ಮೈಸೂರು

ನೀನಾ ಮೊಣ್ಣಪ್ಪ ಕಲಾ ಪ್ರದರ್ಶನ ಶುರು

Published On :

ಮೈಸೂರು: ಕಲಾವಿದೆ ಕೂತಂಡ ನೀನಾ ಮೊಣ್ಣಪ್ಪ ರಚಿಸಿರುವ ಚಿತ್ರಕಲಾ ಪ್ರದರ್ಶನವು ಕಲಾಮಂದಿರದ ಸುಚಿತ್ರ ಕಲಾ ಗ್ಯಾಲರಿಯಲ್ಲಿ ಶನಿವಾರ ಆರಂಭವಾಯಿತು. ನಿನಾಸ್ ಕಲಾ ಪ್ರದರ್ಶನ ಶೀರ್ಷಿಕೆಯಡಿ ಆಯೋಜಿರುವ ಎರಡು ದಿನಗಳ ಕಲಾಪ್ರದರ್ಶನವನ್ನು ಮೈಸೂರು ಕೊಡವ ಸಮಾಜದ ಗೌರವಾಧ್ಯಕ್ಷ ಮೇಚಂಡ ಎಂ. ಕರುಂಬಯ್ಯ ಉದ್ಘಾಟಿಸಿ, ಶುಭ ಕೋರಿದರು. ಸದಸ್ಯರಾದ ಮಂಡಿರಾ ಕಾಳಯ್ಯ, ಕೂತಂಡ ಪಿ. ಉತ್ತಪ್ಪ, ಮಟ್ಟಮಡ ಶಾಂತಿ ಗಣಪತಿ, ಕೂತಂಡ ಕಿಟ್ಟಿ ಪೊನ್ನಪ್ಪ, ಕೂತಂಡ ಮಣಿ ಭಾಗವಹಿಸಿದ್ದರು. ಚಿತ್ರ ಕಲಾವಿದೆ ನೀನಾ ಮೊಣಪ್ಪ ಎಂಜಿನಿಯರಿಂಗ್ ಪದವೀಧರೆ. ಬೆಂಗಳೂರಿನ ಇನ್ಫೋಸಿಸ್ ಕಂಪನಿಯಲ್ಲಿ ಸೀನಿಯರ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೈಸೂರು ನರಸಿಂಹರಾಜ ಮೋಹಲ್ಲಾ ನಿವಾಸಿಗಳಾದ ಬಿಇಎಂಎಲ್ ಉದ್ಯೋಗಿ ಕೂತಂಡ ಪಿ. ಮೊಣ್ಣಪ್ಪ ಹಾಗೂ ಉಪನ್ಯಾಸಕಿ ಬೀನಾ ಮೊಣ್ಣಪ್ಪ ಪುತ್ರಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.