ಮೈಸೂರು

ಐವರು ಕದೀಮರ ಸೆರೆ4 ಲಕ್ಷ, ಮೊಬೈಲ್ ವಶ

Published On :

ಪಿರಿಯಾಪಟ್ಟಣ: ಬೆಂಗಳೂರು, ಮೈಸೂರು ಸೇರಿದಂತೆ ತಾಲೂಕಿನ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿರುವ ಐವರು ಆರೋಪಿಗಳನ್ನು ಬಂಧಿಸಿರುವ ಪಟ್ಟಣದ ಪೊಲೀಸರು, ನಾಲ್ಕು ಲಕ್ಷಕ್ಕೂ ಅಧಿಕ ಬೆಲೆಬಾಳುವ ಮಾಲನ್ನು ವಶಪಡಿಸಿಕೊಂಡಿದ್ದಾರೆ. ಹಾಸನದ ಕುಂಬಾರ ಬೀದಿಯ ಪ್ರಕಾಶ್, ಬೆಂಗಳೂರಿನ ಹೊಸಪಾಳ್ಯ ಚೋಳನಾಯಕನಹಳ್ಳಿ ಗ್ರಾಮದ ವಸಂತ್‌ಕುಮಾರ್, ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಲಕ್ಷ್ಮಿದೇವರಹಳ್ಳಿ ಗ್ರಾಮದ ಗಣೇಶ್, ಪಿರಿಯಾಪಟ್ಟಣ ತಾಲೂಕು ಕಂಪಲಾಪುರ ಗ್ರಾಮದ ನವೀನ್‌ಕುಮಾರ್, ಕೆ.ಎನ್. ನವೀನ್ ಬಂಧಿತ ಆರೋಪಿಗಳು. ಬಂಧಿತರಿಂದ ಕಳ್ಳತನಕ್ಕೆ ಬಳಸಲಾಗಿದ್ದ ಒಂದು ಇಂಡಿಕಾ ಕಾರು, ಮೂರು ಬೈಕ್‌ಗಳು, ಚಿನ್ನದ ಒಡವೆಗಳು, 10 ಮೊಬೈಲ್ ಫೋನ್‌ಗಳು, ವಿವಿಧ ಕಂಪನಿಯ 5 ಗ್ಯಾಸ್ ಸಿಲಿಂಡರ್‌ಗಳು, ಒಂದು ಸೆಟ್ ಕಂಪ್ಯೂಟರ್ ಉಪಕರಣ, ಕಾಪರ್ ಕಾಯಿಲ್‌ಗಳು, ವೈರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕಂಪಲಾಪುರ ಗ್ರಾಮದಲ್ಲಿ ಕೆಲವು ದಿನಗಳ ಹಿಂದೆ ಮೊಬೈಲ್ ಅಂಗಡಿಯಲ್ಲಿ ಕಳ್ಳತನವಾಗಿರುವ ಬಗ್ಗೆ ಬಂದ ದೂರಿನನ್ವಯ ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದ ಪೊಲೀಸರು, ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ತನಿಖೆ ವೇಳೆ ಆರೋಪಿಗಳು ತಾಲೂಕಿನ ಬೆಟ್ಟದಪುರ, ಮಂಡ್ಯ ಜಿಲ್ಲೆ ಕೆಆರ್‌ಎಸ್, ಬೆಂಗಳೂರಿನ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿಯೂ ಕಳ್ಳತನ ಮಾಡಿರುವ ಬಗ್ಗೆ ಒಪ್ಪಿಕೊಂಡಿದ್ದಾರೆ. ಆರೋಪಿ ಬಂಧಿಸಿ ಮಾಲನ್ನು ವಶಪಡಿಸಿಕೊಂಡಿರುವ ಪೊಲೀಸ್ ತಂಡಕ್ಕೆ ಎಸ್ಪಿ ಅಭಿನವ್ ಖರೆ ಪ್ರಶಂಸೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

ವ್ಯವಸ್ಥಾಪಕ ಕೊಲೆನಾಲ್ವರ ಬಂಧನ

ಗುಂಡ್ಲುಪೇಟೆ: ತಾಲೂಕಿನ ಕಾವೇರಿ ಕಂಫರ್ಟ್‌ನ ವ್ಯವಸ್ಥಾಪಕ ಮನುಕುಮಾರ್ ಕೊಲೆಗೆ ಕಾರಣರೆನ್ನಲಾದ ನಾಲ್ವರನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು.   ಮನುಕುಮಾರ್ ಕೊಲೆಯಾದ 15 ದಿನದ ನಂತರ ಪ್ರಕರಣಕ್ಕೆ ತುಸು ಜೀವ ಬಂದಂತಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.