ಪ್ರೊ.ದೇಜಗೌ ಆರೋಗ್ಯ ವಿಚಾರಿಸಿದ ಎಸ್.ಎಂ.ಕೃಷ್ಣ
ಮೈಸೂರು: ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಮಂಗಳವಾರ ಹಿರಿಯ ಸಾಹಿತಿ ಡಾ.ದೇಜಗೌ ಅವರನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದರು.
ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ಸಾಹಿತಿ ಡಾ.ದೇಜಗೌ ಅವರನ್ನು ಜಯಲಕ್ಷ್ಮಿಪುರಂನ ಚಂದ್ರಕಲಾ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ಎಸ್.ಎಂ. ಕೃಷ್ಣ ಅವರ ಆರೋಗ್ಯ ವಿಚಾರಿಸಿ, ಬಹುಬೇಗ ಚೇತರಿಸಿಕೊಳ್ಳುವಂತೆ ಶುಭ ಕೋರಿದರು.
ನಾಡೋಜ ಡಾ.ದೇಜಗೌ ಅವರಿಗೆ ಅನಾರೋಗ್ಯವಾಗಿದೆ ಎಂಬ ವಿಷಯ ತಿಳಿದು, ಅವರನ್ನು ಕಂಡು ಯೋಗಕ್ಷೇವು ವಿಚಾರಿಸಿಲು ಬಂದಿದ್ದೇನೆ.
ಬಹಳ ವರ್ಷಗಳ ಒಡನಾಟ ನನ್ನ ಮತ್ತು ದೇಜಗೌ ನಡುವೆ ಇದೆ. ಆದ್ದರಿಂದ ಭಗವಂತ ಅವರಿಗೆ ಆರೋಗ್ಯ ನೀಡಲಿ.
ದಿನ ನಿತ್ಯದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸುವಂತೆ ಆಗಲಿ. ಈ ನಡುವೆ ಅಂಬರೀಶ್ ಅವರ ಆರೋಗ್ಯದಲ್ಲಿ ಚೇತರಿಕೆ ಆಗಿರುವುದು ಸಂತೋಷದ ಬೆಳವಣಿಗೆ ಎಂದು ಅವರು ಹೇಳಿದರು. ಈ ವೇಳೆ ಮಾಜಿ ಸಚಿವ ಬಿ.ಎಲ್. ಶಂಕರ್, ಶಾಸಕ ವಾಸು, ಮಾಜಿ ಶಾಸಕ ಡಿ. ಮಾದೇಗೌಡ, ಮುಖಂಡರಾದ ಟಿ.ಎಸ್. ರವಿಶಂಕರ್, ವಿಕ್ರಾಂತ್ ಪಿ. ದೇವೇಗೌಡ ಇದ್ದರು.
ಎಸ್.ಎಂ. ಕೃಷ್ಣ: ವಿಶ್ವನಾಥ್ ಭೇಟಿ
ಮೈಸೂರು: ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಹಾಲಿ ಸಂಸದ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಎಚ್. ವಿಶ್ವನಾಥ್ ಅವರು ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರನ್ನು ಮಂಗಳವಾರ ಸಂಜೆ ಭೇಟಿ ಮಾಡಿ, ಚುನಾವಣಾ ಪ್ರಚಾರಕ್ಕೆ ಸಹಕಾರ ನೀಡುವಂತೆ ಕೋರಿದರು. ಇದಕ್ಕೂ ಮುನ್ನ ಯಾದವಗಿರಿಯಲ್ಲಿರುವ ರಾಮಕೃಷ್ಣ ಆಶ್ರಮಕ್ಕೆ ಭೇಟಿ ನೀಡಿ, ಮುಕ್ತಿದಾನಂದಜಿ ಅವರ ಆಶೀರ್ವಾದ ಪಡೆದರು. ಬಳಿಕ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರನ್ನು ಭೇಟಿಯಾದರು. ಶಾಸಕ ವಾಸು, ವಿಧಾನಪರಿಷತ್ ಮಾಜಿ ಸದಸ್ಯ ಡಿ.ಮಾದೇಗೌಡ, ಮಾಜಿ ಮೇಯರ್ ಮೋದಾಮಣಿ, ಮುಖಂಡರಾದ ವಿಕ್ರಾಂತ್ ದೇವೇಗೌಡ, ಮಲ್ಲಿಗೆ ವೀರೇಶ್, ಶಾರದಾ ಸಂಪತ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

