ಬಾಲಕಿ ಸೇರಿ ನಾಲ್ವರು ಯುವತಿಯರ ನಾಪತ್ತೆ
ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಬಾಲಕಿ ಸೇರಿದಂತೆ ನಾಲ್ವರು ಯುವತಿಯರು ನಾಪತ್ತೆಯಾಗಿರುವ ಘಟನೆ ವಿಜಯನಗರ ಮತ್ತು ವಿದ್ಯಾರಣ್ಯಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬೆಳವಾಡಿ 2ನೇ ಬ್ಲಾಕ್ ನಿವಾಸಿ ಚೆನ್ನಯ್ಯ ಎಂಬುವರ ಪುತ್ರಿ ಸುಮಾ (18) ಮಾ.12 ರಂದು ಹೆಬ್ಬಾಳು ಕೈಗಾರಿಕಾ ಪ್ರದೇಶದಲ್ಲಿರುವ ಲೂನಾರ್ಸ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ.
ಫ್ಯಾಕ್ಟರಿ ನೌಕರೆ: ಹೂಟಗಳ್ಳಿ ವಿಶ್ವಕರ್ಮ ಬೀದಿ ನಿವಾಸಿ ಸಣ್ಣಸ್ವಾಮಿ ಎಂಬುವರ ಪುತ್ರಿ ಶೋಭಾ (19) ಮಾ.7 ರಂದು ಪ್ರೇಮ್ ಇಂಡಸ್ಟ್ರೀಸ್ ಫ್ಯಾಕ್ಟರಿಗೆ ಕೆಲಸಕ್ಕೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ವಿಜಯನಗರದ ಸ್ತ್ರೀ ಸೇವಾನಿಕೇತನದಲ್ಲಿದ್ದ ಅಲೆಕ್ಸ್ ಎಂಬುವರ ಪತ್ನಿ ರಾಣಿ ಅ. ತುಳಸಿ (21) ಬುಧವಾರದಿಂದ ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರು, ಗೋಧಿ ಮೈಬಣ್ಣ, ಕನ್ನಡ ಮತ್ತು ತಮಿಳು ಮಾತನಾಡುತ್ತಾರೆ. ಗೃಹಿಣಿ: ಮಹದೇಶ್ವರ ಬಡಾವಣೆ ನಿವಾಸಿ ಚಂದ್ರ ಎಂಬವರ ಪತ್ನಿ ಚಂದ್ರಿಕಾ (19) ಮಾ.5 ರಿಂದ ನಾಪತ್ತೆಯಾಗಿದ್ದಾರೆ. ಚಹರೆ-5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಕಾಣೆಯಾಗಿರುವ ಈ ನಾಲ್ವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418117, 317, 517 ಸಂಪರ್ಕಿಸಲು ವಿಜಯನಗರ ಠಾಣೆ ಪೊಲೀಸರು ಕೋರಿದ್ದಾರೆ.ಪಿಯು ವಿದ್ಯಾರ್ಥಿನಿ: ಜೆ.ಪಿ. ನಗರ ಜೆಎಸ್ಎಸ್ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಹಾಗೂ ಗೋವಿಂದರಾಜು ಎಂಬವರ ಪುತ್ರಿ ಶಿಲ್ಪಾ (17) ಗುರುವಾರದಿಂದ ನಾಪತ್ತೆಯಾಗಿದ್ದಾರೆ.
ಶಿಲ್ಪಾ ತನ್ನ ತಂಗಿ ನಂದಿನಿ ಬಳಿ ಸ್ನೇಹಿತಳ ಮನೆಗೆ ಹೋಗುವುದಾಗಿ ಹೇಳಿ ಹೋದವರು ವಾಪಸ್ ಬಂದಿಲ್ಲ. ಕಾಣೆಯಾಗಿರುವ ಮಗಳನ್ನು ಪತ್ತೆ ಮಾಡಿಕೊಡುವಂತೆ ತಂದೆ ಗೋವಿಂದರಾಜು ದೂರು ನೀಡಿದ್ದಾರೆ. ಚಹರೆ- 5.5 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ಸಾಧಾರಣ ಮೈಕಟ್ಟು, ಕೋಲು ಮುಖ, ಬಲ ಕೆನ್ನೆ ಮೇಲೆ ಕೆಂಪು ಮಚ್ಚೆ ಇದೆ. ಕನ್ನಡ, ತೆಲುಗು ಮಾತನಾಡುತ್ತಾರೆ. ಮಾಹಿತಿ ಸಿಕ್ಕಲ್ಲಿ ದೂ. 0821- 2418322, 522 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

