ಭಕ್ತಿಗೀತೆಗಳ ಸ್ಪರ್ಧೆ ಜೂ. 29ಕ್ಕೆ
ಮೈಸೂರು: ನಗರದ ವಿವಿ ಕ್ರಿಯೇಷನ್ಸ್ ಜೂ.29ರ ಬೆಳಗ್ಗೆ 9ಕ್ಕೆ ಜಗನ್ಮೋಹನ ಅರಮನೆಯಲ್ಲಿ ಭಕ್ತಿಗೀತೆ ಸ್ಪರ್ಧೆ ಆಯೋಜಿಸಿದೆ.
16 ರಿಂದ 23 ವರ್ಷದ ಯುವಕ, ಯುವತಿಯರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. 100 ಪ್ರವೇಶ ದರ ನಿಗದಿಪಡಿಸಲಾಗಿದೆ. ಮೊದಲ ಬಹುಮಾನಕ್ಕೆ 5 ಸಾವಿರ ನಗದು ಮತ್ತು ಮುಂದಿನ ಧ್ವನಿಸುರುಳಿಯಲ್ಲಿ ಹಾಡುವ ಅವಕಾಶ ನೀಡಲಾಗುವುದು. ದ್ವಿತೀಯ ಬಹುಮಾನಕ್ಕೆ ರು. 3 ಸಾವಿರ ನಗದು ಮತ್ತು ಮೂರನೆ ಬಹುಮಾನಕ್ಕೆ ರು. 2 ಸಾವಿರ ನಗದು ನೀಡಲಾಗುವುದು ಎಂದು ಸಂಸ್ಥೆಯ ಸಂಸ್ಥಾಪಕಿ ವಿಮಲಾ ವೀರೇಶ್ ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸ್ಪರ್ಧಿಗಳು ವಿವಿ ಕ್ರಿಯೇಷನ್ಸ್ ಬಿಡುಗಡೆಗೊಳಿಸಿದ ಧ್ವನಿಸುರುಳಿಯಲ್ಲಿನ ಹಾಡುಗಳನ್ನು ಮಾತ್ರ ಹಾಡಬೇಕು. ಸಿಡಿಯನ್ನು ಸಂಸ್ಥೆ ಉಚಿತವಾಗಿ ನೀಡಲಿದೆ. ಹೆಚ್ಚಿನ ಮಾಹಿತಿಗೆ ಮೊ. 9448282632 ಸಂಪರ್ಕಿಸಬಹುದು.
ಕಾರ್ಯಕ್ರಮದಲ್ಲಿ ಸಂಗೀತ ನಿರ್ದೇಶಕ ಬಿ.ವಿ. ಶ್ರೀನಿವಾಸ್ ಮತ್ತು ಕೀ ಬೋರ್ಡ್ ವಾದಕ ವೇಣು ಅವರಿಗೆ ಬಿಲ್ವ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಗಾಯಕರಾದ ಎಂ. ಮಹಾಲಿಂಗು, ಪುರುಷೋತ್ತಮ್ ಇದ್ದರು.
ಹಲವು ತರಬೇತಿ
ಮೈಸೂರು: ಚಾಮರಾಜಮೊಹಲ್ಲಾದ ನವೋದಯ ಫೌಂಡೇಶನ್ ವತಿಯಿಂದ ಮುಂಬರುವ ಎಸ್ಬಿಐ, ಪಿಒ, ಪೊಲೀಸ್ ಕಾನ್ಸ್ಟೇಬಲ್ ಮತ್ತು ಪಿಎಸ್ಐ, ಎಸ್ಎಸ್ಸಿ ಪರೀಕ್ಷೆಗಾಗಿ ಸಾಮಾನ್ಯ ಜ್ಞಾನ ಕುರಿತ ಒಂದು ದಿನದ ತರಬೇತಿಯನ್ನು ಮೇ 11ರ ಬೆಳಗ್ಗೆ 9 ರಿಂದ ಸಂಜೆ 6ರವರೆಗೆ ಆಯೋಜಿಸಿದೆ. ಮೊ. 9686072224 ಸಂಪರ್ಕಿಸಬಹುದು. ಕುವೆಂಪುನಗರದ ಋಷಿ ಸಂಸ್ಕೃತಿ ವಿದ್ಯಾಕೇಂದ್ರದ ವತಿಯಿಂದ ಮೇ 12ರಿಂದ 21 ರವರೆಗೆ ಬೆಳಗ್ಗೆ 10 ರಿಂದ ಮಧ್ಯಾಹ್ನ 1ರವರೆಗೆ 10 ದಿನಗಳ ಮಕ್ಕಳ ಸ್ಮರಣಶಕ್ತಿ ಯೋಗ ಶಿಬಿರ ನಡೆಯಲಿದೆ. ಮೊ. 9448458050 ಸಂಪರ್ಕಿಸಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

