ಶ್ರೀ ಲಕ್ಷ್ಮೀನರಸಿಂಹಸ್ವಾಮಿ ವೈಭವದ ರಥೋತ್ಸವ
ಕ.ಪ್ರ.ವಾರ್ತೆ ಹುಣಸೂರು ಮೇ 14
ಪಟ್ಟಣದ ಲಕ್ಷ್ಮಣತೀರ್ಥ ನದಿ ತಟದಲ್ಲಿನ ಶ್ರೀ ಲಕ್ಷ್ಮಿನರಸಿಂಹಸ್ವಾಮಿಯ 178ನೇ ವರ್ಷದ ದಿವ್ಯ ರಥಾವರೋಹಣೋತ್ಸವ ಬುಧವಾರ ವಿಜೃಂಭಣೆಯಿಂದ ನಡೆಯಿತು.
ಪಟ್ಟಣದ ಮಧ್ಯ ಭಾಗದ ಲಕ್ಷ್ಮಣತೀರ್ಥ ನದಿ ದಂಡೆಯ ಮೇಲಿನ ದೇವರ ರಥೋತ್ಸವವು ನೂರಾರು ಆಸ್ತಿಕರ ಸಮ್ಮುಖದಲ್ಲಿ ಜರುಗಿತು. ಜಾತ್ರೆ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆರಂಭವಾಯಿತು. ಶಾಸಕ ಎಚ್.ಪಿ.ಮಂಜುನಾಥ್ ಲಕ್ಷ್ಮಿನರಸಿಂಹಸ್ವಾಮಿ, ವೇಣುಗೋಪಾಲಸ್ವಾಮಿ, ಲಕ್ಷ್ಮಿದೇವಿ ಹಾಗೂ ಉತ್ಸವಮೂರ್ತಿಗಳಿಗೆ ಪೂಜೆ ಸಲ್ಲಿಸುವ ಮೂಲಕ ರಥಾವರೋಹಣೋತ್ಸವಕ್ಕೆ ಚಾಲನೆ ನೀಡಿದರು.
ಬುದ್ಧ ಪೌರ್ಣಿಮಾವಾದ ಬುಧವಾರ ಬೆಳಗ್ಗೆ 11.25ಕ್ಕೆ ಉತ್ಸವಮೂರ್ತಿಯನ್ನು ರಥದ ಮೇಲೆ ಪ್ರತಿಷ್ಠಾಪಿಸಿ ರಥ ಎಳೆಯಲಾಯಿತು. ನೆರೆದಿದ್ದ ನೂರಾರು ಭಕ್ತರು ಲಕ್ಷ್ಮಿನರಸಿಂಹಸ್ವಾಮಿ ನಾಮಸ್ಮರಣೆ ಮಾಡುತ್ತಾ ಜೈಕಾರ ಕೂಗಿದರು. ರಸ್ತೆಯ ಅಕ್ಕಪಕ್ಕದ ಮನೆಯವರು ರಸ್ತೆಯುದ್ದಕ್ಕೂ ನೀರು ಹಾಕಿ ಬಿಸಿಲಿನ ತಾಪ ಕಡಿಮೆಗೊಳಿಸುತ್ತಿದ್ದರು. ಕೆಲವೆಡೆ ಮಜ್ಜಿಗೆ ನೀಡಿದರು. ರಥವು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು.
ತಹಸೀಲ್ದಾರ್ ವೆಂಕಟಚಾಲಪ್ಪ, ಪುರಸಭಾ ಮುಖ್ಯಾಧಿಕಾರಿ ಎ.ರಮೇಶ್, ಪುರಸಭಾ ಉಪಾಧ್ಯಕ್ಷೆ ಧನಲಕ್ಷ್ಮಮ್ಮ, ಪುರಸಭಾ ಸದಸ್ಯ ಜಾಕೀರ್ ಹುಸೇನ್, ದೇವಸ್ಥಾನದ ಸಂಚಾಲಕ ಎಚ್.ಆರ್. ಗುರುರಾಜ್, ಸೇವಾರ್ಥದಾರರಾದ ಕೃಷ್ಣಮೂರ್ತಿ, ರಾಘವೇಂದ್ರ, ಪ್ರಕಾಶ್, ಸಂಪತ್, ಮಂಜು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

