ನೀರಾವರಿ ಯೋಜನೆ ಹಣ ಸದ್ಬಳಕೆ ಮಾಡಿಕೊಳ್ಳಿ
ಕೆಳ ಭಾಗದ ರೈತರಿಗೆ ನೀರು ದೊರಕಲು ಸುರಂಗ ದೊಡ್ಡದು ಮಾಡಲು ಸಿಎಂ ಜೊತೆ ಚರ್ಚೆ: ಬಾದರ್ಲಿ
ಸಿಂಧನೂರು: ಸರ್ಕಾರ ನೀರಾವರಿ ಯೋಜನೆಗಳಿಗೆ ಆದ್ಯತೆ ನೀಡಲು ಮುಂದಾಗಿದೆ. ಕೃಷ್ಣಾ ಹಾಗೂ ತುಂಗಭದ್ರಾ ವ್ಯಾಪ್ತಿಯ ನೀರಾವರಿ ಯೋಜನೆಗಳಿಗೆ ಪ್ರತಿವರ್ಷ ರು. 10 ಸಾವಿರ ಕೋಟಿ ನೀಡುವುದಾಗಿ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಆ ಹಣವನ್ನು ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಕರೆ ನೀಡಿದರು.
ಅವರು ತಾಲೂಕಿನ ಅಲಬನೂರು ಗ್ರಾಮದಲ್ಲಿ ಶಾಸಕರಾದ ನಂತರ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ್ದ ಅವರನ್ನು ಗ್ರಾಮಸ್ಥರ ಆತ್ಮೀಯವಾಗಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ತುಂಗಭದ್ರಾ ಡ್ಯಾಂ ತುಂಬಿದರೂ ಕೆಳ ಭಾಗಕ್ಕೆ ನೀರು ದೊರೆಯುತ್ತಿಲ್ಲ. ಎಡದಂಡೆ ನಾಲೆಯ 21 ಮೈಲ್ ಹತ್ತಿರದ ಇರುವ ಪಾಪಯ್ಯ ಸುರಂಗ ಮಾರ್ಗದಲ್ಲಿ 3200 ಕ್ಯುಸೆಕ್ ನೀರು ಮಾತ್ರ ಪಡೆಯಬಹುದು. ಇದರಿಂದ ಕೆಳಭಾಗಕ್ಕೆ ನೀರು ಸಿಗುತ್ತಿಲ್ಲ.
ಸಾಕಷ್ಟು ನೀರು: ಸುರಂಗ ಮಾರ್ಗವನ್ನು ದೊಡ್ಡದು ಮಾಡುವ ಬಗ್ಗೆ ಈಗಾಗಲೇ ಮಂತ್ರಿಗಳೊಂದಿಗೆ ಚರ್ಚಿಸಿದ್ದು, ಅಗತ್ಯ ರು. 60-70 ಕೋಟಿ ನೀಡಲು ಒಪ್ಪಿದ್ದಾರೆ. ಸುರಂಗ ಮಾರ್ಗವನ್ನು ದೊಡ್ಡದು ಮಾಡಿದರೆ ಮಾತ್ರ ಕೆಳ ಭಾಗದ ರೈತರಿಗೂ ಒಂದು ಬೆಳೆಗೆ ಸಾಕಾಗುಷ್ಟು ನೀರು ಪಡೆಯಬಹುದು ಎಂದರು.
