ರೇಲ್ವೆ ಟಿಕೆಟ್ ಹೊಸ ಕೌಂಟರ್ ಆರಂಭ
ಗುಲ್ಬರ್ಗ: ಗುಲ್ಬರ್ಗ ನಗರದ ರೈಲು ನಿಲ್ದಾಣದ ತಾರಫೈಲ್ ಬಡಾವಣೆಯಿಂದ ಪ್ರವೇಶ ಮಾಡುವ ಕಡೆಗೂ ಹೊಸದಾಗಿ ಸಾಮಾನ್ಯ ರೇಲ್ವೆ ಟಿಕೆಟ್ ಬುಕ್ಕಿಂಗ್ ಕೌಂಟರ್ ಶುಕ್ರವಾರದಂದು ಕಾರ್ಯಾರಂಭಗೊಂಡಿದೆ. ಇದರಿಂದ ಬಹುದಿನಗಳ ಬೇಡಿಕೆಯೊಂದು ಈಡೇರಿದಂತಾಗಿದೆ. ನಿಲ್ದಾಣದ ಪ್ಲಾಟ್ ಫಾರಂ 3 ಬಳಿಯಿರುವ ರೇಲ್ವೆ ಪ್ರಯಾಣಿಕರ ಪಾದಚಾರಿ ಸೇತುವೆಯ ಬಳಿ ಕೌಂಟರ್ ಆರಂಭಗೊಂಡಿದೆ. ಬೆಳಿಗ್ಗೆ 8 ರಿಂದ ಸಂಜೆ 4ರವರೆಗೆ ಕಾರ್ಯನಿರ್ವಹಿಸಲಿದೆ ಎಂದು ಸೋಲಾಪುರ ರೇಲ್ವೆ ವಿಭಾಗದ ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದ ಜೇವರ್ಗಿ ಹಳೆಯ ರಸ್ತೆ ಕಡೆಯಿಂದ ಬರುವ ಪ್ರಯಾಣಿಕರಿಗೆ ಅನುವು ಆಗಲಿದೆ. ಇದನ್ನು ಎಲ್ಲ ಪ್ರಯಾಣಿಕರು ಗಮನಿಸುವಂತೆ ಕೋರಲಾಗಿದೆ. ಶುಕ್ರವಾರದಿಂದ ಇಲ್ಲಿ ಜನರಲ್ ಟಿಕೆಟ್‌ಗಳನ್ನು ಮಾತ್ರ ನೀಡಲಾಗುತ್ತದೆ. ಇದಕ್ಕೆ ಉತ್ತಮ ಪ್ರತಿಕ್ರಿಯೆ ಬಂದರೆ ಮುಂದಿನ ದಿನಗಳಲ್ಲಿ ಹೊಸ ಪ್ಲಾಟ್ ಫಾರಂ ನಿರ್ಮಾಣ ಪೂರ್ಣಗೊಂಡ ನಂತರ ಇನ್ನಷ್ಟು ಕೌಂಟರ್‌ಗಳನ್ನು ಹೆಚ್ಚಿಸುವುದರ ಜತೆಗೆ ರಿಜರ್‌ವೇಷನ್ ಆರಂಭಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಂಗಂಪೇಟೆಯಲ್ಲಿ 15ರಂದು ರಕ್ತದಾನ ಶಿಬಿರ ಆಯೋಜನೆ
ಸುರಪುರ: ಸ್ವಾಮಿ ವಿವೇಕಾನಂದರ 150ನೇ ವರ್ಷಾಚರಣೆ ಅಂಗವಾಗಿ ತಾಲೂಕು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ರಂಗಂಪೇಟೆಯ ಓಂಕಾರ ಯೋಗ ಶಿಕ್ಷಣ ಸಮಿತಿ ಹಾಗೂ ಸುರಪುರ ಪತಂಜಲಿ ಯೋಗ ಶಿಕ್ಷಣ ಸಮಿತಿ ಸಂಯುಕ್ತವಾಗಿ ಆ. 15 ರಂದು ರಂಗಂಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ರಕ್ತದಾನ ಶಿಬಿರವನ್ನು ಏರ್ಪಡಿಸಿದೆ. ಬೆಳಿಗ್ಗೆ 10 ಗಂಟೆಗೆ ಯಾದಗಿರಿಯ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಲ್ಲಿಕಾರ್ಜುನ ಮುಕ್ಕಾ ಉದ್ಘಾಟಿಸುವರು. ವೀರಶೈವ ಸಮಿತಿ ತಾಲೂಕು ಅಧ್ಯಕ್ಷ ಸುರೇಶ ಸಜ್ಜನ್ ಅಧ್ಯಕ್ಷತೆ ವಹಿಸುವರು. ತಾಲೂಕು