ಜೆಡಿಎಸ್ ಬೆಂಬಲಿಸಲು ಮಹೇಶ್ ಮನವಿ
ಮೈಸೂರು: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಸ್ಲಂ ನಿವಾಸಿಗಳು ಜೆಡಿಎಸ್ ಅನ್ನು ಬೆಂಬಲಿಸುವಂತೆ ಶಾಸಕ ಸಾ.ರಾ. ಮಹೇಶ್ ಮನವಿ ಮಾಡಿದರು.
ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಪಕ್ಷದ ಕಚೇರಿಯಲ್ಲಿ ಜೆಡಿಎಸ್ ಸ್ಲಂ ವಿಭಾಗದ ಪದಾಧಿಕಾರಿಗಳಿಗೆ ನೇಮಕಾತಿ ಪತ್ರ ವಿತರಿಸಿ ಅವರು ಮಾತನಾಡಿದರು.
ಸಮಾಜದ ಕೆಳಸ್ತರದಲ್ಲಿ ತುಂಬಾ ಕಡುಬಡತನದಿಂದ ನರಳುತ್ತಿರುವ ಜನರು ಹೆಚ್ಚಾಗಿ ಮನೆಗಳೇ ಇಲ್ಲದೆ ಗುಡಿಸಲು ಮತ್ತು ಜೋಪಡಿಗಳಲ್ಲಿ ಮತ್ತು ಸ್ಲಂಗಳಲ್ಲಿ ವಾಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದ್ದರಿಂದ ಈ ಜನರ ಪರವಾಗಿ ಇವರ ಕಷ್ಟಗಳಿಗೆ ಸ್ಪಂದಿಸಿ, ಅವರಿಗೆ ಸರ್ಕಾರದಿಂದ ಸಿಗಬೇಕಾದ ಸೌಲಭ್ಯ ಮತ್ತು ಸವಲತ್ತುಗಳನ್ನು ಕೊಡಿಸುವಂತ ಮಹತ್ವದ ಜವಾಬ್ದಾರಿ ಕೆಲಸ ಪಕ್ಷದ ಸ್ಲಂ ವಿಭಾಗದ ಪದಾಧಿಕಾರಿಗಳ ಮೇಲಿದೆ ಎಂದು ಹೇಳಿದರು.
ಸ್ಲಂ ವಿಭಾಗ ಎಲ್ಲ ಪದಾಧಿಕಾರಿಗಳು ಸ್ಲಂಗಳಿಗೆ ಭೇಟಿ ನೀಡಿ, ಅಲ್ಲಿನ ಸ್ಥಳೀಯ ಸಮಸ್ಯೆಗಳ ಬಗ್ಗೆ ಒತ್ತು ಕೊಟ್ಟು ಅವರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರ ನೀಡಿ, ಪಕ್ಷಕ್ಕೆ ಬೆಂಬಲ ಕೋರುವಂತೆ ತಿಳಿಸಿದರು.
ಮಾಜಿ ಮೇಯರ್ ಸಂದೇಶ್ಸ್ವಾಮಿ ಮಾತನಾಡಿ, ನಗರದ ಎಲ್ಲ ವಾರ್ಡ್ಗಳಲ್ಲಿ ಸ್ಲಂ ಪ್ರದೇಶಗಳಲ್ಲಿ ವಾಸ ಮಾಡುವಂತೆ ಜನರ ಪರವಾಗಿ ವಿಶೇಷ ಆಸಕ್ತಿ ತೋರಿ, ಅಲ್ಲಿನ ನಿವಾಸಿಗಳಿಗೆ ಅಂಗವಿಕಲ ವೇತನ, ವಿಧವಾ ವೇತನ, ಕುಟುಂಬ ಪಡಿತರ ಚೀಟಿ ಮತ್ತು ಅವರ ಮಕ್ಕಳನ್ನು ವಿದ್ಯಾವಂತರನ್ನಾಗಿಸುವ ಕೆಲಸವನ್ನು ಪಕ್ಷದ ಸ್ಲಂ ವಿಭಾಗದ ಪದಾಧಿಕಾರಿಗಳು ಕೈಗೊಳ್ಳುವಂತೆ ಹೇಳಿದರು. ನಗರಾಧ್ಯಕ್ಷ ರಾಜಣ್ಣ, ಜೆಡಿಎಸ್ ಕಾರ್ಯಾಧ್ಯಕ್ಷ ವೇಣುಗೋಪಾಲ್ ಮಾತನಾಡಿದರು. ಉಪಮೇಯರ್ ಶೈಲೇಂದ್ರ, ಪ್ರಧಾನ ಕಾರ್ಯದರ್ಶಿ ನಟರಾಜು, ವಕ್ತಾರ ಎಸ್ಬಿಎಂ ಮಂಜು, ಕೆ.ಆರ್. ಕ್ಷೇತ್ರದ ಬಂಗಾರಪ್ಪ ಬ್ಲಾಕ್ ಅಧ್ಯಕ್ಷ ಸಂತೋಷ್, ಬೋರೇಗೌಡ, ಎ. ಅರುಣ್ಕುಮಾರ್ ಇದ್ದರು.
ಜೆಡಿಎಸ್ ಪಕ್ಷದ ಸ್ಲಂ ವಿಭಾಗದ ಪದಾಧಿಕಾರಿಗಳಾಗಿ ಎಸ್.ನಾಗರಾಜು (ಅಧ್ಯಕ್ಷರು), ಮಹದೇವ, ಎಸ್. ರವಿಕುಮಾರ್, ಗೋಪಾಲ್ (ಉಪಾಧ್ಯಕ್ಷರು), ಕೃಷ್ಣಸ್ವಾಮಿ, ಪಳನಿ (ಕಾರ್ಯದರ್ಶಿ), ಕೆ.ರಾಜು (ಖಜಾಂಚಿ) ನೇಮಕಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

