ಮೈಸೂರು

ಇರಿತ ಪ್ರಕರಣ: ಜಾಮೀನು ಅರ್ಜಿ ವಜಾ

Published On :

ಮೈಸೂರು: ಕ್ಷುಲಕ ಕಾರಣಕ್ಕೆ ಉಂಟಾಗದ ಗಲಾಟೆಯಲ್ಲಿ ವ್ಯಕ್ತಿಯೊಬ್ಪರಿಗೆ ಚಾಕುವಿನಿಂದ ಇರಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ 3ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿದೆ.
ಇಟ್ಟಿಗೆಗೂಡು ಬಡಾವಣೆಯ ಸಿದ್ದಪ್ಪಾಜಿ ದೇವಾಲಯ ವೃತ್ತದಲ್ಲಿ ಏ. 13ರಂದು ಸಂತೋಷ್ ಎಂಬವರ ಮೇಲೆ ಅದೇ ಬಡಾವಣೆಯ ಎನ್. ಮಹದೇವ್, ಎನ್. ನಿಂಗಣ್ಣ, ಎಸ್. ಶಂಕರ್, ಕೆ. ಆಕಾಶ್ ಎಂಬವರು ಚಾಕುವಿನಿಂದ ಇರಿದು ಮಾರಣಾಂತಿಕ ಹಲ್ಲೆ ನಡೆಸಿದ್ದರು.
ಜೆಎಸ್‌ಎಸ್ ಬಡಾವಣೆಯಲ್ಲಿ ಸಂತೋಷ್ ಕೇಬಲ್ ವ್ಯವಹಾರ ನಡೆಸುತ್ತಿದ್ದರು. ಈ ನಡುವೆ ಭುಗತಗಳ್ಳಿಯಲ್ಲಿ ಕೇಬಲ್ ವ್ಯವಹಾರ ನಡೆಸುತ್ತಿದ್ದ ಮಹದೇವ್, ಸಂತೋಷ್‌ಗೆ ಸೇರುವ ವ್ಯಾಪ್ತಿಯಲ್ಲಿ ಕೇಬಲ್ ಎಳೆದಿದ್ದರು ಎಂದು ಹೇಳಲಾಗಿದ್ದು, ಇದೇ ವಿಚಾರಕ್ಕಾಗಿ ಇಬ್ಬರ ನಡುವೆಗಲಾಟೆ ನಡೆದಿತ್ತು. ಪ್ರಕರಣ ಸಂಬಂಧ ಸಂತೋಷ್ 2 ಬಾರಿ ಮೈಸೂರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದರು. ಇದರಿಂದ ಸಿದ್ದಪ್ಪಾಜಿ ದೇವಾಲಯ ಬಳಿ ಸಂತೋಷ್ ಹಾಗೂ ಮಹದೇವ ನಡುವೆ ಗಲಾಟೆ ನಡೆದಿದ್ದು, ಮಹದೇವ್ ಸೇರಿ ನಾಲ್ವರು ಸೇರಿಕೊಂಡು ಸಂತೋಷ್ ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದಿದ್ದರು. ಪ್ರಕರಣ ಕುರಿತು ವಿಚಾರಣೆ ನಡೆಸಿದ ನ್ಯಾಯಾಧೀಶರು, ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿ ಅರ್ಜಿ ವಜಾಗೊಳಿಸಿದ್ದಾರೆ.
ಆಟೋ ಚಾಲಕ ಸಾವು
ಸಾರಿಗೆ ಸಂಸ್ಥೆಯ ಬಸ್ಸೊಂದು ಆಟೋ ರಿಕ್ಷಾಗೆ ಡಿಕ್ಕಿ ಹೊಡೆದ ಪರಿಣಾಮ ಆಟೋ ಚಾಲಕ ಸ್ಥಳದಲ್ಲಿಯೆ ಮೃತಪಟ್ಟ ಘಟನೆ ನಗರದ ಫೈವ್‌ಲೈಟ್ ವೃತ್ತದಲ್ಲಿ ನಡೆದಿದೆ. ಶಾಂತಿನಗರ ಬೀಡಿ ಕಾಲೋನಿ ನಿವಾಸಿ ಪೀರ್ ಜಾನ್ (52) ಮೃತಪಟ್ಟವರು. ಸಾರಿಗೆ ಬಸ್ ಡಿಕ್ಕಿ ಹೊಡೆದಿದೆ. ಬಸ್ ಡಿಕ್ಕಿ ಹೊಡೆದ ಪರಿಣಾಮ ಪೀರ್‌ಜಾನ್ ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೆ ಮೃತಪಟ್ಟರು. ಈ ಸಂಬಂಧ ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಶವ ಪತ್ತೆ
ನಗರದ ಕಲಾಮಂದಿರ ಬಳಿಯ ರೈಲು ಹಳಿಯ ಮೇಲೆ ಅಪರಿಚಿತ ಯುವಕನ ಮೃತದೇಹ ಪತ್ತೆಯಾಗಿದೆ. 25 ವರ್ಷ ವಯಸ್ಸಿನ 5.5 ಅಡಿ ಎತ್ತರ, ಕಂದುಬಣ್ಣ, ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಂದು ಬಣ್ಣದ ಟಿ ಶರ್ಟ್ ಧರಿಸಿದ್ದಾನೆ. ಆತನ ಚೇಬಿನಲ್ಲಿ ಚಾಮರಾಜನಗರ ಮತ್ತು ಅತ್ತಿಗಳ್ಳಿ ನಡುವೆ ಪ್ರಯಾಣ ಮಾಡಿದ ಕೆಎಸ್ಸಾರ್ಟಿಸಿ ಬಸ್ ಟಿಕೆಟ್ ದೊರೆತಿದೆ. ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಾಲಕಿ ನಾಪತ್ತೆ
ಕುಂಬಾರಕೊಪ್ಪಲು ಸರ್ಕಾರಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದ ಮಾನಸ (14) ಮೇ 17ರ ಮಧ್ಯಾಹ್ನ 3.10 ನಿಮಿಷದಿಂದ ಕಾಣೆಯಾಗಿದ್ದಾಳೆ. 4 ಅಡಿ ಎತ್ತರ, ಗೋದಿ ಮೈ ಬಣ್ಣ, ಸಾದಾರಣ ಮೈಕಟ್ಟು, ಕನ್ನಡ ಮಾತನಾಡುತ್ತಾಳೆ. ಆಕೆಯ ಎಡಗೈನಲ್ಲಿ ಎಸ್‌ಆರ್ ಎಂದು ಹಚ್ಚೆ ಹಾಕಿದೆ. ಈಕೆಯ ಸುಳಿವು ದೊರೆತಲ್ಲಿ ಮೇಟಗಳ್ಳಿ ಠಾಣೆ ದೂ. 2418339 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.