ಆರೋಗ್ಯಾಧಿಕಾರಿ ಡಾ. ರಾಜಾ ವೆಂಕಪ್ಪ ನಾಯಕ ಹಾಗೂ ಏಡ್ಸ್ ನಿಯಂತ್ರಣ ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಡಾ. ಅಭಯಕುಮಾರ ಪಾಟೀಲ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಮಿತಿ ಮುಖಂಡ ಭುವನಸುಂದರ ತಿಳಿಸಿದ್ದಾರೆ. ರಕ್ತದಾನ ನೀಡುವವರು ಆ. 15 ಒಳಗಾಗಿ ಅಮರಪ್ಪ ಹಿರಿಯ ಆರೋಗ್ಯ ಸಹಾಯಕರು ದೂ. ಸಂ. 8277508009, ಪ್ರಸ್ನಕುಮಾರ ಹೆಡಗಿನಾಳ 9916525124, ಬಿ.ಆರ್. ತೇಲ್ಕರ್ 99011099606, ಶಿಲ್ಪಾ ಅವಂಟಿ 8884927472, ಗೋವಿಂದರಾಜ ಬೋಡಾ 9741680026, ಜ್ಞಾನದೇವ ಪಾಣಿಭಾತೆ 9916207179, ಸಂತೋಷ ಹೆಡಗಿನಾಳ 9535398567, ಲಕ್ಷ್ಮೀಕಾಂತ ಬಿರಾದಾರ 9535398450 ಇವರಲ್ಲಿ ಹೆಸರನ್ನು ನೋಂದಾಯಿಸಲು ಕೋರಲಾಗಿದೆ.
ವಿದ್ಯುದ್ದೀಕರಣ; ಜನತೆಗೆ ಎಚ್ಚರಿಕೆ
ರಾಯಚೂರು: ಸಿಂಧನೂರಿನ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮವು 220 ಕೆವಿ ವಿದ್ಯುತ್ ಉಪ ಕೇಂದ್ರದಿಂದ 110 ಕೆವಿ ಮಾರ್ಗ ನಿರ್ಮಿಸಿದ್ದು, ತುರ್ವಿಹಾಳವರೆಗಿನ ಈ ಮಾರ್ಗದಲ್ಲಿ ಆ.12ರಂದು ವಿದ್ಯುದ್ದೀಕರಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ. ಹೊಸದಾಗಿ ಕಾರ್ಯಾರಂಭ ಮಾಡಲಿರುವ ತುರ್ವಿಹಾಳದ 110 ಕೆವಿ ವಿದ್ಯುತ್ ಉಪಕೇಂದ್ರದಿಂದ ಶ್ರೀಪುರಂ ಜಂಕ್ಷನ್, ಇ.ಜೆ. ಹೊಸಳ್ಳಿ, ವಿರುಪಾಪೂರ, ಹಟ್ಟಿ, 7ನೇ ಮೈಲು ಕ್ಯಾಂಪ್, ಮಲ್ಲದಗುಡ್ಡ, ಗುಂಜಳ್ಳಿ ಕ್ಯಾಂಪ್, ತುರ್ವಿಹಾಳ ಮತ್ತು ಆಸುಪಾಸಿನ ಗ್ರಾಮದ ಸರಹದ್ದಿನಲ್ಲಿ ಈ ಮಾರ್ಗ ಸಾಗುತ್ತಿದ್ದು, ಆ.12ರಿಂದ ಈ ಮಾರ್ಗದಲ್ಲಿ ವಿದ್ಯುತ್ ಹರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮಗಳ ಜನತೆ ಎಚ್ಚರಿಕೆಯಿಂದಿರುವಂತೆ ಹಾಗೂ ವಿದ್ಯುತ್ ಗೋಪುರ ಏರುವುದು, ಜಾನುವಾರುಗಳನ್ನು ಗೋಪುರಕ್ಕೆ ಕಟ್ಟುವುದು, ಲೋಹದ ತಂತಿ ಎಸೆಯುವುದನ್ನು ಮಾಡುವಂತಿಲ್ಲ. ಯಾವುದೇ ಇಂಥ ದುಷ್ಕೃತ್ಯ ಎಸಗಿದಲ್ಲಿ ಅದಕ್ಕೆ ಇಲಾಖೆ ಹೊಣೆಯಲ್ಲ ಎಂದು ಎಚ್ಚರಿಸಿದೆ.
