ಬಿಎಸ್ಸಿ: ಶೈಲಜಾಗೆ 10ನೇ ರ್ಯಾಂಕ್
ಸಿಂಧನೂರು: ತಾಲೂಕಿನ ಪುಲ್ದಿನ್ನಿ ಗ್ರಾಮದ ಶರಣೇಗೌಡ ಮಾಲಿಪಾಟೀಲರ ಪುತ್ರಿ ಕು. ಶೈಲಜಾ ಬಿಎಸ್ಸಿ ಅಂತಿಮ ವರ್ಷದ ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಪಡೆದಿದ್ದಾರೆ. ಬಳ್ಳಾರಿಯ ಅಲ್ಲಂ ಸುಮಂಗಲಮ್ಮ ಮೆಮೋರಿಯಲ್ ಮಹಿಳಾ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಶೈಲಜಾ 2012ರಲ್ಲಿ ನಡೆದ ಪರೀಕ್ಷೆಯಲ್ಲಿ 10ನೇ ರ್ಯಾಂಕ್ ಪಡೆದಿದ್ದು, ಬಿಜಾಪುರದ ಕೆಎಸ್ಡಬ್ಯ್ಲೂ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ನ್ಯಾಯವಾದಿಗಳಾದ ಎಚ್.ರಾಮನಗೌಡ, ಎನ್.ರಾಮನಗೌಡ, ಕೆ.ವೀರನಗೌಡ, ಬಸನಗೌಡ ಪುಲ್ದಿನ್ನಿ ಮತ್ತಿತರರು ಅಭಿನಂದನೆ ಸಲ್ಲಿಸಿ ಇವರ ಮುಂದಿನ ವಿದ್ಯಾಭ್ಯಾಸ ಹೀಗೆಯೇ ಯಶಸ್ಸಿನ ಮೆಟ್ಟಿಲೇರಲಿ ಎಂದು ಹಾರೈಸಿದ್ದಾರೆ.
ಶಶಿಕಲಾಗೆ 8ನೇ ರ್ಯಾಂಕ್
ಸಿಂಧನೂರು: ತಾಲೂಕಿನ ಪುಲ್ದಿನ್ನಿ ಗ್ರಾಮದ ಅಮರೇಗೌಡ ಮಾಲಿಪಾಟೀಲ್ ಅವರ ಪುತ್ರಿ ಕು. ಶಶಿಕಲಾ ಬಿಎ ಅಂತಿಮ ವರ್ಷದ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ಪಡೆದಿದ್ದಾರೆ. ಬಳ್ಳಾರಿಯ ಅಲ್ಲಂ ಸುಮಂಗಲಮ್ಮ ಮೆಮೋರಿಯಲ್ ಮಹಿಳಾ ಕಾಲೇಜಿನಲ್ಲಿ ಅಭ್ಯಾಸ ಮಾಡುತ್ತಿದ್ದ ಶಶಿಕಲಾ 2012ರಲ್ಲಿ ನಡೆದ ಪರೀಕ್ಷೆಯಲ್ಲಿ 8ನೇ ರ್ಯಾಂಕ್ ಪಡೆದು ಬಿಜಾಪುರದ ಕೆ.ಎಸ್.ಡಬ್ಯ್ಲೂ ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದ್ದಾರೆ. ಇವರ ಸಾಧನೆಗೆ ನ್ಯಾಯವಾದಿಗಳಾದ ಎಚ್. ರಾಮನಗೌಡ, ಎನ್. ರಾಮನಗೌಡ, ಕೆ.ವೀರನಗೌಡ, ಬಸನಗೌಡ ಪುಲ್ದಿನ್ನಿ ಮತ್ತಿತರರು ಅಭಿನಂದನೆ ಸಲ್ಲಿಸಿ ಇವರ ಮುಂದಿನ ವಿದ್ಯಾಭ್ಯಾಸ ಹೀಗೆಯೇ ಯಶಸ್ಸಿನ ಮೆಟ್ಟಿಲೇರಲಿ ಎಂದು ಹಾರೈಸಿದ್ದಾರೆ.
ಪ್ರವೇಶಕ್ಕೆ ಅರ್ಜಿ
ರಾಯಚೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮೊರಾರ್ಜಿ ದೇಸಾಯಿ 'ಏಕಲವ್ಯ' ಕಿತ್ತೂರು ಚೆನ್ನಮ್ಮ ಬಾಲಕಿಯರ ವಸತಿ ಶಾಲೆಗಳಲ್ಲಿ 7ನೇ ತರಗತಿಯಿಂದ 9ನೇ ತರಗತಿವರೆಗೆ ಖಾಲಿ ಇರುವ ಸ್ಥಾನಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಸತಿ ಶಾಲೆಗಳಲ್ಲಿ 10ನೇ ತರಗತಿಯವರೆಗೆ ಉಚಿತ ಉತ್ತಮ ವಿದ್ಯಾಭ್ಯಾಸ ನೀಡಲಾಗುತ್ತದೆ ಎಂದು ತಿಳಿಸಿದೆ. ನಿಗದಿತ ಅರ್ಜಿ ನಮೂನೆಗಳನ್ನು ವಸತಿ ಶಾಲೆಗಳಿಂದ ಏ.22ರಿಂದ ಮೇ 20ರವರೆಗೆ ಪಡೆದು ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಸಂಬಂಧಿಸಿದ ವಸತಿ ಶಾಲೆಗಳಿಗೆ ಸಲ್ಲಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