ಸಿಂಧನೂರು ತಾಲೂಕಿನ ಕೆಳಭಾಗದಲ್ಲಿ ಬರುವ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಕೆರೆಗಳನ್ನು ಮಾಡಲಾಗಿದ್ದು, ನೀರು ಶುದ್ಧೀಕರಿಸಲು ಎಲ್ಲಾ ಕೆರೆಗಳಿಗೆ ಶುದ್ಧೀಕರಣ ಘಟಕ ಅಳವಡಿಸಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿ.ಪಂ. ಸದಸ್ಯ ಚಂದೂಸಾಬ್ ಬಳ್ಳೂರು, ತಾ.ಪಂ. ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ವಕೀಲರು, ಮುಖಂಡರಾದ ಮಲ್ಲನಗೌಡ ಕನ್ನಾರಿ, ದೊಡ್ಡಬಸನಗೌಡ ಬಾದರ್ಲಿ, ಸತ್ಯಪ್ಪ ಒಳಬಳ್ಳಾರಿ, ವೀರೇಶಪ್ಪ ಮಾಡಶಿರವಾರ, ಗ್ರಾ.ಪಂ.ಸದಸ್ಯರಾದ ಅಮರೇಶ ಇಡಪನೂರು, ಮಲ್ಲಿಕಾರ್ಜುನ, ಮುಖಂಡರಾದ ವೆಂಕೋಬರಾವ್ ಕುಲಕರ್ಣಿ, ಜಗನ್ನಾಥರಾವ್ ಕುಲಕರ್ಣಿ ಮತ್ತಿತರರು ಇದ್ದರು.
'ರೈತರಿಗೆ ಹನಿ ನೀರಾವರಿ ವರದಾನ'
ಕನ್ನಡಪ್ರಭ ವಾರ್ತೆ ಸಿಂಧನೂರು ಆ.11
ತಾಲೂಕಿನ ಒಣ ಬೇಸಾಯದ ಜಮೀನುಗಳಿಗೆ ತುಂತು ಹನಿ ನೀರಾವರಿ ಯೋಜನೆಯನ್ನು ಜಾರಿಗೊಳಿಸುವ ಕುರಿತು ಸಂಬಂಧಪಟ್ಟ ಮಂತ್ರಿಗಳೊಂದಿಗೆ ಚರ್ಚೆಸಲಾಗಿದೆ. ಇದರಿಂದ ಕೆಳಭಾಗದ ರೈತರಿಗೆ ವರದಾನವಾಗಲಿದೆ ಎಂದು ಶಾಸಕ ಹಂಪನಗೌಡ ಬಾದರ್ಲಿ ಹೇಳಿದರು.
ಅವರು ಶಾಸಕರಾದ ನಂತರ ಪ್ರಥಮ ಬಾರಿಗೆ ಬೆಳಗುರ್ಕಿ ಗ್ರಾಮಕ್ಕೆ ಭೇಟಿ ನೀಡಿದ್ದ ಬಾದರ್ಲಿಯವರನ್ನು ಸಾರ್ವಜನಿಕರು ನೀಡಿದ ಹೃದಯಸ್ಪರ್ಶಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಕಡಿಮೆ ಬಡ್ಡಿ: ಬೆಳಗುರ್ಕಿ, ಗೋನವಾರ, ಬಾದರ್ಲಿ,ರಾಗಲಪರ್ವಿ, ರಾಮತ್ನಾಳ ಸೇರಿದಂತೆ ಸುತ್ತಮುತ್ತಲ 70 ಸಾವಿರ ಎಕರೆ ಭೂಮಿಯನ್ನು ಈ ಯೋಜನೆ ವ್ಯಾಪ್ತಿಗೆ ಒಳಪಡಿಸಲು ಉದ್ದೇಶಿಸಲಾಗಿದೆ. ಇದಲ್ಲದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರೈತರಿಗೆ ರು. 3 ಲಕ್ಷವನ್ನು ಕಡಿಮೆ ಬಡ್ಡಿದರದಲ್ಲಿ ಸಾಲ, ಸಿಂಧನೂರು ನಗರಕ್ಕೆ 24 ಗಂಟೆಗಳ ಕಾಲ ಶುದ್ಧ ಕುಡಿವ ನೀರಿನ ವ್ಯವಸ್ಥೆ, ರಸ್ತೆ, ಒಳಚರಂಡಿ ಮತ್ತಿತರ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.