ಡಿಪ್ಲೋಮಾ ಪ್ರವೇಶಕ್ಕೆ ಅರ್ಜಿ
ರಾಯಚೂರು: ಪ್ರಸಕ್ತ ಸಾಲಿನ ಡಿಪ್ಲೋಮಾ ಪ್ರಥಮ ವರ್ಷದ ಪ್ರವೇಶಕ್ಕೆ ಅರ್ಹರಿಂದ ಅರ್ಜಿ ಕರೆಯಲಾಗಿದೆ. ಬೆಂಗಳೂರಿನ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯು ಖಾಲಿಯಿರುವ ಸ್ಥಾನಗಳಿಗೆ ಪ್ರವೇಶಕ್ಕೆ ಅರ್ಜಿ ಆಹ್ವಾನಿಸಿದ್ದು, ಎಸ್ಸೆಸ್ಸೆಲ್ಸಿ ಪಾಸಾದ ಅಭ್ಯರ್ಥಿಗಳು ಇಲಾಖೆಯ ವೆಬ್ ಸೈಟ್ ಢಿಢಿಢಿ.ಜಡ್ಛಿ.್ಞಛ್ಠ.್ಝಟಿ, ಢಿಢಿಢಿ.ಜಡಿಜ್ಞಛ್ಠಟಿಛಡಿಛ್ಞಛ.್ಝಟಿ ರಿಂದ ಅರ್ಜಿ ಪಡೆಯಬಹುದು. ಅರ್ಜಿ ಶುಲ್ಕದೊಂದಿಗೆ ಅರ್ಜಿ ಸಲ್ಲಿಸಲು ಆ.13 ಕಡೆಯ ದಿನ. ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಪಾಲಿಟೆಕ್ನಿಕ್, ರಾಯಚೂರು ಇವರನ್ನು ಸಂಪರ್ಕಿಸಲು ಕೋರಲಾಗಿದೆ.
ಇಲಾಖೆ ಪರೀಕ್ಷೆ: ನಿಷೇಧಾಜ್ಞೆ ಜಾರಿ
ರಾಯಚೂರು: ನಗರದ ಯರಮರಸ್‌ನ ಡಯಟ್ ಮತ್ತು ಆನಂದ ಪ್ರೌಢಶಾಲೆಯಲ್ಲಿ ಆ.10 ರಿಂದ ಆ.22ರವರೆಗೆ ಇಲಾಖಾ ಪರೀಕ್ಷೆಗಳು ನಡೆಯಲಿರುವ ಹಿನ್ನೆಲೆ ಮುಂಜಾಗ್ರತಾ ಕ್ರಮವಾಗಿ ಪರೀಕ್ಷಾ ಕೇಂದ್ರದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಪರೀಕ್ಷೆ ಕೇಂದ್ರದ 200 ಮೀಟರ್ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿರುವ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರು, ಪರೀಕ್ಷೆ ಕೇಂದ್ರದಲ್ಲಿ ನಿಯೋಜಿಸಿದ ಸಿಬ್ಬಂದಿ ಮತ್ತು ಪರೀಕ್ಷಾರ್ಥಿಗಳನ್ನು ಹೊರತುಪಡಿಸಿ ಯಾರೂ ಪ್ರವೇಶಿಸುವಂತಿಲ್ಲ. ಕೇಂದ್ರದ ಹತ್ತಿರದ ಜೆರಾಕ್ಸ್ ಅಂಗಡಿ, ಸೈಬರ್ ಕೆಫೆ ಮುಚ್ಚಲು ಸೂಚಿಸಿದ್ದಾರೆ.
16ರಂದು ಸಭೆ
ರಾಯಚೂರು: ಇಲ್ಲಿನ ಜಿಲ್ಲಾ ಪಂಚಾಯತಿ ಕೆಡಿಪಿ ಸಭೆ ಆ.16ರಂದು ಕರೆಯಲಾಗಿದೆ. ಅಂದು ಬೆಳಗ್ಗೆ 11ಕ್ಕೆ ನಗರದ ಜಿಪಂ ಸಭಾಂಗಣದಲ್ಲಿ ಜಿಪಂ ಅಧ್ಯಕ್ಷೆ ಲಲಿತಮ್ಮ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಲಿದೆ ಎಂದು ಜಿಪಂ ಸಿಇಒ ಕಚೇರಿ ಪ್ರಕಟಣೆ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

