ ಸಾರಾಸಗಟಾಗಿ ಬಿಜೆಪಿಗೆ ಹಾರಿತು. ಆದರೆ ಪುಟ್ಟರಂಗನಾಯಕ ಹಾಗೂ ಅವರ ಪುತ್ರ ಪುರಸಭೆ ಸದಸ್ಯ ಪಿ.ಗಿರೀಶ್ ಬೆಂಬಲಿತ 8 ಮಂದಿ ಸದಸ್ಯರು ರಾಜಕೀಯವೇ ಬೇಡ ಎಂಬ ಮಟ್ಟಿಗೆ ತಟಸ್ಧರಾಗಿದ್ದರು.
ಪುಟ್ಟರಂಗನಾಯಕರನ್ನು ಪಕ್ಷ ಬಿಟ್ಟು ಹೋಗದಂತೆ ತಡೆಯಲು ನಿರಂಜನಕುಮಾರ್ ಹರಸಾಹಸ ಪಟ್ಟರು. ಆದರೆ ಒಂದು ಹೆಜ್ಜೆ ಮುಂದೆ ಹೋದ ಪುಟ್ಟರಂಗನಾಯಕ ಮತ್ತವರ ಪಡೆ ಕಾಂಗ್ರೆಸ್ಗೆ ಹೋಗುತ್ತದೆ ಎಂದು ಪಟ್ಟಣದಲ್ಲೆಡೆ ವದಂತಿ ಹರಡಿತ್ತು.
ಲೋಕಸಭೆ ಚುನಾವಣೆ ಸಮೀಪಿಸುತ್ತಿದಂತೆ ಪುಟ್ಟರಂಗನಾಯಕ ಮತ್ತವರ ಬೆಂಬಲಿಗರು ಹಾಗೂ ಪುರಸಭೆ 8 ಸದಸ್ಯರು ಹಾಗೂ ನಾಯಕ ಜನಾಂಗದ ಮುಖಂಡ ಎನ್.ಮಲ್ಲೇಶ್ರನ್ನು ಶನಿವಾರ ರಾತ್ರಿ ನಿರಂಜನಕುಮಾರ್ ಮತ್ತವರ ಬೆಂಬಲಿಗರು ಮನವೊಲಿಸಿದ ಬಳಿಕ ಭಾನುವಾರ ನಡೆದ ಬಿಜೆಪಿ ಸಭೆಯಲ್ಲಿ ಕಾಣಿಸಿಕೊಂಡರು.
ಪುಟ್ಟರಂಗನಾಯಕ ಅವರ ಹಿಡಿತ ಪಟ್ಟಣದಲ್ಲಿರುವ ಮಾಹಿತಿ ಅರಿತ ಬಿಜೆಪಿ ಹಿರಿಯ ಮುಖಂಡರ ಆದೇಶದಂತೆ ಮುನಿಸಿಕೊಂಡಿದ್ದ ಪುಟ್ಟರಂಗನಾಯಕ ಮತ್ತವರ 8 ಮಂದಿ ಪುರಸಭೆ ಸದಸ್ಯರ ತಂಡ ಭಾನುವಾರದಿಂದ ಕೇಸರಿ ಪಾಳೆಯದಲ್ಲಿ ಕಾಣಿಸಿಕೊಳ್ಳುವ ಮೂಲಕ ಪಕ್ಷಾಂತರಗೊಳ್ಳುತ್ತಾರೆಂಬ ವದಂತಿಗೆ ತೆರೆ ಬಿದ್ದಂತಾಗಿದೆ.
ಮಲ್ಲಿದಾಸ್ ಮುನಿಸು: ಬೇಗೂರು ತಾಪಂ ಕ್ಷೇತ್ರದ ಬಿಜೆಪಿ ಸದಸ್ಯ ಮಲ್ಲಿದಾಸ್ ಈಗ ಮುನಿಸಿಕೊಂಡಿದ್ದಾರೆ. ಭಾನುವಾರ ಬೇಗೂರು ಹೋಬಳಿ ಕೇಂದ್ರದಲ್ಲಿ ನಡೆದ ಬಿಜೆಪಿ ಪಾದಯಾತ್ರೆ ಸಮಯದಲ್ಲಿ ಗೈರಾಗಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಕಾರ್ಯಕ್ರಮದಲ್ಲಿ ಇವರು ಭಾಗವಹಿಸುತ್ತಿಲ್ಲ. ಭಾನುವಾರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್.ಕೃಷ್ಣಮೂರ್ತಿ ಬೇಗೂರಿಗೆ ಬಂದಿದ್ದಾಗ ಗೈರಾಗುವ ಮೂಲಕ ಬಿಜೆಪಿಗೆ ಗುಡ್ಬೈ ಹೇಳಲು ಸಿದ್ಧತೆ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.
ತಾಪಂ ಸದಸ್ಯ ಮಲ್ಲಿದಾಸ್ ಅವರನ್ನು ಮಾತನಾಡಿಸಿದಾಗ ಬಿಜೆಪಿ ಮುಖಂಡರೊಂದಿಗೆ ಬೇಸರವಾಗಿರುವುದು ನಿಜ. ಹಾಗಾಗಿ ಸದ್ಯಕ್ಕೆ ತಟಸ್ಥನಾಗಿದ್ದೇನೆ. ಸ್ವಾಭಿಮಾನ ಇರುವವರು ಸಚಿವ ಮಹದೇವಪ್ರಸಾದ್ ಇರುವ ಕಾಂಗ್ರೆಸ್ ಸೇರಲು ಆಗಲ್ಲ ಎಂದು ಸ್ಪಷ್ಟ ಪಡಿಸಿದರು. ಇತ್ತ ಬಿಜೆಪಿಯಲ್ಲಿ ಇರಲ್ಲ. ಅತ್ತ ಕಾಂಗ್ರೆಸ್ಗೂ ಹೋಗಲ್ಲ ಎಂದ ಮೇಲೆ ಇನ್ನು ಉಳಿದಿರುವ ಜೆಡಿಎಸ್ಗೆ ಹೋಗಬಹುದು ಎಂಬ ಮಾತು ಕೇಳಿ ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

