ಆಯ್ಕೆ
ಮೈಸೂರು: ವಿಜಯನಗರ 3ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಕಾರ್ಯಕಾರಿ ಮಂಡಳಿಗೆ ಪ್ರೊ.ಎಂ.ಕೆ. ಮಹದೇವಪ್ಪ (ಗೌರವಾಧ್ಯಕ್ಷರು), ರವಿಕುಮಾರ್ (ಅಧ್ಯಕ್ಷರು), ಕೆ.ಕಾಳಿಂಗು (ಉಪಾಧ್ಯಕ್ಷರು), ಎಂ.ಕೆ. ಸುಬ್ಬೇಗೌಡ, ಈ. ಅಲ್ಲಾಬಕ್ಷಿ (ಕಾರ್ಯದರ್ಶಿ), ಆರ್.ಎಂ. ಬೊಕ್ಕಲಿಂಗಮ್ (ಖಜಾಂಚಿ), ಎನ್. ಪ್ರಕಾಶ, ಪಿ.ಸಿ. ಮಹೇಶ, ಯು.ಪಿ. ರವೀಂದ್ರ, ಸಿ.ಲೋಕೇಶ, ಸಿ. ರಾಮನಾಯ್ಕ, ಕೆ.ಟಿ. ಗೋವಿಂದರಾಜು, ಎಸ್. ಸೋಮಶೇಖರ, ಮೀರಾಮಾಚಯ್ಯ, ಟಿ. ಕೃಷ್ಣ, ಸಿ.ಬಿ. ಅರುಣಕುಮಾರ (ನಿರ್ದೇಶಕರು) ಆಯ್ಕೆಯಾಗಿದ್ದಾರೆ.
ತಪಾಸಣೆ ಶಿಬಿರ
ಮೈಸೂರು: ನಗರದ ಲಕ್ಷ್ಮೀಪುರಂನ ಪ್ರೀತಿ ಕ್ಯಾನ್ಸರ್ ಸೆಂಟರ್ ವತಿಯಿಂದ ಮಾ. 27 ರಂದು ಕ್ಯಾನ್ಸರ್ನ ಉಚಿತ ತಪಾಸಣಾ ಶಿಬಿರ ಆಯೋಜಿಸಿದೆ. ಹೆಚ್ಚಿನ ವಿವರಗಳಿಗಾಗಿ ದೂ. 4259259 ಸಂಪರ್ಕಿಸಬಹುದು.
ನಾಟಕ
ಮೈಸೂರು: ನಟನ ಸಂಸ್ಥೆಯಿಂದ ವಿಶ್ವ ರಂಗ ದಿನದ ಅಂಗವಾಗಿ ಮಾ. 27ರ ಸಂಜೆ 7ಕ್ಕೆ ಗಾನಭಾರತೀ ವೀಣೆ ಶೇಷಣ್ಣ ಭವನದಲ್ಲಿ ಮಂಡ್ಯ ರಮೇಶ್ ನಿರ್ದೇಶನದ ಊರುಭಂಗ ನಾಟಕ ಪ್ರದರ್ಶಿಸಲಿದೆ. ಮುರಳಿ ಶೃಂಗೇರಿ ಸಂಗೀತ ನೀಡುವರು. ಮಾಹಿತಿಗಾಗಿ ಮೊ 9480468327 ಸಂಪರ್ಕಿಸಬಹುದು.
ಚಾಲನೆ
ಮೈಸೂರು: ಎಸ್ಡಿಎಂಐಎಂಡಿ ಸಂಸ್ಥೆಯ ವಿದ್ಯಾರ್ಥಿಗಳ ನಿಯತಕಾಲಿಕ ಡೈಮೆನ್ಶಂಸ್ನ ಡಿಜಿಟಲ್ ಅವತರಣಿಕೆಗೆ ಎಸ್ಡಿಎಂ ಎಜುಕೇಶನಲ್ ಟ್ರಸ್ಟ್ನ ಕಾರ್ಯದರ್ಶಿ ಪ್ರೊ.ಎಸ್. ಪ್ರಭಾಕರ್ ಚಾಲನೆ ನೀಡಿದರು. ನಂತರ ಅವರು ಮಾತನಾಡಿ, ಕಾಗದ ಉಳಿಸುವ ಮೂಲಕ ನಿಸರ್ಗವನ್ನು ರಕ್ಷಿಸುವ ಇ-ಡೈಮನ್ಶಂಸ್ ಪ್ರಾರಂಭದ ಬಗ್ಗೆ ಶ್ಲಾಘಿಸಿದರು. ಉತ್ತಮ ಲೇಖನಗಳು ಮತ್ತು ವ್ಯವಹಾರ ನಿರ್ವಹಣ ಕ್ಷೇತ್ರದ ದಿಗ್ಗಜರೊಂದಿಗೆ ನಡೆಸಿದ ಸಂದರ್ಶನಗಳನ್ನೂ ಪ್ರಕಾಶಿಸುವುದರ ಮೂಲಕ ಇ-ಡೈಮೆನ್ಶಂಸ್ ವ್ಯವಹಾರ ನಿರ್ವಹಣ ವಿದ್ಯಾರ್ಥಿಗಳು ಮತ್ತು ಉದ್ಯಮ ವರ್ಗದ ನಡುವೆ ಸೇತುವೆಯಾಗಲಿದೆ ಎಂದು ಹೇಳಿದರು. ಇ- ಡೈಮನ್ಶಂಸ್ ಅನ್ನು ಮುಕ್ತವಾಗಿ ಢಿಢಿಢಿ.ಡಜಟ್ಝಟಜ.ಟಿಜಡಿ/ಜ್ಝಟಜಟಿಡ್ಝ್ಟಟಿಡ ಈ ಲಿಂಕ್ನಲ್ಲಿ ಓದಬಹುದು. ಸಾಂಪ್ರದಾಯಿಕ ಪುಸ್ತಕ ರೂಪದಲ್ಲಿ 1999 ರಿಂದ ಪ್ರಕಾಶಿತಗೊಳ್ಳುತ್ತಿದ್ದ ಡೈಮೆನ್ಶಂಸ್ ಈಗ ಅಂತರ್ಜಾಲದ ಮೂಲಕ ಹೆಚ್ಚು ಓದುಗರನ್ನು ತಲುಪಲಿದೆ. ಡಿಜಿಟಲ್ ಅವರತರಣೆಯ ಮೊದಲೆಯ ಸಂಚಿಕೆಯಲ್ಲಿ ಉದ್ಯಮಶೀಲತೆ ಮತ್ತು ಸಂಬಂಧಿತ ವಿಷಯಗಳ ಬಗ್ಗೆ ಪ್ರಾಮುಖ್ಯತೆ ಕೊಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

