ಮೈಸೂರು

ಇಬ್ಬರು ಮಕ್ಕಳಿಗೆ ಮೋದಿ ಹೆಸರು

Published On :

ಕ.ಪ್ರ.ವಾರ್ತೆ ್ಣ ಮೈಸೂರು ್ಣ ಮೇ 27
ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀಕರಿಸಿದ ವೇಳೆಗೆ ನಗರದ ಚಲುವಾಂಬ ಆಸ್ಪತ್ರೆಯಲ್ಲಿ ಜನಿಸಿದ ಇಬ್ಬರು ಮಕ್ಕಳಿಗೆ ಮೋದಿ ಅವರ ಹೆಸರಿಡಲಾಗಿದೆ.
ಮಾಜಿ ಸಚಿವ ಎಸ್.ಎ. ರಾಮದಾಸ್ ನೇತೃತ್ವದಲ್ಲಿ ಇಬ್ಬರು ಮಕ್ಕಳಿಗೆ ಮೋದಿ ಪದ ಬಳಕೆಯ ಹೆಸರನ್ನು ನಾಮಕರಣ ಮಾಡಲಾಯಿತು. ಸೋಮವಾರ ಸಂಜೆ 6.15ರ ಸುಮಾರಿನಲ್ಲಿ ಚಲುವಾಂಬ ಆಸ್ಪತ್ರೆಯಲ್ಲಿ ಇಬ್ಬರು ಗಂಡು ಮಕ್ಕಳು ಜನಿಸಿದ್ದವು. ಈ ಪೈಕಿ ಒಂದು ಮಗು
ಶಾಲಿನಿ ಕೃಷ್ಣ ಎಂಬವರಿಗೂ ಮತ್ತೊಂದು ಮಗು ಉಮಾ ಮಧುಕರ್ ಅವರಿಗೂ ಸೇರಿದವು. ಈ ಪೈಕಿ ಶಾಲಿನಿ ಅವರ ಮಗುವಿಗೆ ನರೇಂದ್ರ ಕೃಷ್ಣ ಮೋದಿ ಎಂತಲೂ, ಉಮಾ ಅವರ ಮಗುವಿಗೆ ತನ್ಮಯ್ ಮೋದಿ ಎಂತಲೂ ನಾಮಕರಣ ಮಾಡಲಾಯಿತು.
ಶಾಲಿನಿ ಅವರ ಪತಿ ಕೃಷ್ಣ ಅವರು ಎಂ.ಎಸ್ಸಿ ಸಮಾಜಶಾಸ್ತ್ರ ಓದಿದ್ದರೂ ನಿರುದ್ಯೋಗದಿಂದ ಬಳಲುತ್ತಿದ್ದರು. ಅವರಿಗೆ ಖಾಸಗಿ ಕಂಪನಿಯಲ್ಲಿ ಉದ್ಯೋಗಾವಕಾಶ ಕಲ್ಪಿಸಲಾಯಿತು. ಅಲ್ಲದೆ ಇಬ್ಬರೂ ಮಕ್ಕಳ ಸಂಪೂರ್ಣ ವಿದ್ಯಾಭ್ಯಾಸದ ಖರ್ಚನ್ನು ವಹಿಸಿಕೊಳ್ಳುವುದಾಗಿ ಆ ಇಬ್ಬರು ಮಕ್ಕಳ ಪೋಷಕರಿಗೆ ಎಸ್.ಎ. ರಾಮದಾಸ್ ಪತ್ರ ನೀಡಿದರು. ಈ ವೇಳೆ ನಗರ ಬಿಜೆಪಿ ಅಧ್ಯಕ್ಷ ಮಾರುತಿರಾವ್ ಪವಾರ್, ನಗರ ಪ್ರಧಾನ ಕಾರ್ಯದರ್ಶಿ ಮಲ್ಲಪ್ಪಗೌಡ, ಕೆ.ಆರ್. ಕ್ಷೇತ್ರ ಬಿಜೆಪಿ ಅಧ್ಯಕ್ಷ ಆರ್. ರಾಮಪ್ರಸಾದ್, ಉಪಾಧ್ಯಕ್ಷ ಆರ್. ನಾಗರಾಜ್, ಪಾಲಿಕೆ ಸದಸ್ಯ ಬಿ.ವಿ. ಮಂಜುನಾಥ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.