ನಿಸ್ವಾರ್ಥ ಸೇವೆಗೆ ಒತ್ತು ನೀಡಿ
ಕ.ಪ್ರ.ವಾರ್ತೆ ಸಾಲಿಗ್ರಾಮ ಮೇ 10
ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವಾಗ ಪ್ರತಿಯೊಬ್ಬರು ನಿಸ್ವಾರ್ಥದಿಂದ ಕೆಲಸ ನಿರ್ವಹಿಸಬೇಕೆಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಪಟ್ಟಣದ ಸಾ.ರಾ. ವಿದ್ಯಾಸಂಸ್ಥೆ ಆವರಣದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಅವತಾರ್ ಬಾಬಾಜಿ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
ಸಮಾಜದ ಪ್ರತಿಯೊಂದು ಸಾರ್ವಜನಿಕ ಕ್ಷೇತ್ರದಲ್ಲಿ ಸೇವೆ ಮಾಡುವ ಪ್ರತಿಯೊಬ್ಬರಲ್ಲೂ ಹೆಚ್ಚಾಗಿ ಸ್ವಾರ್ಥದ ಉದ್ದೇಶ ತುಂಬಿರುತ್ತದೆ. ಇದು ಮೊದಲು ದೂರವಾಗಬೇಕು.
ಯಾವುದೇ ದುರುದ್ದೇಶ ಇಟ್ಟುಕೊಳ್ಳದೆ ಶೇ. 51 ನಿಸ್ವಾರ್ಥ, ಶೇ.49 ಸ್ವಾರ್ಥದ ಸೇವೆಯನ್ನು ಅನುಸರಿಸಿದಾಗ ಮಾತ್ರ ಸಂಘ-ಸಂಸ್ಥೆಗಳು ಅಭಿವೃದ್ಧಿ ಕಾಣಲು ಸಾಧ್ಯ ಎಂದು ತಿಳಿಸಿದರು.
ಗ್ರಾಪಂ, ತಾಪಂ, ಜಿಪಂ ಸೇರಿದಂತೆ ಎಲ್ಲ ಅಧಿಕಾರಗಳನ್ನು ನಮ್ಮ ಕುಟುಂಬ ಸದಸ್ಯರೇ ನಿರ್ವಹಿಸಬೇಕು, ಸರ್ವಾಧಿಕಾರಿಯೂ ನಾನೇ ಆಗಬೇಕೇಂಬ ಮೂರ್ಖತನ ಮತ್ತು ಸ್ವಾರ್ಥವೇ ತುಂಬಿರುವ ಪ್ರಸ್ತುತ ದಿನಗಳಲ್ಲಿ ಯಾವುದೇ ದುರುದ್ದೇಶವಿಲ್ಲದೆ ಸೇವಾ ಮನೋಭಾವನೆ ಅನುಸರಿಸುವ ಮೂಲಕ ಕಡು ಬಡವರ ಹಿತಕಾಯಲು ನಿರ್ಮಾಣ ಮಾಡಿರುವ ಟ್ರಸ್ಟ್ ಶ್ಲಾಘನೀಯ ಎಂದು ಹೇಳಿದ ಅವರು, ಬಡಜನರ ಶ್ರೇಯೋಭಿವೃದ್ಧಿಗೆ ತಾವು ಕೂಡ ಸಂಸ್ಥೆಯ ಜತೆಗೂಡಿ ಪಕ್ಷಾತೀತವಾಗಿ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ನಂತರ ಹೆಬ್ಸೂರು ಗ್ರಾಮಕ್ಕೆ ತೆರಳಿದ ಶಾಸಕರು, ಕಿತ್ತೂರುರಾಣಿ ಚೆನ್ನಮ್ಮ ಶಾಲೆ ಬಳಿ 2.60 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ನೂತನ ಕಟ್ಟಡ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದರು.
ನಿವೃತ್ತ ಉಪನ್ಯಾಸಕ ಎಸ್.ಆರ್.ರಾಮೇಗೌಡ, ಜಿಲ್ಲಾ ಅಲ್ಪಸಂಖ್ಯಾತರ ವಿಭಾಗದ ಅಧ್ಯಕ್ಷ ಅಲ್ಲಾಜ್ ಅಜೀಜುಲ್ಲಾ, ಗ್ರಾಪಂ ಅಧ್ಯಕ್ಷೆ ರಾಣಿ ರಾಜಣ್ಣ, ಮಾಜಿ ಅಧ್ಯಕ್ಷ ಎಸ್.ಎ.ಗೋಪಾಲಗೌಡ, ಸದಸ್ಯ ಅಯಾಜ್, ಹಾಲಿನ ಡೇರಿ ಅಧ್ಯಕ್ಷ ಎಸ್.ಕೆ.ಮಧುಚಂದ್ರ, ಟ್ರಸ್ಟ್ ಅಧ್ಯಕ್ಷ ಅಜಮಲ್ ಪಾಷ, ಉಪಾಧ್ಯಕ್ಷ ಎಚ್.ಸಿ. ಚಂದ್ರಪ್ಪ, ಡಾ.ರಾಜ್ಕುಮಾರ್, ವೇದಿಕೆ ಸಂಚಾಲಕ ಎಸ್.ಬಿ. ಗುಣಚಂದ್ರಕುಮಾರ್, ಧನಂಜಯ, ಸತೀಶ್, ರಮೇಶ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

