ಸಿಂಹನೇ ಎಂದೆಂದಿಗೂ ರಾಜ: ಪ್ರತಾಪ್
ಪಿರಿಯಾಪಟ್ಟಣ: ಯಾರೇ ಹುಲಿ, ತೋಳ, ಚಿರತೆಯಾದರೂ ಸಿಂಹನೇ ಎಂದೆಂದಿಗೂ ರಾಜ ಎಂದು ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಪ್ರತಾಪ್ ಸಿಂಹ ಹೇಳಿದರು.
ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಬಿಜೆಪಿ ಬುಧವಾರ ಏರ್ಪಡಿಸಿದ್ದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ನನ್ನನ್ನು ಶ್ರೀಮಂತರ ಮನೆ ಬಾಗಿಲಿನ ಸಿಂಹ ಎಂದು ಹೇಳಿಕೊಂಡು ತಿರುಗುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ವಿಶ್ವನಾಥ್ ತನ್ನನ್ನು ಬಡವರ ಮನೆ ಬಾಗಿಲಿನ ಹುಲಿ ಎಂದು ಹೇಳಿಕೊಳ್ಳುತ್ತಿದ್ದಾರೆ. ಅವರೇ ಬರೆದ ಹಳ್ಳಿ ಹಕ್ಕಿ ಹಾಡು ಕೃತಿಯಲ್ಲಿ ಅವರನ್ನು ಕೇವಲ ಹಕ್ಕಿ ಎಂದುಕೊಂಡಿದ್ದೆ. ಈಗ ಅವರು ತಾನು ಹುಲಿ ಎಂದು ಬಣ್ಣಿಸಿಕೊಳ್ಳುತ್ತಿದ್ದಾರೆ ಎಂದು ಸಂಸದ ಎಚ್.ವಿಶ್ವನಾಥ್ ವಿರುದ್ಧ ವಾಗ್ದಾಳಿ ನಡೆಸಿದರು.
ತಾವು ಪತ್ರಿಕಾ ರಂಗಕ್ಕೆ ಬಂದ 15 ವರ್ಷಗಳಿಂದ ಸಮಾಜದ ದೈನಂದಿನ ಆಗುಹೋಗುಗಳ ಬಗ್ಗೆ ವ್ಯಾಖ್ಯಾನಿಸಿ ತಪ್ಪುಗಳನ್ನು ಎತ್ತಿ ಹಿಡಿಯುವ ಕೆಲಸ ಮಾಡಿದ್ದೇನೆ. ನಾನು ಮೂಲತಃ ಕೃಷಿ ಕುಟುಂಬದಿಂದ ಬಂದವನಾಗಿದ್ದು, ಬಡವರ ಕಷ್ಟಗಳೇನು ಎಂಬುದು ತಿಳಿದಿದೆ. ಹಿಂದಿನ ಸಂಸದರು 5 ವರ್ಷಗಳ ಅವಧಿಯಲ್ಲಿ ಕ್ಷೇತ್ರಕ್ಕೆ ನೀಡಿದ ಕೊಡುಗೆಯಾದರೂ ಏನು ಎಂದು ಪ್ರಶ್ನಿಸಿದರು.
ದೇಶದ ಬಗ್ಗೆ ಅಪಾರ ಗೌರವವಿರುವ ಬಿಜೆಪಿಗೆ ಮತ ನೀಡಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯಾಗಿ ಮಾಡಲು ಸಹಕರಿಸುವಂತೆ ಮನವಿ ಮಾಡಿದರು. ನಂತರ ತಾಲೂಕಿನ ಹುಣಸವಾಡಿ, ಕೊಪ್ಪ, ಚಪ್ಪರದಹಳ್ಳಿ, ಬೆಟ್ಟದಪುರ, ಕಿತ್ತೂರು, ಹಂಡಿತವಳ್ಳಿ ಗ್ರಾಮಗಳಲ್ಲಿ ಸಾರ್ವಜನಿಕ ಸಭೆ ನಡೆಸಿ ಮತಯಾಚಿಸಿದರು.
ಮಾಜಿ ಶಾಸಕ ಎಸ್.ಜಿ.ಮೇದಪ್ಪ, ಮೈಸೂರು ನಗರಪಾಲಿಕೆ ಸದಸ್ಯ ಸ್ನೇಕ್ ಶ್ಯಾಮ್, ಎಂ.ವಿ. ರವಿಶಂಕರ್, ಪಕ್ಷದ ಪದಾಧಿಕಾರಿಗಳಾದ ಆರ್.ಟಿ. ಸತೀಶ್, ರವಿ, ಕೃಷ್ಣೇಗೌಡ, ಜಿ.ಸಿ. ವಿಕ್ರಂರಾಜ್, ಎಂ.ಎಂ. ರಾಜೇಗೌಡ, ಮಹದೇವ್, ಡಿ.ರಾಜಣ್ಣ, ಎಸ್.ಟಿ. ಕೃಷ್ಣಪ್ರಸಾದ್, ಕೃಷ್ಣ, ಬಸವರಾಜ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

