ತಂಬಾಕು ಸಸಿಮಡಿ ನಿರ್ವಹಣೆ ತರಬೇತಿ
ಪಿರಿಯಾಪಟ್ಟಣ: ತಂಬಾಕು ಟ್ರೇ ನರ್ಸರಿ ವಿಧಾನದಿಂದ ಶೇ.100 ರಷ್ಟು ಸಸಿಗಳನ್ನು ಪಡೆಯಬಹುದು ಎಂದು ಕಂಪಲಾಪುರ ತಂಬಾಕು ಹರಾಜು ಮಾರುಕಟ್ಟೆ 62ರ ಹರಾಜು ಅಧೀಕ್ಷಕ ಬಿ.ಮಂಜುರಾಜ್ ಹೇಳಿದರು. ತಾಲೂಕಿನ ಕರಣಕುಪ್ಪೆ ಗ್ರಾಮದಲ್ಲಿ ನಡೆದ ಸಸಿಮಡಿ ಕಾರ್ಯನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿ ಮಾತನಾಡಿದ ಅವರು, ಟ್ರೇ ಪದ್ಧತಿಯಿಂದ ರೋಗಮುಕ್ತ ಸಸಿಗಳನ್ನು ಪಡೆಯಬಹುದಾಗಿದೆ. ಅಲ್ಲದೆ ಹೊಲದಲ್ಲಿ ನಾಟಿ ಮಾಡಿದಾಗ ಆರೋಗ್ಯವಂತ ಗಿಡಗಳಿಂದ ಉತ್ತಮ ಇಳುವರಿ ನಿರೀಕ್ಷಿಸಬಹುದಾಗಿದೆ ಎಂದು ತಿಳಿಸಿದರು.
ಗೊಬ್ಬರ ವಿತರಣೆ: 2014-15ನೇ ಸಾಲಿನಲ್ಲಿ ತಂಬಾಕು ಮಂಡಳಿ ವತಿಯಿಂದ ಮುಂಗಡ ಹಣ ಕಟ್ಟಿದ ನೋಂದಾಯಿತ ರೈತರಿಗೆ ಗೊಬ್ಬರ ವಿತರಣೆ ಪ್ರಾರಂಭಗೊಂಡಿದ್ದು, ರೈತರು ಸಹಿ ಮಾಡಿದ ದಾಖಲೆಗಳನ್ನು ಮಂಡಳಿ ಅಧಿಕಾರಿಗಳಿಗೆ ನೀಡಿ ನಿಗದಿತ ಕ್ಲಸ್ಟರ್ ದಿನಾಂಕದಂದು ಗೊಬ್ಬರ ಪಡೆದುಕೊಳ್ಳಬಹುದಾಗಿದೆ. ಇವರೆಗೆ ಡಿಎಪಿ, ಸಿಎಎನ್, ಎಸ್ಒಪಿ ಗೊಬ್ಬರ ಪೂರೈಕೆಯಾಗುತ್ತಿತ್ತು. ಈ ಸಾಲಿನಲ್ಲಿ ಇದರ ಬದಲಿಗೆ ಸಿಂಗಲ್ ಸೂಪರ್ ಪಾಸ್ಪೆಟ್, ಅಮೋನಿಯಂ ಸಲ್ಫೆಟ್ ವಿತರಿಸಲಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

