ನಂಜನಗೂಡಿನಲ್ಲಿ ಎಆರ್‌ಕೆಯಿಂದ ಪ್ರಚಾರ
ನಂಜನಗೂಡು: ಶ್ರೀಕಂಠೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಆರ್. ಕೃಷ್ಣಮೂರ್ತಿ ಚುನಾವಣಾ ಪ್ರಚಾರ ಆರಂಭಿಸಿದರು.
ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಅವರು, ಕಳೆದ ಬಾರಿ ಕೆಲವು ತಾಂತ್ರಿಕ ಕಾರಣಗಳಿಂದ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ ಅಲ್ಪ ಮತಗಳಿಂದ ಪರಾಭವಗೊಂಡೆ.
ಆದರೆ ಈ ಬಾರಿ ಚುನಾವಣೆಯ ಪರಿಸ್ಥಿತಿಯೇ ಭಿನ್ನವಾಗಿದೆ. ಜನತೆಯ ಒಲವು ಅನುಕಂಪ ನನ್ನ ಮೇಲೆ ಇರುವುದರಿಂದ ಗೆಲುವು ನಿಶ್ಚಿತ. ಮತದಾರರು ನನ್ನನ್ನು ಈ ಬಾರಿ ಕೈ ಬಿಡುವುದಿಲ್ಲ ಎಂಬ ವಿಶ್ವಾಸ, ನಂಬಿಕೆ ಇದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದರೂ ಈ ಭಾಗದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ವಿ. ಶ್ರೀನಿವಾಸಪ್ರಸಾದ್, ಡಾ.ಎಚ್.ಸಿ. ಮಹದೇವಪ್ಪ, ಎಚ್.ಎಸ್. ಮಹದೇವಪ್ರಸಾದ್ ಅವರಂತಹ ಘಟಾನುಘಟಿಗಳಿದ್ದರೂ ಯುಪಿಎ ಸರ್ಕಾರ ವೈಫಲ್ಯ, ಭ್ರಷ್ಟಾಚಾರ, ಹಗರಣಗಳಿಂದ ಜನತೆ ರೋಸಿ ಹೋಗಿದ್ದಾರೆ. ನರೇಂದ್ರ ಮೋದಿಯವರ ಅಲೆ, ವಾಜಪೇಯಿ ಸಾಧನೆ, ದೇಶದ ಭದ್ರತೆ, ಬಿಜೆಪಿಯತ್ತ ಯುವ ಜನಾಂಗ ವಾಲಿದೆ. ಅಲ್ಲದೇ, ಬಿಜೆಪಿ, ಕೆಜೆಪಿ, ಬಿಎಸ್‌ಆರ್ ಪಕ್ಷ ಮತ್ತೆ ಒಂದಾಗಿರುವುದು ಕಳೆದ 9 ತಿಂಗಳಲ್ಲಿ ರಾಜ್ಯ ಸರ್ಕಾರದ ವೈಫಲ್ಯ ಬಿಜೆಪಿಗೆ ಪೂರಕವಾಗಿರುವುದರಿಂದ ನನ್ನ ಗೆಲುವು ಖಚಿತ ಎಂದು ಹೇಳಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಮಲ್ಲಿಕಾರ್ಜುನಪ್ಪ ಯಾವುದೇ ಕಾರಣಕ್ಕೂ ಬಿಜೆಪಿ ತೊರೆಯುವುದಿಲ್ಲ ಎಂಬ ನಂಬಿಕೆ ಇದೆ. ಪ್ರಚಾರ ಆರಂಭಿಸುವ ಮುನ್ನ ಅವರನ್ನು ಭೇಟಿ ಮಾಡಿ ಮಾತನಾಡಿದ್ದೇನೆ ಎಂದು ಹೇಳಿದರು.
ಮಾಜಿ ಶಾಸಕ ನಂಜುಂಡಸ್ವಾಮಿ, ರಾಜ್ಯ ಮುಖಂಡ ಎಸ್. ಮಹದೇವಯ್ಯ, ಜಿಪಂ ಸದಸ್ಯರಾದ ಶಿವರಾಂ, ಚಿಕ್ಕರಂಗನಾಯ್ಕ, ಸಿದ್ದವೀರಪ್ಪ, ಕಿರಾತಾರ್ಜುನ ಮೂರ್ತಿ, ಜಿಲ್ಲಾ ಬಿಜೆಪಿ ಮುಖಂಡ ಎನ್.ಆರ್. ಕೃಷ್ಣಪ್ಪಗೌಡ, ಕಪಿಲೇಶ್, ಡಾ.ಚಿದಾನಂದ, ಗುರುಪಾದ, ಮಂಗಳಾ ಸೋಮಶೇಖರ್, ಇಲಿಯಾಸ್ ಅಹಮದ್, ಶಂಕರಪುರ ರಂಗಸ್ವಾಮಿ, ಪ್ರೇಮಾ ಶಂಭಯ್ಯ, ಪುರುಷೋತ್ತಮ್, ಆಕ್ಲ ಮಹದೇವಪ್ಪ, ಸಣ್ಣಯ್ಯ, ಜಯರಾಂ , ನಂದಿನಿ ಲಿಂಗರಾಜು, ಕೆ.ಎಸ್. ಮಹೇಶ್‌ಕುಮಾರ್, ನಾಗೇಂದ್ರ, ರಷೀದ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

