ಸ್ವಯಂ ಚಾಲಿತ ವ್ಯವಸ್ಥೆ ಮೈಸೂರು 5ನೇ ನಗರ
ಕ.ಪ್ರ.ವಾರ್ತೆ ಮೈಸೂರು ಮೇ 13
ಮೈಸೂರು ಸಂಪೂರ್ಣ ಸ್ವಯಂಚಾಲಿತವಾದ ಇಂಡಿಯನ್ ಆಯಿಲ್ ರೀಟೇಲ್ ಔಟ್ಲೆಟ್ಗಳನ್ನು ಹೊಂದಿರುವ ದೇಶದ ಐದನೇ ನಗರವಾಗಿದೆ ಎಂದು ಇಂಡಿಯನ್ ಆಯಿಲ್ ರಾಜ್ಯ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕ ಆರ್.ಕೆ. ಅರೋರ ಹೇಳಿದರು.
ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಗರ ಪಾಲಿಕೆ ವ್ಯಾಪ್ತಿಯ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಲಿಮಿಟೆಡ್ ಇಂಧನ ಕೇಂದ್ರಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ನ ಶೇ.100 ರಷ್ಟು ಸ್ವಯಂಚಾಲಿತ ಫ್ಯೂಯಲಿಂಗ್ ವ್ಯವಸ್ಥೆ ಇದೆ. ಭಾರತದ ಚಂಡೀಗಢ್, ಜಾಮ್ನಗರ, ಬರೋಡ ಮತ್ತು ಮಂಗಳೂರು ಬಳಿಕ ಮೈಸೂರು ಐದನೆ ನಗರವಾಗಿದ್ದು, ರಾಜ್ಯದ ಎರಡನೆ ನಗರವಾಗಿದೆ ಎಂದು ತಿಳಿಸಿದರು.
ಐತಿಹಾಸಿಕ ನಗರವಾದ ಮೈಸೂರಿನಲ್ಲಿ ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಅಗತ್ಯವಿದೆ. ರೀಟೇಲ್ ಔಟ್ಲೆಟ್ಗಳ ಸ್ವಯಂಚಾಲನೆಯು ಗ್ರಾಹಕರಿಗೆ ತೃಪ್ತಿ ತರುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಾಗಿದೆ ಎಂದರು.
ಇಂಡಿಯನ್ ಆಯಿಲ್ನ ಪ್ರಧಾನ ವ್ಯವಸ್ಥಾಪಕ ಎಸ್. ವರದಾಚಾರಿ, ರೀಟೇಲ್ ಮಾರಾಟ ವಿಭಾಗದ ಪ್ರಧಾನ ವ್ಯವಸ್ಥಾಪಕ ಎಂ.ಡಿ.ಕುಮಾರ್, ಡಿಜಿಎಂಗಳಾದ ಪಿ.ಎಸ್. ಮೋನಿ, ಕೆ. ರವಿಚಂದ್ರನ್, ವಿಭಾಗೀಯ ಹಿರಿಯ ಮಾರಾಟ ವ್ಯವಸ್ಥಾಪಕ ಎಸ್. ಶ್ರೀಧರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

