ಉತ್ತಮ ಸಂದೇಶ ನೀಡುವ ಚಿತ್ರಗಳ ಕೊರತೆ: ವಿಷಾದ
ಕನ್ನಡಪ್ರಭ ವಾರ್ತೆ ರಾಯಚೂರು ಆ.11
ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳ ನಿರ್ಮಾಣದ ಕೊರತೆಯಿದೆ. ಆಗೊಮ್ಮೆ ಈಗೊಮ್ಮೆ ಬಂದು ಹೋಗುವ ಉತ್ತಮ ಚಿತ್ರಗಳು ಪ್ರೇಕ್ಷಕನ ಗಮನಕ್ಕೆ ಬರುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರಗಳು ಸೋಲುತ್ತಿವೆ ಎಂದ ವಿಜಯ, ಬಿಗ್ಬಾಸ್ ಕಾರ್ಯಕ್ರಮದಿಂದ ಸಮಾಜದಲ್ಲಿ ಬದುಕುವ ಬಗೆಯನ್ನು ಅರಿತಿದ್ದಾಗಿ ತಿಳಿಸಿದರು.
ನಗರದಲ್ಲಿ ಭಾನುವಾರ ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಹಿಂದೆ ಡಾ. ರಾಜಕುಮಾರ್, ವಿಷ್ಣುವರ್ಧನ್ ಸೇರಿ ಅನೇಕ ಹಿರಿಯ ನಟರ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವಂಥ ಚಲನಚಿತ್ರಗಳಾಗಿರುತ್ತಿದ್ದವು. ಆದರೆ ಇಂದಿನ ದಿನಗಳಲ್ಲಿ ಅಂಥ ಚಿತ್ರಗಳ ಕೊರತೆಯಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಸಂಗತಿ ಎಂದರು.
ಸೌಹಾರ್ದತೆಯ ಅರಿವಾಗಿದೆ: ಬಿಗ್ಬಾಸ್ ಕಾರ್ಯಕ್ರಮದ ಗೆಲವಿನಿಂದ ತಮ್ಮ ಬದುಕಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ಸಮಾಜದಲ್ಲಿರುವ ವಿವಿಧ ಜಾತಿ ಜನಾಂಗದವರೊಂದಿಗೆ ಸೌಹಾರ್ದಯುತವಾಗಿ ಬದುಕುವುದು ಹೇಗೆ ಎಂಬುದು ಬಿಗ್ಬಾಸ್ ಕಾರ್ಯಕ್ರಮದಿಂದ ತಮಗೆ ಅರಿವಾಯಿತೆಂದು ತಿಳಿಸಿದರು.
ಬಿಗ್ಬಾಸ್ ಕಾರ್ಯಕ್ರಮದ ನಂತರ ಅವಕಾಶಗಳು ಬರುತ್ತಿದ್ದು, ಉತ್ತಮ ಚಿತ್ರಗಳಲ್ಲಿ ಮಾತ್ರ ಅಭಿನಯಿಸುವ ಆಸೆ ತಮ್ಮದು, ಶಿವಯೋಗಿ ಪುಟ್ಟಯ್ಯಜ್ಜ ಎಂಬ ಸಿನೆಮಾ ಮಾಡುತ್ತಿರುವುದಾಗಿ ತಿಳಿಸಿ ಎಲ್ಲ ಬಗೆಯ ಪಾತ್ರಗಳನ್ನು ಮಾಡುವುದು ತಮ್ಮಂಥ ಕಲಾವಿದರ ಬಯಕೆ ಎಂದರು.
ಆಯ್ಕೆಯಲ್ಲಿ ಸೋಲು: ಉತ್ತಮ ಚಿತ್ರಗಳನ್ನು ನೀಡಿದಲ್ಲಿ ಖಂಡಿತವಾಗಿಯೂ ಕನ್ನಡಿಗರು ಚಿತ್ರ ವೀಕ್ಷಿಸಲು ಬರುತ್ತಾರೆ. ಕಳಪೆ ಚಿತ್ರಗಳು, ಸಿನಿಮಾ ಮಾಡಲೆಂದೇ ರಚಿಸಿದ ಕಥೆಗಳಿಂದಾಗಿಯೇ ಕನ್ನಡ ಚಿತ್ರರಂಗ ಸೋಲಿನ ಸರಮಾಲೆಗೆ ಸಿಲುಕಿ ಸಂಕಷ್ಟ ಎದುರಿಸುತ್ತಿದೆ. ಕಥೆಗಳಿಗೆ ನಮ್ಮಲ್ಲಿ ಕೊರತೆಯಿಲ್ಲ. ಆದರೆ ಆಯ್ಕೆಯಲ್ಲಿ ಸೋಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ವಿಜೆ ಇಂಟರ್ ನ್ಯಾಷನಲ್ ಎಂಟರ್ಟೈನ್ಮೆಂಟ್ ಸಂಸ್ಥೆಯ ಮುಖ್ಯಸ್ಥ ವೀರೇಂದ್ರ ಜಲ್ದಾರ್ ಮಾತನಾಡಿ, ಸಂಸ್ಥೆಯಿಂದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಗುತ್ತಿದೆ. ಒಟ್ಟು 480 ಜನರ ಪೈಕಿ 20 ಜನರನ್ನು ತಜ್ಞರ ಸಮಿತಿ ಆಯ್ಕೆ ಮಾಡಿದೆ. ಪ್ರತಿಭಾವಂತರಿಗೆ ಸನ್ಮಾನಿಸುವ ಮೂಲಕ ಸಮಾಜದಲ್ಲಿ ನೆಲೆಸಿರುವ ಇನ್ನಿತರರಿಗೆ ಸ್ಫೂರ್ತಿ ತುಂಬುವ ಕಾರ್ಯವನ್ನು ಸಂಸ್ಥೆ ಮಾಡುತ್ತಿದೆ ಎಂದರು.
ಈ ವೇಳೆ ಕಿರುತೆರೆ ನಿರೂಪಕಿ ಭಾಗ್ಯಲಕ್ಷ್ಮಿ, ಸಹಾಯಕ ನಿರ್ದೇಶಕ ಭರತ್ ಸೇರಿ ಅನೇಕರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