ಅನುದಾನ: ಬೆಳಗುರ್ಕಿ ಗ್ರಾಮದಲ್ಲಿ ಸುವರ್ಣ ಗ್ರಾಮ ಯೋಜನೆಯಲ್ಲಿ ಸಿಸಿ ರಸ್ತೆಗಳು, ಚರಂಡಿ ವ್ಯವಸ್ಥೆಗಳು ಆಗಿವೆ. ಆದರೆ ಅಂಗನವಾಡಿ ಕಟ್ಟಡ, ಹೊಸ ಕನ್ನಾರಿಯಲ್ಲಿ ಸಮುದಾಯ ಭವನ, ಮಹಿಳಾ ಸಾಮಥ್ರ್ಯ ಭವನದ ಅಭಿವೃದ್ಧಿಗೆ ಅನುದಾನ, ಸರ್ಕಾರಿ ಉನ್ನತಿಕರಿಸಿದ ಹಿರಿಯ ಪ್ರಾಥಮಿಕ ಶಾಲೆಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡಬೇಕಾಗಿದೆ ಎಂದು ಗ್ರಾಮಸ್ಥರು ಸಲ್ಲಿಸಿದ ಮನವಿ ಪತ್ರಕ್ಕೆ ಪ್ರತಿಕ್ರಿಯಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಪಂ ಸದಸ್ಯ ಚಂದೂಸಾಬ ಮುಳ್ಳೂರು, ಎಪಿಎಂಸಿ ಅಧ್ಯಕ್ಷ ಸಣ್ಣ ಕರಿಯಪ್ಪ ಹರೇಟನೂರು, ತಾ.ಪಂ. ಉಪಾಧ್ಯಕ್ಷ ನಾಗಪ್ಪ ಗೋಮರ್ಸಿ, ಗ್ರಾ.ಪಂ. ಅಧ್ಯಕ್ಷೆ ಪೂರ್ಣಮ್ಮ ಮುದುಕಪ್ಪ, ಗ್ರಾಪಂ ಸದಸ್ಯ ಶಿವರೆಡ್ಡಿ, ಎಸ್‌ಡಿಎಂಸಿ ಅಧ್ಯಕ್ಷ ಕನಕಪ್ಪ, ಕಾಂಗ್ರೆಸ್ ಮುಖಂಡರಾದ ಎಂ. ಸತ್ಯನಗೌಡ ವಳಬಳ್ಳಾರಿ, ಮಲ್ಲನಗೌಡ ಕನ್ನಾರಿ, ವೀರೇಶಪ್ಪ ಮಾಡಸಿರವಾರ, ಭೀಮನಗೌಡ ಗದ್ದಡಕಿ, ಜಿಲಾನಿಸಾಬ, ಎಂ. ಮರೇಗೌಡ ಮತ್ತಿತರರು ಪಾಲ್ಗೊಂಡಿದ್ದರು. ಗಂಗಾಧರ ವೀರಘಂಟಿ ಮಾತನಾಡಿ, ಗ್ರಾಮದ ಸಮಸ್ಯೆಗಳ ಕುರಿತು ಶಾಸಕರ ಗಮನ ಸೆಳೆದರು.
ಶಾಂತಮ್ಮ, ಶಿಲ್ಪಾ ಪ್ರಾರ್ಥಿಸಿದರು. ಶಾಲೆ ಮುಖ್ಯಗುರು ಶಂಕರರಾವ್ ಸ್ವಾಗತಿಸಿ, ವಂದಿಸಿದರು. ಗ್ರಾಮದ ಮುಖಂಡರು ಶಾಲಾ ಸುಧಾರಣಾ ಸಮಿತಿಯ ಸದಸ್ಯರು ಶಾಸಕ ಹಂಪನಗೌಡ ಬಾದರ್ಲಿ ಅವರನ್ನು ಸನ್ಮಾನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

