48.60 ಕೋಟಿ ಕೊರತೆ ಬಜೆಟ್
ಕ.ಪ್ರ.ವಾರ್ತೆ ಮೈಸೂರು ಮಾ. 29
ಮೈಸೂರು ವಿಶ್ವವಿದ್ಯಾಲಯದ 2014-15ನೇ ಸಾಲಿನ ರು. 48.60 ಕೋಟಿ ರು. ಕೊರತೆ ಬಜೆಟ್ ಅನ್ನು ಕುಲಪತಿ ಪ್ರೊ. ಕೆ.ಎಸ್. ರಂಗಪ್ಪ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಶಿಕ್ಷಣ ಮಂಡಳಿ ಸಭೆಯಲ್ಲಿ ಮಂಡಿಸಲಾಯಿತು.
ಸಿಂಡಿಕೇಟ್ ಹಿರಿಯ ಸದಸ್ಯ ಪ್ರೊ. ಬಿ.ಎಚ್. ಸುರೇಶ್ ಆಯವ್ಯಯ ಮಂಡಿಸಿದರು. 1916 ರಲ್ಲಿ ಆರಂಭವಾದ ಮೈಸೂರು ವಿವಿ 2016 ರಲ್ಲಿ ಶತಮಾನೋತ್ಸವ ಆಚರಿಸಿಕೊಳ್ಳಲಿದ್ದು, ಇದಕ್ಕಾಗಿ ಈ ಸಾಲಿನ ಬಜೆಟ್ನಲ್ಲಿ 2 ಕೋಟಿ ರು. ಒದಗಿಸಲಾಗಿದೆ. ಜೆನಿಟಿಕ್ಸ್ ಮತ್ತು ಜಿನೋಮಿಕ್ಸ್, ಸಾವಯವ ರಾಸಾಯನಶಾಸ್ತ್ರ, ಅಣುಜೀವ ವಿಜ್ಞಾನ, ಮೈಸೂರು ವಿಶ್ವವಿದ್ಯಾಲಯ ಕಾನೂನುಶಾಸ್ತ್ರ ಶಾಲೆ, ಸಾರ್ವಜನಿಕ ಆಡಳಿತ- ಈ ಐದು ಹೊಸ ವಿಭಾಗಗಳ ಆರಂಭಕ್ಕೆ ರು. 50 ಲಕ್ಷ ಒದಗಿಸಲಾಗಿದೆ.
2014-15ನೇ ಸಾಲಿನ ಯೋಜನೇತರ ವೆಚ್ಚದ ಅಂದಾಜು ರು. 232.18 ಕೋಟಿ ಆಗಿದ್ದು, ಇದಕ್ಕಾಗಿ ರು. 192,28 ಕೋಟಿ ಯೋಜನೇತರ ಬ್ಲಾಕ್ ಅನುದಾದ ಮಂಜೂರಾತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ರಾಜ್ಯ ಸರ್ಕಾರವು 110 ಕೋಟಿಗಳನ್ನುಮಾತ್ರ ಮಂಜೂರು ಮಾಡಿದೆ. ಅದಕ್ಕೆ ಅನುಗುಣವಾಗಿ ಆಯವ್ಯಯ ಅಂದಾಜು ತಯಾರಿಸಲಾಗಿದ್ದು, ವೇತನಕ್ಕಾಗಿಯೇ ಸುಮಾರು ರು.48.60 ಕೋಟಿ ಕೊರತೆ ನಿರೀಕ್ಷಿಸಲಾಗಿದೆ. ಈ ಕೊರತೆಯನ್ನು ಸಂಪನ್ಮೂಲ ಕ್ರೋಢೀಕರಣ ಮತ್ತು ಮಿತವ್ಯಯದ ಮೂಲಕ ಸರಿದೂಗಿಸಬೇಕಾಗಿದ್ದು, ಸರ್ಕಾರವು ವಾಸ್ತವಾಂಶಗಳನ್ನು ಗಮನದಲ್ಲಿಟ್ಟುಕೊಂಡು ಪೂರಕ ಅನುದಾನವನ್ನು ಬಿಡುಗಡೆ ಮಾಡಲು ಎಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂದು ಕೋರಲಾಗುವುದು ಎಂದು ಸುರೇಶ್ ವಿವರಿಸಿದರು.
ಪರೀಕ್ಷಾ ಚಟುವಟಿಕೆಗಳಿಗಾಗಿ ರು. 1.89. ಕೋಟಿ ಒದಗಿಸಲಾಗಿದೆ. ವಿವಿಯ ಆವರಣವನ್ನು ಹಸಿರಾಗಿಸಲು ರು. 50 ಲಕ್ಷ, ಆಜೀವ ಪ್ರಾಧ್ಯಾಪಕ ನಿಧಿಗೆ ರು. 2 ಕೋಟಿ, ಅಂತಾರಾಷ್ಟ್ರೀಯ ರಾಸಾಯನಿಕ, ಜೀವಶಾಸ್ತ್ರ ಮತ್ತು ಮೂಲ ಔಷಧಗಳ ಸಂಶೋಧನಾ ಕೇಂದ್ರಕ್ಕೆ 1 ಕೋಟಿ, ಸೆಂಟರ್ ಫಾರ್ ಪಾಲಿಸಿ ರಿಸರ್ಚ್ಗೆ ರು. 1 ಕೋಟಿ, ವಿಭಾಗಗಳ ಅಭಿವೃದ್ಧಿ ಇವು ಇನ್ನೂ ಕೆಲವು ಪ್ರಮುಖ ಯೋಜನೆಗಳು. ಉಳಿದಂತೆ ಆಡಿಟ್ ವೆಚ್ಚ ರು. 80 ಲಕ್ಷ, ಕಿರು ಕಾಮಗಾರಿಗಳಿಗೆ 200 ಲಕ್ಷ, ಪರೀಕ್ಷಾ ಪ್ರಶ್ನೆ ಪತ್ರಿಕೆಗಳ ಮುದ್ರಣಕ್ಕೆ ರು. 12 ಕೋಟಿ, ತಾತ್ಕಾಲಿಕ ಅಧ್ಯಾಪಕೇತರ ಉದ್ಯೋಗಿಗಳ ವೇತನಕ್ಕೆ ರು. 3 ಕೋಟಿ, ಭದ್ರತಾ ಸೇವೆಗೆ ರು. 1.50 ಕೋಟಿ ಹಾಗೂ ದೂರ ಶಿಕ್ಷಣ ಕಲಿಕೆಗೆ ರು. 10 ಲಕ್ಷ ಮೀಸಲಿಡಲಾಗಿದೆ ಎಂದು ವಿವರಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

