ಮೈಸೂರು

ಮನುಗನಹಳ್ಳಿಯಲ್ಲಿ ಧ್ರುವ ಪ್ರಚಾರ

Published On :

ಎಚ್.ಡಿ. ಕೋಟೆ: ಚಾಮರಾಜನಗರ ಲೋಕಸಭಾ ಕಾಂಗ್ರೆಸ್ ಅಭ್ಯರ್ಥಿ, ಸಂಸದ ಆರ್.ಧ್ರುವನಾರಾಯಣ ತಾಲೂಕಿನ ಮನುಗನಹಳ್ಳಿ ಗ್ರಾಮಕ್ಕೆ ಬುಧವಾರ ಭೇಟಿ ನೀಡಿ ಮತಯಾಚಿಸಿದರು. ಲೋಕಸಭಾ ಚುನಾವಣೆಗೆ ಎರಡನೇ ಬಾರಿಗೆ ಸ್ಪರ್ಧಿಸಿರುವ ನನ್ನನ್ನು ಅಧಿಕ ಮತಗಳನ್ನು ನೀಡಿ ಗೆಲ್ಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಸಂಸದನಾಗಿ ತಮ್ಮ ಅನುದಾನದಲ್ಲಿ ತಾಲೂಕಿನಲ್ಲಿ ಉತ್ತಮ ಕೆಲಸ ಮಾಡಲಾಗಿದೆ. ಪ್ರಾಮಾಣಿಕವಾದ ರೀತಿಯಲ್ಲಿ ಅನುದಾನ ತಂದಿದ್ದೇನೆ. ತಾಲೂಕಿನಲ್ಲಿ ತಂಬಾಕು ಮಾರುಕಟ್ಟೆ, 13 ಕೋಟಿ ವೆಚ್ಚದಲ್ಲಿ ಏಕಲವ್ಯ ಶಾಲೆ, ರಾಷ್ಟ್ರೀಯ ಮಾಧ್ಯಮ ಅಭಿಯಾನದಲ್ಲಿ 9.50 ಕೋಟಿಗಳನ್ನು, ಹಳ್ಳಿಗಳಿಗೆ ಶಾಶ್ವತ ಕುಡುಯುವ ನೀರಿನ ಯೋಜನೆಗೆ ಕೇಂದ್ರ ಸರ್ಕಾರದಿಂದ ಅನುದಾನ, ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳು, ತಮಗೆ ಬಂದ ಅನುದಾನದಲ್ಲಿ ಅಂಬೇಡ್ಕರ್, ಶಾದಿಮಹಲ್, ಜಗಜೀವನರಾಂ ಭವನ ಸೇರಿದಂತೆ ಹಲವು ಭವನಗಳಿಗೆ ಅನುದಾನವನ್ನು ಎಲ್ಲ ಜನಾಂಗದವರಿಗೂ ನೀಡಿದ್ದೇನೆ ಎಂದು ಅವರು ಹೇಳಿದರು.
ಸರಗೂರು ಬ್ಲಾಕ್ ಅಧ್ಯಕ್ಷ ಬಾಲಯ್ಯ, ಪಟ್ಟಣದ ಅಧ್ಯಕ್ಷ ತಮ್ಮಣ್ಣೇಗೌಡ, ಜಿಪಂ ಸದಸ್ಯರಾದ ಎಚ್.ಸಿ. ಮಂಜುನಾಥ್, ನಂದಿನಿ ಚಂದ್ರಶೇಖರ್, ಏಜಾಜ್‌ಪಾಷ, ರಾಜು, ಪ್ರಕಾಶ್, ಸುಂದರದಾಸ್, ಬಸಪ್ಪ, ಕೃಷ್ಣೇಗೌಡ, ಕೋಡಸೀಗೆ ರಾಜೇಗೌಡ, ಷರ್ಮಿಳಾ ಸಿದ್ದಪ್ಪ, ಶಿವಪ್ಪ ಕೋಟೆ,  ಕಾಂಗ್ರೆಸ್ ಮುಖಂಡರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.