ಮೈಸೂರು

ಇಬ್ಬರು ಬಾಲಕಿಯರು ಸೇರಿ ಐವರು ನಾಪತ್ತೆ

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 23
ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಬಾಲಕಿಯರು ಸೇರಿದಂತೆ ಐದು ನಾಪತ್ತೆಯಾಗಿದ್ದಾರೆ.
ಉದಯಗಿರಿ ಠಾಣೆ ವ್ಯಾಪ್ತಿಯ ನಿವಾಸಿ ಲೇ. ಮಜರ್ ಅಹಮ್ಮದ್ ಎಂಬವರ ಪುತ್ರಿ ಆಫ್ರೀನ್ ತಾಜ್ (15) ಕುರಾನ್ ಕಲಿಯಲು ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಹಿಂದಿ ಮಾತನಾಡುತ್ತಾರೆ. ಉದಯಗಿರಿ ಠಾಣೆ ವ್ಯಾಪ್ತಿಯ ನಿವಾಸಿ ಮೈಕಲ್ ಎಂಬವರ ಪುತ್ರಿ ಆಸಿಯಾ (16) ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಗೋದಿ ಮೈಬಣ್ಣ, ಕೋಲು ಮುಖ, ಸಾಧಾರಣ ಮೈಕಟ್ಟು, ಬಲಗಡೆ ಮೂಗಿನ ಹತ್ತಿರ ಕಪ್ಪು ಮಚ್ಚೆ ಇದೆ. ಹಿಂದಿ ಮಾತನಾಡುತ್ತಾರೆ. ಈ ಇಬ್ಬರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2418309, 509 ಸಂಪರ್ಕಿಸಲು ಉದಯಗಿರಿ ಪೊಲೀಸರು ಕೋರಿದ್ದಾರೆ.
ವಿಜಯನಗರ ವ್ಯಾಪ್ತಿಯಲ್ಲಿ: ಹೂಟಗಳ್ಳಿ ಮಾರಿಗುಡಿ ಬೀದಿ ನಿವಾಸಿ ಸುರೇಶ್‌ಬಾಬು ಎಂಬವರ ಪುತ್ರ ಮೌನೇಶ್ (24) ನಾಪತ್ತೆಯಾಗಿದ್ದಾರೆ. ಚಹರೆ- 5.5 ಅಡಿ ಎತ್ತರ, ಸಾಧಾರಣ ಮೈಕಟ್ಟು, ದುಂಡು ಮುಖ, ಎಣ್ಣೆಗೆಂಪು ಮೈಬಣ್ಣ, ಕನ್ನಡ, ಇಂಗ್ಲಿಷ್, ತಮಿಳು, ತೆಲುಗು, ಹಿಂದಿ ಮಾತನಾಡುತ್ತಾರೆ.
ಹೆಬ್ಬಾಳು 2ನೇ ಹಂತ ಸಾವ್ಯಯಿ ಸಿಂಗ್ ಎಂಬವರ ಪುತ್ರ ರವೀಂದ್ರ ಸಿಂಗ್ (17) ನಾಪತ್ತೆಯಾಗಿದ್ದಾರೆ. ಚಹರೆ- 5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ಹಿಂದಿ ಮಾತನಾಡುತ್ತಾರೆ. ಈ ಇಬ್ಬರ ಬಗ್ಗೆ ಮಾಹಿಸಿ ಸಿಕ್ಕಲ್ಲಿ ದೂ. 0821- 2418117, 317 ಸಂಪರ್ಕಿಸಲು ವಿಜಯನಗರ ಠಾಣೆ ಪೊಲೀಸರು ಕೋರಿದ್ದಾರೆ.
ಬಸವಪುರ ವ್ಯಕ್ತಿ: ಮೈಸೂರು ತಾಲೂಕು ಇಲವಾಲ ಹೋಬಳಿ ಬಸವರಪುರ ನಿವಾಸಿ ಎಚ್.ಡಿ. ರಮೇಶ್ ಎಂಬವರ ಪುತ್ರ ಎಚ್.ಆರ್. ಹೇಮಂತ್ (26) ವೈವಾಹಿಕ ಜೀವನ ಸರಿ ಇಲ್ಲದ ಕಾರಣ ನಾಪತ್ತೆಯಾಗಿದ್ದಾರೆ. ಚಹರೆ- 5.2 ಅಡಿ ಎತ್ತರ, ದುಂಡು ಮುಖ, ಸಾಧಾರಣ ಮೈಕಟ್ಟು, ಗೋದಿ ಮೈಬಣ್ಣ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2402222 ಸಂಪರ್ಕಿಸಲು ಇಲವಾಲ ಠಾಣೆಯ ಎಸ್‌ಐ ಟಿ.ಎನ್. ಪುನೀತ್ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.