ವಿದ್ಯುತ್ ವ್ಯತ್ಯಯ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ 66/11 ಕೆವಿ ವಿದ್ಯುತ್ ವಿತಣಾ ಕೇಂದ್ರದಲ್ಲಿ ವಿದ್ಯುತ್ ಮಾರ್ಗಗಳ ದುರಸ್ತಿ ಕಾರ್ಯ ಇರುವುದರಿಂದ ಮಾ.27ರ ಬೆಳಗ್ಗೆ 10 ರಿಂದ ಮಧ್ಯಾಹ್ನ 2ರವರೆಗೆ ಈ ಕೆಳಕಂಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಪಿರಿಯಾಪಟ್ಟಣ ಮತ್ತು ತಾಲೂಕು ವ್ಯಾಪ್ತಿಯ ಬೆಟ್ಟದಪುರ, ಅತ್ತಿಗೋಡು, ಬೆಕ್ಕೆರೆ, ಭುವನಹಳ್ಳಿ, ಚಪ್ಪರದಹಳ್ಳಿ, ಬೆಟ್ಟದ ತುಂಗ, ಕೋಮಲಾಪುರ, ದೊಡ್ಡಕಮರಹಳ್ಳಿ, ಕಣಗಾಲು ಮತ್ತು ಹಾರನಹಳ್ಳಿ ಗ್ರಾಮ.
ಸೇವೆ ಸ್ಥಗಿತ
ಮೈಸೂರು: ಜಿಲ್ಲಾ ಕೇಂದ್ರ ಗ್ರಂಥಾಲಯದ ಅಧೀನದಲ್ಲಿ ಬರುವ ಹುಣಸೂರು, ಕೆ.ಆರ್. ನಗರ, ಪಿರಿಯಾಪಟ್ಟಣ, ನಂಜನಗೂಡು, ಟಿ.ನರಸೀಪುರ, ಎಚ್.ಡಿ. ಕೋಟೆ, ಬನ್ನೂರು ಹಾಗೂ ಸರಗೂರು ಶಾಖಾ ಗ್ರಂಥಾಲಯಗಳಲ್ಲಿ ಹಾಗೂ ಜಿಲ್ಲೆಯ ಎಲ್ಲ 7 ತಾಲೂಕುಗಳ ಗ್ರಾಪಂ ಗ್ರಂಥಾಲಯದಲ್ಲಿ ಏ.1 ರಿಂದ 15 ರವರೆಗೆ ಪುಸ್ತಕಗಳ ಭೌತಿಕ ದಾಸ್ತಾನು ಪರಿಶೀಲನೆ ನಡೆಯಲಿದೆ ಎಂದು ಜಿಲ್ಲಾಕೇಂದ್ರ ಗ್ರಂಥಾಲಯದ ಉಪನಿರ್ದೇಶಕರು ಹೇಳಿದ್ದಾರೆ. ಈ ದಿನಗಳಲ್ಲಿ ಪುಸ್ತಕಗಳ ಎರವಲು ಸೇವೆ ಹಾಗೂ ಪರಾಮರ್ಶನ ಸೇವೆ ಇರುವುದಿಲ್ಲ. ಆದರೆ ಪುಸ್ತಕಗಳನ್ನು ವಾಪಸ್ ಪಡೆಯಲಾಗುತ್ತದೆ. ದಿನಪತ್ರಿಕೆ ವಿಭಾಗವನ್ನು ಬೆಳಗ್ಗೆ 8 ರಿಂದ 11.30ರವರೆಗೆ ಸಂಜೆ 4 ರಿಂದ 8ರವರೆಗೆ ಮಾತ್ರ ನೀಡಲಾಗುತ್ತದೆ. ಸಾರ್ವಜನಿಕರು ಸಹಕರಿಸುವಂತೆ ಕೋರಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ನಂಜನಗೂಡು: ನೆಸ್ಲೆ ನೌಕರರ ಸಂಘದ ಅಧ್ಯಕ್ಷರಾಗಿ ವಿ.ಮುರುಳೀಧರನ್, ಉಪಾಧ್ಯಕ್ಷರಾಗಿ ಎಸ್. ಗಣೇಶ್, ಎ.ಜೆ. ಜೈಸನ್ ಮ್ಯಾಥ್ಯು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಶಂಕರ್ ನರಸಿಂಹ ಶೆಟ್ಟಿ, ಸಹ ಕಾರ್ಯದರ್ಶಿಯಾಗಿ ಎ.ಷಣ್ಮುಗಂ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ದಯಾನಂದ, ಪುಷ್ಪರಾಜ ಬಂಗೇರ, ಖಜಾಂಚಿಯಾಗಿ ಎಸ್. ಶಂಕರಲಿಂಗಂ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಎಸ್.ಸಂಜಯ್, ಪಿ.ಎಸ್. ಅಭಿಷೇಕ್, ಅರುಣ್ ಬಸವರಾಜು ರೂಗಿ, ನಾಗರಾಜ್ ಎ. ಚಿನಗುಂಡಿ, ಎಸ್.ಕಿರಣ್, ಬಿ. ಮಹೇಶ್, ವಿಷ್ಣುರೆಡ್ಡಿ, ಪಿ. ಮೋಹನ್ರಂಗಮ್, ಸುನಿಲ್ ಸುಬ್ರಮಣಿಯನ್, ಆರ್. ರಮೇಶ್, ವಿನಯ್ಕುಮಾರ್ ಜಿ. ಹಿರೇಮಠ್ ಆಯ್ಕೆಯಾಗಿದ್ದಾರೆ.
ಪ್ರಾಣಿಬಲಿ ತಡೆಯಿರಿ
ಎಚ್.ಡಿ. ಕೋಟೆ: ಎಚ್.ಡಿ. ಕೋಟೆ ತಾಲೂಕಿನ ಸರಗೂರು ಹೋಬಳಿಯ ಇಟ್ನಾ ಗ್ರಾಮದಲ್ಲಿ ನಡೆಯುವ ಚಿಕ್ಕದೇವಮ್ಮ ಜಾತ್ರೆಯಲ್ಲಿ ಪ್ರಾಣಿಬಲಿ ತಡೆಯುವಂತೆ ವಿಶ್ವಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ಶ್ರೀ ದಯಾನಂದ ಸ್ವಾಮೀಜಿ ಮನವಿ ಮಾಡಿದ್ದಾರೆ.ತಾಲೂಕಿನ ತೆರಣಿ ಮುಂಟಿ ಗ್ರಾಮ ದಲ್ಲಿ ನಡೆದ ಜಾತ್ರೆಯಲ್ಲಿ ಪ್ರಾಣಿಬಲಿ ತಡೆದ ಗ್ರಾಮಸ್ಥರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅದೇ ರೀತಿ ಸಾಗರೆ ಹಾಗೂ ಕಪ್ಪಡಿಯಲ್ಲಿ ಪ್ರಾಣಿಬಲಿ ತಡೆಯದಿದ್ದಕ್ಕೆ ವಿಷಾದಿಸುತ್ತೇನೆ. ಈಗ ಇಟ್ನಾ ಗ್ರಾಮದಲ್ಲಿ ಸಹಸ್ರಾರು ಪ್ರಾಣಿಗಳನ್ನು ಕಡಿಯಲು ಸಿದ್ಧತೆ ನಡೆಸಿದ್ದು ತಾಲೂಕು ಆಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

